ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ 2ನೇ ವಾರಕ್ಕೆ ಕಾಲಿಟ್ಟಿದೆ. ಶನಿವಾರ-ಭಾನುವಾರ ಬಿಡುವು ನೀಡಿದ್ದ ಬಿಬಿಎಂಪಿ (BBMP) ಅಧಿಕಾರಿಗಳು, ಸೋಮವಾರದಿಂದ ಮತ್ತೆ ರಾಜಕಾಲುವೆ (Rajakaluve) ಒತ್ತುವರಿ ತೆರವಿಗೆ ಮುಂದಾಗಿದ್ದಾರೆ.
Advertisement
ಹೌದು, ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಕಾಮಗಾರಿಯನ್ನ ಇಂದು ಸಹ ಮುಂದುವರಿಸಿದೆ. ಅದರೇ ಮಹಾದೇವಪುರ ವಲಯದ 7 ಜಾಗದಲ್ಲಿ ಒತ್ತುವರಿ ತೆರವು ಮಾಡ್ತಿವಿ ಅಂತಾ ಹೇಳಿದ್ದ ಪಾಲಿಕೆ ಇಂದು ಮೂರು ಕಡೆ ಮಾತ್ರ ತೆರವು ಕಾರ್ಯಾಚರಣೆ ಮಾಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ APMC ಕಾಯ್ದೆ ರದ್ದು ಮಾಡೋದಿಲ್ಲ- ಎಸ್.ಟಿ ಸೋಮಶೇಖರ್
Advertisement
Advertisement
ನಿನ್ನೆಯ ಕಾರ್ಯಾಚರಣೆ ಅರ್ಧಕ್ಕೆ ನಿಂತಿರೋ ವಿಪ್ರೋ (Wipro) ಸಂಸ್ಥೆ, ಸೊಲ್ಲಪುರಿಯಾ ಕಂಪೌಂಡ್, ಕಾಡುಗೋಡಿ ಬಳಿಯ ವಿಜಯಲಕ್ಷ್ಮಿ ಕಾಲೋನಿ ಮತ್ತು ಪೂರ್ವ ಪಾರ್ಕ್ ರಿಡ್ಜ್ ಕಡೆ ಜೆಸಿಬಿಗಳ ಸುಳಿವೇ ಇರಲಿಲ್ಲ. ರೈನ್ ಬೋಲೇಔಟ್ ಕಡೆಯಂತೂ ಪಾಲಿಕೆ ಹೋಗುವ ಕೆಲಸವೂ ಸಹ ನಡೆದಿಲ್ಲ. ಇದನ್ನೂ ಓದಿ: ಎರಡು ವರ್ಷಗಳಿಂದ ನನ್ನ ಫೈಲನ್ನೇ ಅಧಿಕಾರಿಗಳು ಕ್ಲಿಯರ್ ಮಾಡಿಲ್ಲ: ಮುರುಗೇಶ್ ನಿರಾಣಿ ಅಸಹಾಯಕತೆ
Advertisement
ಮಾರತ್ತ್‍ಹಳ್ಳಿ ಬಳಿಯ ಬಿಡಬ್ಲೂಎಸ್‍ಎಸ್‍ಬಿ (BWSSB) ಪ್ಲಾಂಟ್‍ನ ಆವರಣದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರೋ ಬ್ರಿಡ್ಜ್ ತೆರವು ಕಾರ್ಯಾಚರಣೆ ನಡೀತು. ಗ್ಯಾಸ್ ಕಟರ್ ಮೂಲಕ ಕಂಬಿಗಳ ಕಟಿಂಗ್ ಕೆಲಸವೂ ನಡೆದಿದೆ. ನಾಳೆ ಬಹುತೇಕ ಬ್ರಿಡ್ಜ್ ತೆರವು ಕಾರ್ಯಾಚರಣೆ ಮುಕ್ತಾಯವಾಗಲಿದೆ. ಕಸವನಹಳ್ಳಿಯಲ್ಲಿ ಕಾರ್ಯಾಚರಣೆ ಮಾಡ್ತಿವಿ ಅಂತಾ ಹೇಳಿದ್ದ ಬಿಬಿಎಂಪಿ ಅಲ್ಲಿ ವಾಸವಾಗಿರೋ ಸ್ಲಂ (Slum) ಗಳಿಗೆ ನೋಟಿಸ್ ನೀಡಿ ನಾಳೆ ಕಾರ್ಯಾಚರಣೆ ಮಾಡೋ ಪ್ಲಾನ್ ಮಾಡಿಕೊಂಡಿದೆ.
ಒಟ್ಟಿನಲ್ಲಿ ಇವತ್ತು ಜೆಸಿಬಿ (JCB) ಗಳ ಘರ್ಜನೆ ಕಡಿಮೆಯಾಗಿತ್ತು. ನಾಳೆಯೂ ಬಿಬಿಎಂಪಿ ಕಾರ್ಯಾಚರಣೆ ಪ್ಲಾನ್ ಮಾಡಿಕೊಳ್ಳುತ್ತಿದೆ. ನಾಳೆಯಾದ್ರೂ ಶ್ರೀಮಂತರ ಜಾಗಕ್ಕೆ ಜೆಸಿಬಿ ನುಗ್ಗಿಸೋ ಧೈರ್ಯಕ್ಕೆ ಬಿಬಿಎಂಪಿ ಮುಂದಾಗುತ್ತಾ ಕಾದುನೋಡಬೇಕು.