ಬ್ರಸಿಲ್ಲ: ಮನೆ ನಿರ್ಮಿಸುವಾಗ ಪರಿಸರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಫುಟ್ಬಾಲ್ ತಾರೆ (Brazilian football star) ನೇಮರ್ಗೆ (Neymar) ಬರೋಬ್ಬರಿ 27 ಕೋಟಿ ರೂ. (3.3 ಮಿಲಿಯನ್ ಅಮೆರಿಕನ್ ಡಾಲರ್) ದಂಡ ವಿಧಿಸಲಾಗಿದೆ.
ದಂಡ ವಿಧಿಸಿರುವ ಬಗ್ಗೆ ಮಾಹಿತಿ ನೀಡಿರುವ ಬ್ರೆಜಿಲ್ ಅಧಿಕಾರಿಗಳು, ನೇಮರ್ ಅವರು ದಕ್ಷಿಣ ಬ್ರೆಜಿಲ್ನ (Brazil) ಕರಾವಳಿ ಪ್ರದೇಶದ ರಿಯೊ ಡಿ ಜನೈರೊದ ಹೊರವಲಯದಲ್ಲಿ ಐಷರಾಮಿ ಮನೆ ನಿರ್ಮಿಸಿದ್ದಾರೆ. ಅದಕ್ಕಾಗಿ ಶುದ್ಧ ನೀರಿನ ಮೂಲಗಳ ಬಳಕೆ, ಬಂಡೆ ಮತ್ತು ಮರಳು ಬಳಕೆ ವೇಳೆ ಪರಿಸರ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: India Women’s Squad: ಭಾರತ Vs ಬಾಂಗ್ಲಾದೇಶ ಟಿ20, ಏಕದಿನ ಸರಣಿಗೆ ಬಲಿಷ್ಠ ತಂಡ ಪ್ರಕಟ
Advertisement
Advertisement
ಅವರ ನಿವಾಸದಲ್ಲಿ ಕೃತಕ ಕೊಳ ನಿರ್ಮಾಣದ ವೇಳೆ ಪರಿಸರಕ್ಕೆ ಹಾನಿ ಮಾಡಲಾಗಿದೆ ಎಂದು ಮಂಗರಟಿಬ ಸಿಟಿ ಕೌನ್ಸಿಲ್ ದೂರಿನಲ್ಲಿ ತಿಳಿಸಿದೆ.
Advertisement
ಅನುಮತಿಯಿಲ್ಲದೆ ಪರಿಸರಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿರುವುದು, ನದಿ ನೀರನ್ನು ಬಳಸಿರುವುದು, ಸಸ್ಯವರ್ಗದ ಬೆಳವಣಿಗೆಗೆ ಅಡ್ಡಿಪಡಿಸಿರುವುದು ಸೇರಿದಂತೆ ಹಲವು ಅಪರಾಧಗಳನ್ನು ನೇಮರ್ ಮೇಲೆ ಹೊರಿಸಲಾಗಿದೆ. ಇದನ್ನೂ ಓದಿ: ಸಚಿನ್ LBW ತೀರ್ಪು ನೆನಪಿಸಿಕೊಂಡ ಅಜ್ಮಲ್
Advertisement
ಬ್ರೆಜಿಲ್ ಫುಟ್ಬಾಲ್ ತಾರೆ ತಮ್ಮ ಬಲ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿಯಿಂದ ಅವರು ಫುಟ್ಬಾಲ್ ಪಂದ್ಯಗಳಲ್ಲಿ ಆಡಿಲ್ಲ.
Web Stories