– ಹರಿಯಾಣ ಚುನಾವಣೆಯಲ್ಲಿ ಬ್ರೆಜಿಲ್ ರೂಪದರ್ಶಿ 22 ಕಡೆ ಮತ ಚಲಾಯಿಸಿದ್ದಾರೆ ಎಂದಿದ್ದ ರಾಗಾ
ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ (Vote Chori) ಆರೋಪ ಮಾಡಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪವನ್ನು ಸ್ವತಃ ಬ್ರೆಜಿಲಿಯನ್ ಮಾಡೆಲ್ (Brazil Model) ಅಲ್ಲಗಳೆದಿದ್ದಾರೆ.
ಹರಿಯಾಣ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಬ್ರೆಜಿಲ್ ರೂಪದರ್ಶಿ 22 ಕಡೆ ಮತ ಚಲಾಯಿಸಿದ್ದಾರೆ ಎಂದು ಸುದ್ದಿಗೋಷ್ಠಿ ನಡೆಸಿ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಆರೋಪದ ಬಗ್ಗೆ ಬ್ರೆಜಿಲ್ ಮಾಡೆಲ್ ಲಾರಿಸಾ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ 25 ಲಕ್ಷ ಮತಗಳು ಕಳ್ಳತನ ಆಗಿದೆ – ರಾಹುಲ್ ಗಾಂಧಿ ಹೊಸ ಬಾಂಬ್
ಅವರು ನನ್ನ ಹಳೆಯ ಫೋಟೊ ಬಳಸಿ ಸೀಮಾ ಮತ್ತು ಸರಸ್ವತಿ ಎಂದು ಕರೆಯುತ್ತಿದ್ದಾರೆ. ನಾನು ಬ್ರೆಜಿಲಿಯನ್.. ಇದು ರಾಜಕೀಯ ನಾಟಕದಂತೆ ಕಾಣುತ್ತಿದೆ. ಮಾಧ್ಯಮಗಳು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿವೆ ಎಂದು ತಿಳಿಸಿದ್ದಾರೆ.
ಭಾರತದ ಚುನಾವಣೆಯಲ್ಲಿ ತನ್ನ ಹೆಸರು ಕೇಳಿಬಂದಿರುವುದಕ್ಕೆ ಲಾರಿಸಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಫೋಟೊ ನನ್ನ ಆರಂಭಿಕ ಮಾಡೆಲಿಂಗ್ ದಿನಗಳ ಹಳೆಯ ಸ್ಟಾಕ್ ಫೋಟೊ. ನಾನೀಗ ಮಾಡೆಲ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಹರಿಯಾಣ ವೋಟ್ ಚೋರಿಗೆ ವ್ಯಂಗ್ಯ – ಯಾರಾದ್ರೂ ಗಂಟೆಗೆ 20 ವೋಟ್ ಹಾಕೋಕೆ ಸಾಧ್ಯವಾ ಎಂದು ಬಿಜೆಪಿ ಪ್ರಶ್ನೆ
ಭಾರತದ ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಫೋಟೊವನ್ನು ಸ್ಟಾಕ್ ಇಮೇಜ್ ಪ್ಲಾಟ್‌ಫಾರ್ಮ್‌ನಿಂದ ಖರೀದಿಸಲಾಗಿದೆ. ನಾನು ಎಂದಿಗೂ ಭಾರತಕ್ಕೆ ಹೋಗಿಲ್ಲ. ನಾನು ಬ್ರೆಜಿಲಿಯನ್ ಡಿಜಿಟಲ್ ಇನ್‌ಫ್ಲುಯೆನ್ಸರ್ ಮತ್ತು ಕೇಶ ವಿನ್ಯಾಸಕಿ. ನಾನು ಭಾರತೀಯ ಜನರನ್ನು ಪ್ರೀತಿಸುತ್ತೇನೆ ಎಂದು ತಿಳಿಸಿದ್ದಾರೆ.


