ಸಂಚಾರಿ ರೂಲ್ಸ್ ಬ್ರೇಕ್: ಅರೆಸ್ಟ್ ಆದೆ ಎಂದು ಫೋಟೋ ಹಾಕಿದ ಅಮಿತಾಭ್

Public TV
1 Min Read
amitabh

ಮೊನ್ನೆಯಷ್ಟೇ ಹೆಲ್ಮೆಟ್ ಧರಿಸದೇ ಬೈಕ್ ಹಿಂದೆ ಕೂತು ಸವಾರಿ ಮಾಡಿ ಟ್ರೋಲ್ ಆಗಿದ್ದ ಅಮಿತಾಭ್ ಬಚ್ಚನ್ (Amitabh Bachchan), ಇದೀಗ ಪೊಲೀಸ್ (Police) ವ್ಯಾನ್ ಸಮೇತ ಮತ್ತೊಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದ ಜೊತೆ ‘ಅರೆಸ್ಟ್’ (Arrest) ಎಂದು ಬರೆದುಕೊಂಡಿದ್ದಾರೆ. ಈ ರೀತಿ ಬರೆದುಕೊಂಡಿದ್ದು ಅಮಿತಾಭ್ ಅಭಿಮಾನಿಗಳಿಗೆ ಶಾಕ್ ಆಗಿದೆ. ಜೊತೆಗೆ ಇದೇನಾದರೂ ಗಿಮಿಕ್ ಇರಬಹುದಾ ಎನ್ನುವ ಅನುಮಾನವನ್ನೂ ಹುಟ್ಟು ಹಾಕಿದೆ.

Amitabh Bachchan

ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ್ದ ವಿಚಾರಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಿಯೆ ನೀಡಿದ್ದ ಬಿಗ್ ಬಿ (Big B), ಅದು ರಸ್ತೆ ಮೇಲೆ ಸವಾರಿ ಮಾಡಿದ ಫೋಟೋ ಅಲ್ಲ, ಶೂಟಿಂಗ್ ಸಂದರ್ಭದ್ದು ಎಂದು ಸಮಜಾಯಿಸಿ ನೀಡಿದ್ದರು. ರಸ್ತೆ ನಿಯಮವನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೂ, ಪೊಲೀಸ್ ವ್ಯಾನ್ ಜೊತೆ ನಿಂತು ಫೋಟೋ ತಗೆಸಿಕೊಂಡು ಅರೆಸ್ಟ್ ಎಂದು ಬರೆದದ್ದು ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ. ಇದನ್ನೂ ಓದಿ:ಕಂಗನಾ ಸಿನಿಮಾ ನೋಡಿ ಕಣ್ಣೀರಿಟ್ಟ ರಾಜಮೌಳಿ ತಂದೆ

amitabh bachchan 3

ಕೆಲವರು ಯಾವುದೋ ಜಾಹೀರಾತಿನ ಶೂಟಿಂಗ್ ಇರಬೇಕು ಎಂದು ಕಾಮೆಂಟ್ ಮಾಡಿದ್ದರೆ, ಅನೇಕರು ಹೊಸ ಸಿನಿಮಾದ ಪ್ರಮೋಷನ್ ಇರಬಹುದಾ ಎಂದು ಕೇಳಿದ್ದಾರೆ. ಅಥವಾ ಹೊಸ ಸಿನಿಮಾ ಏನಾದರೂ ಒಪ್ಪಿಕೊಂಡು ರೀತಿ ಫೋಟೋ ಹಂಚಿಕೊಂಡಿರಬಹುದಾ ಎನ್ನುವ ಪ್ರಶ್ನೆಯನ್ನೂ ಮಾಡಿದ್ದಾರೆ. ಆದರೆ, ಅರೆಸ್ಟ್ ಗುಟ್ಟನ್ನು ಮಾತ್ರ ಅಮಿತಾಭ್ ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ವಿವರವನ್ನು ನೀಡಬಹುದು.

Share This Article