ಬ್ರೆಸಿಲಿಯಾ: 3 ದಿನದಲ್ಲಿ ಮುಗಿಯಬೇಕಿದ್ದ ಮೀನುಗಾರಿಕೆ ಈ ರೀತಿ ಕಷ್ಟಕ್ಕೆ ಸಿಲುಕಿಸುತ್ತದೆ ಎಂದು ಆ ವ್ಯಕ್ತಿಗೆ ತಿಳಿದಿರಲಿಲ್ಲವೇನೋ. ಈಜು ಬರದ ಬ್ರೆಜಿಲ್‌ನ ವ್ಯಕ್ತಿ ಅಟ್ಲಾಂಟಿಕ್ ಮಹಾಸಾಗರದಲ್ಲಿ 11 ದಿನಗಳ ಕಾಲ ಕೇವಲ ಒಂದು ತೇಲುವ ಫ್ರೀಜರ್ ಮೂಲಕ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ. ಕೊನೆಗೂ ಆತನನ್ನು ಬೇರೊಂದು ಮೀನುಗಾರರ ಗುಂಪು ರಕ್ಷಿಸಿದೆ.
11 ದಿನ ಸಮುದ್ರದಲ್ಲಿ ಈ ರೀತಿಯ ಕಷ್ಟದಲ್ಲೂ ಬದುಕಿ ಬಂದ ವ್ಯಕ್ತಿ ರೊಮಾಲ್ಡೋ ಮ್ಯಾಸೆಡೊ ರಾಡ್ರಿಗಸ್ ಈ ಬಗ್ಗೆ ಮಾಧ್ಯಮದವರೊಂದಿಗೆ ವಿವರಿಸುತ್ತಾ, ನಾನು ಆಗಸ್ಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದೆ. ಮೀನುಗಾರಿಕೆಯ ಮಧ್ಯದಲ್ಲಿ ನಾನಿದ್ದ ದೋಣಿ ಸಮುದ್ರದಲ್ಲಿ ಮುಳುಗಲಾರಂಭಿಸಿತ್ತು. ಆದರೂ ನಾನು ನನ್ನ ಆತ್ಮವನ್ನು ಮುಳುಗಲು ಬಿಡಲಿಲ್ಲ. ಅದರಂತೆಯೇ ದೇವರು ನನಗೆ ಒಂದು ಅವಕಾಶ ಕೊಟ್ಟ ಎಂದು ಹೇಳಿದರು.
Advertisement
Advertisement
ನನ್ನ ದೋಣಿ ಮುಳುಗಲಾರಂಭಿಸಿದರೂ ಅದರಲ್ಲಿದ್ದ ತೇಲುವ ಫ್ರೀಜರ್ ಮುಳುಗುತ್ತಿರಲಿಲ್ಲ. ಒಂದು ಬಾರಿ ನನಗೆ ದೇವರೇ ಅದನ್ನು ವರವಾಗಿ ನೀಡಿದ್ದ ಎನಿಸಿತು. ನಾನು ಫ್ರೀಜರ್‌ನಲ್ಲಿದ್ದ 11 ದಿನ ಹಲವು ಅಗ್ನಿ ಪರೀಕ್ಷೆಗಳನ್ನು ಎದುರಿಸಿದ್ದೇನೆ. ಒಂದು ಬಾರಿ ಫ್ರೀಜರ್‌ನಲ್ಲೂ ನೀರು ಹೊಕ್ಕಿತ್ತು. ಅದನ್ನು ನಾನು ತನ್ನ ಕೈಯಿಂದಲೇ ತೆಗೆದು ಹೊರ ಹಾಕಿದ್ದೆ. ಇನ್ನೊಂದು ಬಾರಿ ದೊಡ್ಡ ದೊಡ್ಡ ಶಾರ್ಕ್ ಮೀನುಗಳು ನನ್ನನ್ನು ಸುತ್ತುವರಿದಿದ್ದವು. ಆದರೂ ನಾನು ನನ್ನ ಕುಟುಂಬದವರನ್ನು ನೆನೆಸಿಕೊಂಡು, ಆ ಪರಿಸ್ಥಿತಿಯನ್ನು ಎದುರಿಸಿದೆ. ಅನ್ನ, ನೀರಿಲ್ಲದಿದ್ದರೂ 11 ದಿನ ನಾನು ಜೀವಂತವಾಗಿದ್ದೆ ಎಂದು ವಿವರಿಸಿದ್ದಾರೆ.
Advertisement
11 ದಿನಗಳ ಸಾವು ಬದುಕಿನ ಹೋರಾಟದ ಬಳಿಕ ಕೊನೆಗೂ ನಾನಿದ್ದ ಸ್ಥಳಕ್ಕೆ ಒಂದು ದೋಣಿ ಬಂದೇ ಬಿಟ್ಟಿತು. ಆ ದೋಣಿಯಲ್ಲಿದ್ದವರು ಫ್ರೀಜರ್‌ನಲ್ಲಿ ಯಾರೂ ಇಲ್ಲ ಎಂದು ಊಹಿಸುವುದು ಬೇಡವೆಂದು ನಾನು ನನ್ನ ಕೈ, ಕಾಲುಗಳನ್ನು ಮೇಲೆತ್ತಿ, ಸಹಾಯಕ್ಕಾಗಿ ಕರೆದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಮರಳು ಸಾಗಣೆ- ಟೋಲ್ ಗೇಟನ್ನು ಮುರಿದ 13 ಟ್ರ್ಯಾಕ್ಟರ್‌ಗಳು
Advertisement
A fisherman was rescued in the Atlantic Ocean, who spent 11 days without food and water in the freezer, because his boat sank!
The man lost a lot of weight, suffered from dehydration and almost went blind. pic.twitter.com/1eYnJ09ITW
— NEXTA (@nexta_tv) September 3, 2022
ಕೊನೆಗೂ ತನ್ನ ಜೀವವನ್ನು ಉಳಿಸಿಕೊಂಡ ರಾಡ್ರಿಗಸ್‌ನನ್ನು ಆ ದೋಣಿಯಲ್ಲಿದ್ದವರು ಸುರಿನಾಮ್ ದೇಶದ ದಡಕ್ಕೆ ಕರೆದುಕೊಂಡು ಹೋಗಿ, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಆತನ ಬಳಿ ಯಾವುದೇ ವಲಸೆಯ ದಾಖಲೆಗಳಿಲ್ಲದಿದ್ದರಿಂದ ಅಲ್ಲಿನ ಪೊಲೀಸರು ಬಳಿಕ ಆತನನ್ನು 2 ವಾರಗಳ ಕಾಲ ವಶಕ್ಕೆ ಪಡೆದಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ