– ಚಾಕು ಹಿಡಿದು ಬಸ್ ನಿಲ್ದಾಣದ ತುಂಬಾ ಓಡಾಡಿಸಿದಳು
– ಒಂದು ತಿಂಗಳಿಂದ ಪೀಡಿಸುತ್ತಿದ್ದ ಪೋಲಿ ಪರಾರಿ
ರಾಯಚೂರು: ಸಿಂಧನೂರು ನಗರದ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳು ಪೋಲಿ ಯುವಕನಿಗೆ ಸರಿಯಾಗೇ ಬುದ್ದಿ ಕಲಿಸಿದ್ದಾಳೆ. ಒಂದು ತಿಂಗಳಿನಿಂದ ಚುಡಾಯಿಸಿ, ಕಾಲು ಕೆರೆದು ಜಗಳ ತೆಗೆಯುತ್ತಿದ್ದ ಇಲ್ಲಿನ ತಿಡಿಗೋಳ ಗ್ರಾಮದ ಯುವಕ ದೇವ ಎಂಬುವವನ ಕಿರುಕುಳಕ್ಕೆ ಬೇಸತ್ತು ಚಾಕು ಹಾಕಲು ಮುಂದಾಗಿರುವ ಘಟನೆ ನಡೆದಿದೆ.
Advertisement
ಎಂದಿನಂತೆ ಚುಡಾಯಿಸಲು ಮುಂದಾದಾಗ ಯುವತಿ ಪೂಜಾ (ಹೆಸರು ಬದಲಾಯಿಸಲಾಗಿದೆ) ಮೊದಲೇ ಪೂರ್ವ ಸಿದ್ಧತೆ ಮಾಡಿಕೊಂಡು ಹೆಣ್ಣು, ತರಕಾರಿ ಕತ್ತರಿಸುವ ಚಾಕುವಿನಿಂದ ದೇವನ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ತಪ್ಪಿಸಿಕೊಂಡ ದೇವ ಇಡೀ ಬಸ್ ನಿಲ್ದಾಣದ ತುಂಬಾ ಓಡಾಡಿದ್ದಾನೆ. ಅಷ್ಟಕ್ಕೇ ಬಿಡದ ಯುವತಿ ಅವನನ್ನ ಅಟ್ಟಾಡಿಸಿಕೊಂಡು ಚಾಕು ಹಾಕಲು ಮುಂದಾಗಿದ್ದಾಳೆ. ಸಹ ಪ್ರಯಾಣಿಕರು ಯುವತಿಯನ್ನ ತಡೆದಿದ್ದು, ದೇವ ಅಲ್ಲಿಂದ ಪರಾರಿಯಾಗಿದ್ದಾನೆ.
Advertisement
Advertisement
ಪಿಯುಸಿ ಮುಗಿಸಿರುವ ಯುವತಿ ಪ್ರತಿದಿನ ಚಿಕ್ಕಬೇರಗಿ ಗ್ರಾಮದಿಂದ ಸಿಂಧನೂರಿನ ನಗರ ಗ್ರಂಥಾಲಯಕ್ಕೆ ಓದಲು ಬರುತ್ತಿದ್ದಳು. ಸಿಂಧನೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತ್ತಿರುವ ದೇವ ಸಹ ಅದೇ ಮಾರ್ಗದ ತಿಡಿಗೋಳ ಗ್ರಾಮದಿಂದ ಒಂದೇ ಬಸ್ ನಲ್ಲಿ ಬರುತ್ತಿದ್ದ. ಬಸ್ ನಲ್ಲೇ ಚುಡಾಯಿಸಲು ಆರಂಭಿಸಿದ ದೇವ ಬಸ್ ನಿಲ್ದಾಣದಲ್ಲೂ ಜಗಳ ಕಾಯುತ್ತಿದ್ದ, ಇದರಿಂದ ಬೇಸತ್ತು ಚಾಕು ಹಾಕಲು ಮುಂದಾಗಿದ್ದಾಳೆ. ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಯುವತಿಯಿಂದ ಚಾಕು ವಶಕ್ಕೆ ಪಡೆದಿದ್ದಾರೆ.
Advertisement