ನಟ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ (Sanya Iyer) ಮನಸ್ತಾಪ ಬಿಗ್ ಬಾಸ್ (Bigg Boss Season 9) ನೋಡುಗರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಚಿಕ್ಕ ಚಿಕ್ಕ ವಿಷಯಕ್ಕೂ ರೂಪೇಶ್ ಮೇಲೆ ಸಾನ್ಯ ಕೋಪ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ರೂಪೇಶ್ ಸದಾ ತನ್ನ ಜೊತೆಯೇ ಇರಬೇಕು ಎಂದು ಸಾನ್ಯ ಬಯಸುತ್ತಿದ್ದಾಳೆ. ಈ ಕಿರಿಕಿರಿ ಕೇವಲ ನೋಡುಗರಿಗೆ ಮಾತ್ರವಲ್ಲ, ಸ್ವತಃ ರೂಪೇಶ್ ತಟ್ಟಿದೆ. ಹಾಗಾಗಿಯೇ ಸಾನ್ಯಾ ಮೇಲೆ ರೂಪೇಶ್ ಅಸಮಾಧಾನ ತೋಡಿಕೊಂಡಿದ್ದಾರೆ. ‘ದಯವಿಟ್ಟು ನನ್ನಿಂದ ದೂರ ಇರು’ ಎಂದು ಬಾಯ್ಬಿಟ್ಟೂ ಹೇಳಿದ್ದಾರೆ.
ರೂಪೇಶ್ ಶೆಟ್ಟಿ (Rupesh Shetty) ಮತ್ತು ಸಾನ್ಯಾ ಐಯ್ಯರ್ ಇಬ್ಬರೂ ಬಿಗ್ ಬಾಸ್ ಮನೆಯ ‘ದಿ ಬೆಸ್ಟ್ ಜೋಡಿ’ ಎಂದೇ ಬಿಂಬಿಸಲಾಗಿತ್ತು. ಇಬ್ಬರ ನಡುವೆ ರಿಲೇಶನ್ ಶಿಪ್ ಇದೆ ಎಂದೂ ಹಲವರು ಮಾತನಾಡಿಕೊಂಡರು. ಅವರೂ ಹಾಗೆಯೇ ಇದ್ದರು. ಅವರ ಮಾತುಕತೆ, ಮನೆಯಲ್ಲಿ ನಡೆದುಕೊಳ್ಳುತ್ತಿದ್ದ ರೀತಿ ಥೇಟ್ ಪ್ರೇಮಿಗಳಂತೆಯೇ ಇರುತ್ತಿದ್ದವು. ಸದಾ ಅಂಟಿಕೊಂಡೇ ಇರುತ್ತಿದ್ದ ಜೋಡಿಯನ್ನು ಅಗಲುವಂತೆ (Break Up) ಮಾಡಿದ್ದು ಕಿಚ್ಚ ಸುದೀಪ್. ಅಲ್ಲಿಂದ ರೂಪೇಶ್ ವರಸೆಯೇ ಬದಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಮೈಮರೆತು ಮಲಗಿದ್ದ ಈ ಜೋಡಿ ಕಂಡು ಸುದೀಪ್ ಕಿಡಿಕಾರಿದ್ದರು. ಬಿಗ್ ಬಾಸ್ ಮನೆ ಇರುವುದು ಅಂಥದ್ದಕ್ಕಲ್ಲ ಎಂದೂ ಎಚ್ಚರಿಸಿದ್ದರು. ಸುದೀಪ್ ಆಡಿದ ಮಾತಿಗೆ ರೂಪೇಶ್ ಕಣ್ಣೀರೂ ಕೂಡ ಹಾಕಿದ್ದರು. ಅಲ್ಲಿಂದ ರೂಪೇಶ್ ಬದಲಾಗುತ್ತಾ ಬರುತ್ತಿದ್ದಾರೆ. ಸಾಧ್ಯವಾದಷ್ಟು ಸಾನ್ಯರಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸಾನ್ಯಾ ಮಾತ್ರ ರೂಪೇಶ್ ನಿಂದ ದೂರ ಹೋಗುತ್ತಿಲ್ಲ. ರೂಪೇಶ್ ದೂರ ಹೋದಷ್ಟು ಸಾನ್ಯ ಮತ್ತಷ್ಟು ಹತ್ತಿರಕ್ಕೆ ಬರುತ್ತಿದ್ದಾಳೆ. ಇದು ರೂಪೇಶ್ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವಂತಾಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ
ಊಟ ಮಾಡುತ್ತಿದ್ದ ರೂಪೇಶ್ ಬಳಿ ಬಂದು ತನ್ನನ್ನು ಬಿಟ್ಟು ಊಟ ಮಾಡಿದ್ದಕ್ಕೆ ಸಾನ್ಯ ಕೋಪಿಸಿಕೊಳ್ಳುತ್ತಾಳೆ. ಪದೇ ಪದೇ ಯಾಕೆ ಹೀಗೆ ನನ್ನನ್ನು ನೋಯಿಸ್ತೀಯಾ ಎಂದು ಕೇಳುತ್ತಾಳೆ. ಉದ್ದೇಶ ಪೂರ್ವಕವಾಗಿಯೇ ನೀನು ಹೀಗೆ ಮಾಡ್ತಿದ್ದೀಯಾ ಎಂದು ಆರೋಪಿಸುತ್ತಾಳೆ. ಅದರಲ್ಲೂ ತನ್ನನ್ನು ಬಿಟ್ಟು ರೂಪೇಶ್ ಊಟ ಮಾಡಿದ್ದು, ಸಾನ್ಯಾಗೆ ಅಪಾರ ನೋವು ತಂದಿದೆ. ಅದನ್ನು ಹೇಳಿಯೂ ಕೊಳ್ತಾಳೆ. ಆದರೆ, ರೂಪೇಶ್ ಮಾತ್ರ ಆಕೆಯ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಸಾನ್ಯಳಿಂದ ದೂರ ಇರುವುದಕ್ಕಾಗಿಯೇ ಈ ರೀತಿ ಮಾಡುತ್ತಿದ್ದಾರೆ. ಆದರೆ, ಸಾನ್ಯಾಗೆ ಮಾತ್ರ ಇನ್ನೂ ಅದು ಅರ್ಥವಾಗುತ್ತಿಲ್ಲ. ಬಹುಶಃ ರೂಪೇಶ್ ದೂರ ಇರುವ ಮೂಲಕ ಸಾನ್ಯಾರಿಂದ ಸ್ನೇಹ ಕಡಿದುಕೊಳ್ಳುವ ಸೂಚನೆಯನ್ನಂತೂ ಕೊಡುತ್ತಿದ್ದಾರೆ.