ಬೆಂಗಳೂರು: ರಾಜ್ಯಾದ್ಯಂತ ಮಳೆ ಅಭಾವದಿಂದ ಕಂಗೆಟ್ಟಿದ್ದ ಜನಕ್ಕೆ ಪೂರ್ವ ಮುಂಗಾರು ತಂಪೆರೆದಿತ್ತು. ಕಳೆದ 15 ದಿನದಿಂದ ರಾಜ್ಯದಾದ್ಯಂತ ಅಬ್ಬರಿಸಿದ್ದ ವರುಣ ಸದ್ಯಕ್ಕೆ ತಾತ್ಕಾಲಿಕ ಬ್ರೇಕ್ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಮತ್ತೆ ಜೂನ್ ಮೊದಲ ವಾರದ ಬಳಿಕ ಮುಂಗಾರು ಎಂಟ್ರಿಯಾಗಿ ಅಬ್ಬರಿಸುವ ಸಾಧ್ಯತೆ ಇದೆ.
Advertisement
ಹೌದು. ಸದ್ಯ ಇಂದಿನಿಂದ ಮೇ 30ರವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಬ್ರೇಕ್ ನೀಡಲಿದೆ. ಅತ್ತ ಕರಾವಳಿ ಭಾಗಕ್ಕೆ ಮಾತ್ರ ಯಲ್ಲೋ ಅಲರ್ಟ್ ನೀಡಲಾಗಿದ್ದು, ಕರಾವಳಿ ಭಾಗದಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಮುಂದಿನ ಮೂರು ದಿನ ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ ಮೋಡ ಕವಿದ ವಾತಾವರಣ ಮತ್ತು ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ.
Advertisement
ಮೇ 31, ಜೂನ್ 1ರ ಅವಧಿಯಲ್ಲಿ ಕೇರಳಕ್ಕೆ (Kerala) ಮುಂಗಾರು ಎಂಟ್ರಿ ಕೊಡಲಿದ್ದು, ಜೂನ್1 ರ ಬಳಿಕ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಿಗೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಈ ಭಾರೀ ಉತ್ತಮ ಮುಂಗಾರಿನ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಬಗ್ಗೆ ಸೂಚನೆ ನೀಡಿದೆ. ಇದನ್ನೂ ಓದಿ: ಪಪುವಾ ನ್ಯೂಗಿನಿಯಲ್ಲಿ ಭೂಕುಸಿತ; ಸಾವಿನ ಸಂಖ್ಯೆ 670 ಕ್ಕೆ ಏರಿಕೆ
Advertisement
Advertisement
ವರ್ಷದ ಮೊದಲ ಸೈಕ್ಲೋನ್ ದೇಶಕ್ಕೆ ಎಂಟ್ರಿಯಾಗಿದೆ. ಭಾನುವಾರ ರಾತ್ರಿ ಬಾಂಗ್ಲಾದೇಶ ಕರಾವಳಿ ಪ್ರವೇಶಿಸಿದ್ದ ರೆಮಲ್ ಚಂಡಮಾರುತ, ತಡರಾತ್ರಿ ಪಶ್ಚಿಮ ಬಂಗಾಳಕ್ಕೆ ಎಂಟ್ರಿಕೊಟ್ಟಿದೆ. 135 ಕಿ.ಮೀ ವೇಗದಲ್ಲಿ ಪ್ರವೇಶಸಿರುವ ಚಂಡಮಾರುತ ಭಾರೀ ಅಬ್ಬರಿಸುವ ಸಾಧ್ಯತೆ ಇರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ಕಾರಣಕ್ಕೆ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ ರಾಜ್ಯಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಆದರೆ, ಕರ್ನಾಟಕ ಸೇರಿದಂತೆ, ದಕ್ಷಿಣ ಭಾರತದ ಜಿಲ್ಲೆಗೆ ರೆಮಲ್ ಚಂಡಮಾರುತದ ಎಫೆಕ್ಟ್ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಟ್ಟಾರೆ ರಾಜ್ಯಕ್ಕೆ ಪೂರ್ವ ಮುಂಗಾರು ಅಬ್ಬರದ ಕೊಂಚ ಇಳಿಕೆ ಕಂಡು ತಾತ್ಕಾಲಿಕ ಬ್ರೇಕ್ ನೀಡಿದ್ರೆ, ದೇಶದ ಒಂದು ಭಾಗಕ್ಕೆ ರೆಮಲ್ ಅಬ್ಬರ ಜೋರಾಗುವ ಸಾಧ್ಯತೆ ಇದೆ.