ಬೆಂಗಳೂರು: ಆಸ್ಟ್ರೇಲಿಯಾ ಮಾಜಿ ಬೌಲರ್ ಬ್ರೆಟ್ ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಬೌಲಿಂಗ್‍ಗೆ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೀ, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ ಕೃಷ್ಣ, ನವ್‍ದೀಪ್ ಸೈನಿರ ಬೌಲಿಂಗ್ ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
700 ಅಂತರಾಷ್ಟ್ರೀಯ ವಿಕೆಟ್‍ಗಳನ್ನು ಪಡೆದಿರುವ ಬ್ರೆಟ್ ಲೀ ಭಾರತೀಯ ಬೌಲರ್ ಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಬ್ಬ ಉತ್ತಮ ಬೌಲರ್ ವೇಗದೊಂದಿಗೆ ಉತ್ತಮ ಓಟಗಾರ ಆಗಿರಬೇಕು. 160 ಕೆ ವೇಗದಲ್ಲಿ ಬೌಲ್ ಮಾಡುವ ಎಲ್ಲಾ ಬೌಲರ್ ಗಳು ಉತ್ತಮ ಆಥ್ಲೇಟಿಕ್ ಪ್ಲೇಯರ್ಸ್ ಆಗಿರುತ್ತಾರೆ. ಈ ಕಾರ್ಯಕ್ರಮದಲ್ಲಿ ನನಗೆ ಭಾರತದ ಮುಂದಿನ ವೇಗದ ಬೌಲರ್ ಆಯ್ಕೆ ಮಾಡುವ ಅವಕಾಶ ಸಿಕ್ಕಿದ್ದು, ಭಾರತದ ಬೌಲರ್ ಗಳನ್ನು ತಮ್ಮನ್ನು ಆಕರ್ಷಿಸಿದ್ದಾರೆ ಎಂದರು.
Advertisement
Advertisement
ನನ್ನಂತೆಯೇ ಹೆಚ್ಚು ವೇಗವಾಗಿ ಚೆಂಡನ್ನು ಎಸೆಯುವ ಸಾಮರ್ಥ್ಯವನ್ನು ಕೃಷ್ಣ, ಸೈನಿ ಹೊಂದಿದ್ದಾರೆ ಎಂದು ತಿಳಿಸಿದ್ದು, ಕೃಷ್ಣ 145ಕೆ ವೇಗದಲ್ಲಿ ಬೌಲ್ ಮಾಡಬಲ್ಲರು. ಸೈನಿ ಕೂಡ ಭರವಸೆಯ ಆಟಗಾರ. ಈ ಬಾರಿಯ ಟೂರ್ನಿಯಲ್ಲಿ ಇಬ್ಬರು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇಬ್ಬರು ಆಟಗಾರರು ತಮ್ಮ ಓಟದಲ್ಲಿ ಮತ್ತಷ್ಟು ಸುಧಾರಣೆ ಕಂಡರೆ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಪ್ರಸಿದ್ಧ ಭಾರತ ಭವಿಷ್ಯದ ವೇಗದ ಬೌಲರ್ ಆಗಲಿದ್ದಾರೆ ಎಂದು ತಿಳಿಸಿದರು.
Advertisement
ಐಪಿಎಲ್ ಟೂರ್ನಿಯಲ್ಲಿ ಪ್ರಸಿದ್ಧ ಕೃಷ್ಣ ಸೈನಿ ಆರ್ ಸಿಬಿ ಪರ ಆಡುತ್ತಿದ್ದು, ತಮ್ಮ ಲೈನ್ ಅಂಡ್ ಲೆಂಥ್ ಬೌಲಿಂಗ್ ಮಾಡಿ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದಿದ್ದು, ವಿಶ್ವಕಪ್ ಸ್ಟಾಂಡ್ ಬೈ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.