ಲಂಡನ್: ಮಹಿಳೆಯರು ಆಭರಣ ಪ್ರಿಯರು, ಡ್ರೆಸ್‍ಗೆ ತಕ್ಕಂತೆ ಹೇರ್ ಸ್ಟೈಲ್, ಬಳೆ, ಮೆಕಪ್ ಮಾಡಿಕೊಳ್ಳುವ ಮಹಿಳೆಯರು ತಾವು ತೊಡುವ ಆಭರಣಗಳಿಗೂ ಅಷ್ಟೇ ಮಹತ್ವವನ್ನು ಕೊಡುತ್ತಾರೆ. ಗೋಲ್ಡ್, ಪ್ಲಾಸ್ಟಿಕ್ ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಆಭರಣ ತಯಾರಿಸುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಎದೆ ಹಾಲಿನಿಂದ ಆಭರಣ ತಯಾರಿಸುತ್ತಾಳೆ.
Advertisement
ತಾಯಿ ಎದೆ ಹಾಲಿನಿಂದ ಆಭರಣ ಮಾಡುವ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಲಂಡನ್ ಮೂಲದ ಸಾಫಿಯಾ ರಿಯಾದ್ ಎದೆ ಹಾಲಿನಿಂದ ಆಭರಣ ತಯಾರಿ ಮಾಡುತ್ತಿದ್ದಾರೆ. ರಿಯಾದ್ ಮೂರು ಮಕ್ಕಳ ತಾಯಿಯಾಗಿದ್ದಾರೆ. ಆಭರಣ ತಯಾರಿಸುವ ನನ್ನ ಈ ಕೆಲಸಕ್ಕೆ ನನ್ನ ಪತಿ ಆದಂ ಅವರ ಬೆಂಬಲವೂ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೇಕಿದ್ರೆ ʻದಿ ಕಾಶ್ಮೀರ್ ಫೈಲ್ಸ್ʼನ್ನು ಯೂಟ್ಯೂಬ್‌ಗೆ ಹಾಕಲಿ: ತೆರಿಗೆ ವಿನಾಯಿತಿ ಕೇಳಿದ ಬಿಜೆಪಿಗೆ ಕೇಜ್ರಿವಾಲ್ ಟಾಂಗ್
Advertisement
ವಿಶೇಷ ಸಂದರ್ಭದಲ್ಲಿ ನಾವು ತಾಯಿ ಎದೆ ಹಾಲನ್ನು ಗಟ್ಟಿಯಾಗಿಸಿ ಉಂಗುರುದ ಹರಳು, ಸರದ ಡಾಲರ್, ಕಿವಿ ಒಲೆ ಸೇರೆದಂತೆ ಅನೇಕ ರೀರಿತ ಆಭರಣ ಮಾಡಿದ್ದೇವೆ. ಇದರ ಬೆಲೆ ಬಹಳ ದುಬಾರಿಯಾಗಿದೆ. 2023ರ ಒಳಗಾಗಿ ಆಭರಣಗಳಿಂದ ಕನಿಷ್ಟ 15 ಕೋಟಿಯಾದರೂ ಗಳಿಸಬಹುದು ಎಂದು ಅಂದಾಜು ಇದೆ ಎಂದು ತಯಾರಕರು ಹೇಳಿದ್ದಾರೆ.
Advertisement
Advertisement