ವಾಷಿಂಗ್ಟನ್: ಅಮೇರಿಕದ ಮಹಿಳೆಯೊಬ್ಬರ ಮೂಗಿನ ಮೇಲೆ ಆಗಿದ್ದ ಒಂದು ಚಿಕ್ಕ ಮೊಡವೆ ಇಂದು ಅವರ ಸೌಂದರ್ಯವನ್ನು ಕಿತ್ತುಕೊಂಡಿದೆ.
ಅಮೇರಿಕದ ಟೆನ್ನಿಸಿ ನೌಕಸ್ವೀಲ್ ನಿವಾಸಿ 28 ವರ್ಷದ ಮಾರಿಶಾ ಡಾಂಟ್‍ಸನ್ ಮೂರು ವರ್ಷಗಳ ಹಿಂದೆ ಆಗಿರುವ ಒಂದು ಚಿಕ್ಕ ಮೊಡವೆಯಿಂದ ತಮ್ಮ ಸೌಂದರ್ಯವನ್ನು ಕಳೆದುಕೊಂಡಿದ್ದಾರೆ. ಮಾರಿಶಾರಿಗೆ ಮೊದಲಿಗೆ ಮೂಗಿನ ತುದಿಯಲ್ಲಿ ಒಂದು ಚಿಕ್ಕ ಮೊಡವೆ ಕಾಣಿಸಿಕೊಂಡಿತ್ತು. ಮೊದಲಿಗೆ ಮಾರಿಶಾ ಸಹ ಅದನ್ನು ನಿರ್ಲಕ್ಷಿಸಿದ್ದರು. ಮುಂದೆ ಅದೇ ಮೊಡವೆ ತುಂಬಾ ದೊಡ್ಡದಾಗಲು ಆರಂಭಿಸಿತು.
Advertisement
Advertisement
ಭಯಗೊಂಡ ಮಾರಿಶಾ ಆಸ್ಪತ್ರೆಯಲ್ಲಿ ಚೆಕ್ ಮಾಡಿಸಿದ್ದರು. ಈ ವೇಳೆ ಡಾಕ್ಟರ್ ಸಹ ಚಿಕ್ಕ ಮೊಡವೆ ಎಂದು ತಿಳಿದಿದ್ದರು. ಸ್ಕ್ಯಾನ್ ಮಾಡಿಸಿದಾಗ, ಬರೀ ಮೊಡವೆ ಅಲ್ಲ ಅದು ಭಯಾನಕ ಕ್ಯಾನ್ಸರ್ ಎನ್ನುವುದು ಗೊತ್ತಾಯಿತು.
Advertisement
ಕ್ಯಾನ್ಸರ್ ಎಂದು ತಿಳಿದ ಬಳಿಕ ಮಾರಿಶಾಗೆ ಬದುಕುಳಿಯುವ ಅವಕಾಶದ ಬಗ್ಗೆ ವೈದ್ಯರು ಶೇ.20ರಷ್ಟು ಮಾತ್ರ ಭರವಸೆಯನ್ನು ನೀಡಿದ್ದರು. ಇಲ್ಲದಿದ್ದರೆ ಮಾರಿಶಾ ಸಾವನ್ನಪ್ಪಬಹುದು ಎಂದು ಹೇಳಿದ್ದರು. ಆದ್ರೆ ಗಟ್ಟಿಗಿತ್ತಿ ಮಾರಿಶಾ ಮಾತ್ರ ಎಲ್ಲಾ ಚಿಕಿತ್ಸೆಗೂ ಸಹಕರಿಸಿ ವೈದ್ಯರ ಸಲಹೆಯನ್ನು ಪಾಲಿಸಿದ ಪರಿಣಾಮ ಈಗ ಗುಣಮುಖರಾಗಿದ್ದಾರೆ.
Advertisement
ಹಾಳಾಯಿತು ಸೌಂದರ್ಯ: ಕ್ಯಾನ್ಸರ್ ರೋಗದಿಂದ ಚಿಕಿತ್ಸೆ ಪಡೆಯಲು ಆರಂಭಿಸಿದ ಮಾರಿಶಾರ ಮೂಗು ಹೋಗಿದ್ದು, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದರಿಂದಾಗಿ ತನ್ನ ರೂಪದ ಮೂಲಕ ಆಕರ್ಷಣೆಯಾಗಿದ್ದ ಮಾರಿಶಾ ಮುಖ ವಿರೂಪಗೊಂಡಿದೆ. ಮೂಗಿನ ನೇರದಿಂದ ತಲೆಯವರೆಗೂ ಸರ್ಜರಿ ಮಾಡಲಾಗಿದ್ದು, ತಮ್ಮ 8 ಹಲ್ಲುಗಳನ್ನು ಮಾರಿಶಾ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಕ್ಲಿಯರ್ ಸ್ಕಿನ್‍ಗಾಗಿ ಇಲ್ಲಿವೆ 5 ಬೆಸ್ಟ್ ಟಿಪ್ಸ್
ಭಯಾನಕ ರೋಗಕ್ಕೆ ತುತ್ತಾದರೂ ಎದೆಗುಂದದ ಮಾರಿಶಾ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ಪಡೆದು, ರೋಗವನ್ನು ಗೆದ್ದಿದ್ದಾರೆ. ಈ ವೇಳೆ ಮಾರಿಶಾ ತನ್ನ ಮೂಗಿನ ಮೇಲಾದ ಪ್ರತಿಯೊಂದು ಬದಲಾವಣೆಯ ಫೋಟೋಗಳನ್ನು ಕ್ಲಿಕಿಸಿಕೊಂಡಿದ್ದಾರೆ. ಸದ್ಯ ಮಾರಿಶಾರ ಎಲ್ಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಸನ್ ಟ್ಯಾನ್ ನಿವಾರಣೆಗೆ ಇಲ್ಲಿವೆ 6 ಸುಲಭ ಟಿಪ್ಸ್
ಏನಿದು ಕ್ಯಾನ್ಸರ್?:
squamous cell carcinoma ಎಂದು ಕರೆಯಲ್ಪಡುವ ಈ ಕ್ಯಾನ್ಸರ್ ಅತಿಹೆಚ್ಚು ಬಿಸಿಲಿನಲ್ಲಿ ಕೆಲಸ ಮಾಡುವರಲ್ಲಿ ಕಂಡುಬರುತ್ತದೆ. ಇದೊಂದು ಚರ್ಮಕ್ಕೆ ಸಂಬಂಧಪಟ್ಟ ಕ್ಯಾನ್ಸರ್ ಆಗಿದೆ. ಇದು ಹೆಚ್ಚಾಗಿ ಮುಖ, ಕುತ್ತಿಗೆ, ಕೈ, ತಲೆಯ ಮೇಲ್ಭಾಗ ಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಒಂದು ವೇಳೆ ಈ ರೋಗ ಬಂದರೆ ಬದುಕುಳಿಯುವ ಚಾನ್ಸ್ ತುಂಬಾ ಕಡಿಮೆಯಿದ್ದು, ಗುಣಮುಖರಾಗ ಬೇಕಾದರೆ ದೀರ್ಘಕಾಲದವರಗೆ ನಿರಂತರವಾಗಿ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ ಎಂದು ಬ್ರಿಟಿಷ್ ಸ್ಕಿನ್ ಫೌಂಡೇಶನ್ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಕೂಲ್ ಆಗಿರಲು ಸರಳವಾದ ಈ ಟಿಪ್ಸ್ ಫಾಲೋ ಮಾಡಿ