ಬೆಂಗಳೂರು: ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಇಂದು ಕಾಂಗ್ರೆಸ್ ಸಚಿವರುಗಳಿಗೆ ಬೆಳಗ್ಗಿನ ಉಪಹಾರ ಕೂಟ ಏರ್ಪಡಿಸಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ಪರಮೇಶ್ವರ್ ಸರ್ಕಾರಿ ಬಂಗಲೆಯಲ್ಲಿ ಕಾಂಗ್ರೆಸ್‍ನ ಎಲ್ಲಾ 16 ಸಚಿವರಿಗೆ ಉಪಹಾರ ಕೂಟ ನಡೆಯಲಿದೆ. ಬೆಳಗ್ಗೆ 08-30ಕ್ಕೆ ಆಯೋಜಿಸಿರುವ ಉಪಹಾರ ಕೂಟದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಭಾಗವಹಿಸಲಿದ್ದಾರೆ.
ಸರ್ಕಾರದಲ್ಲಿನ ಇತ್ತೀಚಿನ ಬೆಳವಣಿಗೆ, ಕಾಂಗ್ರೆಸ್ ಸಚಿವರುಗಳಿಗೆ ಸಿಎಂ ಕುಮಾರಸ್ವಾಮಿ ಹೇಗೆ ಸ್ಪಂದಿಸುತ್ತಿದ್ದಾರೆ. ಇದೆಲ್ಲದರ ಬಗ್ಗೆ ಇಂದಿನ ಉಪಹಾರ ಕೂಟದಲ್ಲಿ ಚರ್ಚೆ ನಡೆಯಲಿದೆ. ಇನ್ನೊಂದೆಡೆ ಸಿಎಲ್‍ಪಿ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದ ಸಂದರ್ಭದಲ್ಲೇ ಈ ಉಪಹಾರ ಕೂಟ ಏರ್ಪಡಿಸಿರುವುದು ಪರಮೇಶ್ವರ್ ಶಕ್ತಿ ಪ್ರದರ್ಶನದ ಯತ್ನ ಎನ್ನಲಾಗುತ್ತಿದೆ. ಇದನ್ನೂ ಓದಿ: 10 ದಿನದ ಯುರೋಪ್ ಪ್ರವಾಸ ಹೊರಟ ಸಿದ್ದರಾಮಯ್ಯ- ಕಾಂಗ್ರೆಸ್ ಮುಖಂಡರು ಏನ್ ಹೇಳಿದ್ರು?
ಆದರೆ ಪರಮೇಶ್ವರ್ ಆಪ್ತ ವಲಯ ಮಾತ್ರ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಈ ಉಪಹಾರ ಕೂಟ ಏರ್ಪಡಿಸಲಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂದಿನ ಈ ಉಪಹಾರ ಕೂಟದಲ್ಲಿ ಎಲ್ಲಾ 16 ಕಾಂಗ್ರೆಸ್ ಸಚಿವರು ಭಾಗವಹಿಸ್ತಾರಾ..? ಇಲ್ಲಾ ಯಾರಾದರು ಅಂತರ ಕಾಯ್ದುಕೊಳ್ತಾರಾ ಅನ್ನೋದೆ ಸದ್ಯದ ಕುತೂಹಲವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv