ಬ್ರೆಸಿಲಿಯಾ: ಪುಟ್ಬಾಲ್ ಆಟಗಾರ ಬ್ರೇಜಿಲ್‍ನ ಪೀಲೆ(Edson Arantes do Nascimento) ಅವರು (ಯೂರಿನ್ ಇನ್ಫೆಕ್ಷನ್) ಮೂತ್ರದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಖಾಸಗಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
81 ವರ್ಷದ ಪೀಲೆ ಅವರು ಫೆಬ್ರವರಿ 13ರಂದು ಸಾವೋ ಪೌಲೋಸ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೆಪ್ಟೆಂಬರ್ ನಲ್ಲಿ ಅವರ ಕರುಳಿನಿಂದ ಗೆಡ್ಡೆಯನ್ನು ತೆಗೆದುಹಾಕಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಂತರ ಕೀಮೋಥೆರಪಿಯನ್ನು ಮುಂದುವರಿಸಲು ಅವರ ಕ್ಲಿನಿಕಲ್ ಸ್ಥಿತಿ ಸ್ಥಿರವಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುತ್ತೇವೆ. ಕಿಮೊಥೆರಪಿ ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.
Advertisement
ನಾನು ನನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದೇನೆ. ನಾನು ಈಗಾಗಲೇ ದೊಡ್ಡ ಟಿವಿ ಅನ್ನು ಆರ್ಡರ್ ಮಾಡಿದ್ದೇನೆ. ನಾನು ಸೂಪರ್ ಬೌಲ್ ಅನ್ನು ವೀಕ್ಷಿಸುತ್ತೇನೆ. ನನ್ನ ಸ್ನೇಹಿತ @tombrady ಅವರ ಪಂದ್ಯವನ್ನು ನೋಡುತ್ತೇನೆ. ಎಲ್ಲಾ ಪ್ರೀತಿಯ ಸಂದೇಶಗಳಿಗೆ ಧನ್ಯವಾದಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೀಲೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟ ಸೋನು ಸೂದ್ ವಿರುದ್ಧ FIR ದಾಖಲು
Advertisement
Advertisement
ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಪೀಲೆ ಅವರು 21 ವರ್ಷಗಳ ಕಾಲ 1,363-ಪಂದ್ಯಗಳ ವೃತ್ತಿಪರ ವೃತ್ತಿಜೀವನದಲ್ಲಿ 1,281 ಗೋಲುಗಳ ವಿಶ್ವ ದಾಖಲೆಯ ಮೊತ್ತವನ್ನು ಗಳಿಸಿದ್ದಾರೆ. ಅವರು ಬ್ರೆಜಿಲ್‍ಗಾಗಿ 91 ಬಾರಿ ಕ್ಯಾಪ್ ಪಡೆದರು, 77 ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.