ಬೆಂಗಳೂರು: ಉಸಿರಾಟದ ಸಮಸ್ಯೆಯ ನಡುವೆಯೂ ಕೆಲ ಮತದಾರರು ಆಕ್ಸಿಜನ್ ಮಾಸ್ಕ್ (Oxygen Mask) ಹಾಕಿಕೊಂಡು ಬಂದು ಮತದಾನ (Voting) ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಇಂಪ್ಯಾಕ್ಟ್ ಕಾಲೇಜ್ ಬೂತ್‌ನಲ್ಲಿ 62 ವರ್ಷದ ವೃದ್ಧರೊಬ್ಬರು ಉಸಿರಾಟ ಸಮಸ್ಯೆಯಿದ್ದರೂ ಮತ ಹಾಕುವ ಸಲುವಾಗಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಬಂದು ಮತ ಹಾಕಿದ್ದಾರೆ. ಇದನ್ನೂ ಓದಿ: ಕರ್ತವ್ಯ ನಿರತ ಚುನಾವಣಾ ಮಹಿಳಾ ಸಿಬ್ಬಂದಿ ನಿಧನ
ಇನ್ನೊಂದೆಡೆ ರಾಜಾಜಿನಗರ ಎರಡನೇ ಬ್ಲಾಕ್‌ನ ನಿವಾಸಿ ಗೀತಾ (83) ಕಳೆದ ಮೂರು ವರ್ಷಗಳಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುತ್ತಿದ್ದಾರೆ. ಇದೇ ವೇಳೆ ಅವರು ಹರಿದಾಸ ಸಾಹಿತ್ಯ ಕುರಿತು ಪಿಹೆಚ್‌ಡಿ ಮಾಡುತ್ತಿದ್ದಾರೆ. ಕಳೆದ ತಿಂಗಳು ಉತ್ತರಾಧಿಮಠದವರು ನಡೆಸಿದ ಹರಿದಾಸ ಸಾಹಿತ್ಯ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಹರಿದಾಸ ಸಾಹಿತ್ಯ ಕುರಿತು ಪಾಠ ಮಾಡುತ್ತಾರೆ. ಚುನಾವಣಾ ಪ್ರಚಾರಕ್ಕೆ ಹೋದಾಗ ನಾನು ವೋಟು ಹಾಕಬೇಕು. ಆಕ್ಸಿಜನ್ ಸಿಲಿಂಡರ್ ಇರುವ ಅಂಬುಲೆನ್ಸ್ ವ್ಯವಸ್ಥೆ ಮಾಡು ಎಂದು ಕಟ್ಟಪ್ಪಣೆ ಮಾಡಿದರು. ಅದೀಗ ಜಾರಿಗೊಂಡಿದೆ. ಅದೇ ರೀತಿ ಗೀತಮ್ಮ ವೋಟು ಹಾಕಿ ಎರಡೂ ಕೈ ಎತ್ತಿ ಜೈ ಶ್ರೀರಾಮ್ ಎಂದಿದ್ದಾರೆ. ಇದನ್ನೂ ಓದಿ: ಮತ ಹಾಕಲು ಬಂದಾಗ ಹೃದಯ ಸ್ತಂಭನ- ಮಹಿಳೆಯ ಪ್ರಾಣ ಉಳಿಸಿದ ವೈದ್ಯರು
ಇನ್ನು ದಾಸರಹಳ್ಳಿಯಲ್ಲಿ ವೃದ್ಧ ಮಹಿಳೆಯೊಬ್ಬರು ಆಸ್ಪತ್ರೆಯಿಂದ ಆಕ್ಸಿಜನ್ ಹಾಕಿಕೊಂಡು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ನೀಲಂ ಸಿನ್ಹಾ ಎಂಬ ವೃದ್ಧೆ ಶ್ವಾಸಕೋಶದ ಖಾಯಿಲೆಯಿಂದ ಬಳಲುತ್ತಿದ್ದು, ಉಸಿರಾಟದ ತೊಂದರೆ ಇದ್ದರೂ ಸಹ ಆಕ್ಸಿಜನ್ ಹಾಕಿಕೊಂಡು ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯಲ್ಲಿ ತನ್ನ ಮತ ಚಲಾಯಿಸಿದ್ದಾರೆ. ಇದನ್ನೂ ಓದಿ: ನೋಟಾಗಿಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ನಿಷೇಧಿಸಿ, ಮರು ಚುನಾವಣೆಗೆ ನಿರ್ದೇಶನ ಕೋರಿ ಅರ್ಜಿ