ಬೆಂಗಳೂರು: ಮುಂದಿನ 5 ವರ್ಷ ಸಿಎಂ ನಾನೇ ಎಂಬ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಸೇರಿದಂತೆ ಸಂಪುಟ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ (Breakfast Meeting) ಏರ್ಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಿಎಂ ಕಾವೇರಿ ನಿವಾಸದೊಳಗೆ ಹೊಸದಾಗಿ ನಿರ್ಮಿಸಿರುವ ಮೀಟಿಂಗ್ ಹಾಲ್ ಉದ್ಘಾಟನೆಯನ್ನೂ ಸಿಎಂ ನೆರವೇರಿಸಿದ್ದಾರೆ. ಸಿಎಂ ಆಹ್ವಾನದ ಮೇರೆಗೆ ಡಿಕೆ ಶಿವಕುಮಾರ್ ಸೇರಿ 14 ಮಂದಿ ಸಚಿವರು ಉಪಹಾರ ಕೂಟದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: 7 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ – ಕಾಮುಕ ಶಿಕ್ಷಕ ಅರೆಸ್ಟ್
ಅನಾರೋಗ್ಯದ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಗೈರಾಗಿದ್ದಾರೆ, ಇದರೊಂದಿಗೆ ಕೆಜೆ ಜಾರ್ಜ್ ಕೂಡ ಗೈರಾಗಿದ್ದಾರೆ. ಉಳಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎನ್.ಎಸ್ ಭೋಸರಾಜು, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ್, ಎಂ.ಬಿ ಪಾಟೀಲ್, ಸಂತೋಷ್ ಲಾಡ್, ಈಶ್ವರ ಖಂಡ್ರೆ, ಬೈರತಿ ಸುರೇಶ್, ಕೆ.ಎನ್ ರಾಜಣ್ಣ, ಎಚ್.ಸಿ ಮಹದೇವಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಗೋವಿಂದರಾಜು ಮೊದಲಾದವರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಸಚಿವರಿಗೆ ನೀಡಿದ ಟಾಸ್ಕ್ ಬಗ್ಗೆ ಉಪಹಾರ ಕೂಟದ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಮುಂಬರುವ ಲೋಕಸಭಾ ಚುನಾವಣೆ, ಕಾಂಗ್ರೆಸ್ ಕಾರ್ಯತಂತ್ರ, ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆಯೂ ಚರ್ಚೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Nepal Earthquake: ಕಟ್ಟಡದಡಿ ಸಿಲುಕಿ ಮಲಗಿದ್ದಲ್ಲೇ ಉಸಿರುಚೆಲ್ಲಿದ ಉಪಮೇಯರ್
Web Stories