ಮುಂಬೈ: ಉದ್ಧವ್ ಠಾಕ್ರೆ ಅವರ ಶಿವಸೇನೆ (Shiv Sena) ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳುವಂತೆ ಅಖಿಲ ಭಾರತ ಉಲೇಮಾ ಮಂಡಳಿಯು ಕಾಂಗ್ರೆಸ್ (Congress) ಮತ್ತು ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು (NCP) ಒತ್ತಾಯಿಸಿದೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷಕ್ಕೆ ಮುಸ್ಲಿಂ ಸಮುದಾಯ (Muslim Community) ಬೆಂಬಲ ನೀಡಿದ್ದರೂ ಡಿಸೆಂಬರ್ 6 ರಂದು ಬಾಬರಿ ಮಸೀದಿ ಧ್ವಂಸವನ್ನು ಆಚರಿಸುವ ಬ್ಯಾನರ್‌ಗಳನ್ನು ಪ್ರಕಟಿಸಿದ್ದಕ್ಕಾಗಿ ಶಿವಸೇನೆಯನ್ನು ಉಲೇಮಾ ಮಂಡಳಿ ಟೀಕಿಸಿದೆ.
Advertisement
Mumbai: General secretary of All India Ulema Board Maulana Bunei Hafiz says, “All India Ulema Board, Congress Party’s high command, and under the leadership of Sharad Pawar of NCP in Maharashtra, we demand that Congress break its alliance with Shiv Sena Uddhav Thackeray faction.… pic.twitter.com/rqLTOqzMiS
— IANS (@ians_india) December 14, 2024
Advertisement
ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿಯು ಉದ್ಧವ್ ಠಾಕ್ರೆ ಅವರ ಶಿವಸೇನಾ ಬಣದೊಂದಿಗಿನ ಮೈತ್ರಿಯನ್ನು ಮುರಿಯಬೇಕು ಎಂದು ಅಖಿಲ ಭಾರತ ಉಲೇಮಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಬುನೆ ಹಫೀಜ್ ಹೇಳಿದ್ದಾರೆ. ಮುಸ್ಲಿಂ ಬಹುಸಂಖ್ಯಾತರು ಇರುವ ಕ್ಷೇತ್ರದಲ್ಲಿ ಉದ್ದವ್ ಬಣ 20 ಸ್ಥಾನಗಳನ್ನು ಗೆದ್ದುಕೊಂಡಿದೆ. ಅಖಿಲ ಭಾರತ ಉಲೇಮಾ ಮಂಡಳಿ, ಮುಸ್ಲಿಂ ಸಮುದಾಯದ ಮಹಾ ವಿಕಾಸ್ ಅಘಾಡಿ ಮೈತ್ರಿಯನ್ನು ಬೆಂಬಲಿಸಿದ ಕಾರಣ ಶಿವಸೇನೆಗೆ 20 ಸ್ಥಾನ ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಂತ್ರಿ ಮಾಡದ್ದಕ್ಕೆ ಸಿಟ್ಟು – ಪಕ್ಷಕ್ಕೆ ರಾಜೀನಾಮೆ ನೀಡಿದ ಶಿವಸೇನಾ ಶಾಸಕ
Advertisement
ಡಿಸೆಂಬರ್ 6 ರಂದು, ಉದ್ಧವ್ ಠಾಕ್ರೆ ಅವರ ಆಪ್ತ ಸಹಾಯಕ ಮತ್ತು ಎಂಎಲ್‌ಸಿ ಮಿಲಿಂದ್ ನಾರ್ವೇಕರ್ ಅವರು ಬಾಬರಿ ಮಸೀದಿ ಧ್ವಂಸದ ಚಿತ್ರವನ್ನು ಎಕ್ಸ್‌ನಲ್ಲಿ ಪ್ರಕಟಿಸಿ ಧ್ವಂಸ ಮಾಡಿದವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಬಳಿಕ ಉಲೇಮಾ ಮಂಡಳಿಯಿಂದ ಈ ಪ್ರತಿಕ್ರಿಯೆ ಪ್ರಕಟವಾಗಿದೆ.
Advertisement