ಬೇಸಿಗೆಯ ದಾಹ ತಣಿಸಲು ಬಂದಿದೆ ಕ್ಯಾಂಪಾ- ಕೋಲಾದ ಹೊಸ ಪ್ರಚಾರ ಆರಂಭಿಸಿದ ರಿಲಯನ್ಸ್

Public TV
2 Min Read
Campa Cola

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಎಫ್ಎಂಸಿಜಿ ಅಂಗ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಸಂಪೂರ್ಣ ಒಡೆತನದ ಅಂಗಸಂಸ್ಥೆಯಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ನಿಂದ ಕ್ಯಾಂಪಾ ಕೋಲಾ (Campa Cola) ಪರವಾಗಿ ಹೊಸದಾಗಿ ಬ್ರ್ಯಾಂಡ್ ಅಭಿಯಾನವನ್ನು ಆರಂಭಿಸಲಾಗಿದೆ. ಕ್ಯಾಂಪಾ ಕೋಲಾ ಎಂಬುದು ಖ್ಯಾತ ಭಾರತೀಯ ಪಾನೀಯ ಬ್ರ್ಯಾಂಡ್ ಆಗಿದೆ.

ಈ ಅಭಿಯಾನವು ವಿಭಿನ್ನ ವಿಧಾನದ ಭರವಸೆಯನ್ನು ನೀಡುತ್ತದೆ. ಇದರ ಜತೆಗೆ ನೈಜ ಭಾರತೀಯರನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಪಾರಮ್ಯ ಹಾಗೂ ಸಂಕಲ್ಪ ಸ್ಫೂರ್ತಿಯನ್ನು ಸಂಭ್ರಮಿಸುತ್ತದೆ. ನಿರಂತರವಾಗಿ ಹೊಸ ದಿಗಂತವನ್ನು ಬೆನ್ನಟ್ಟುವ ಯುವ ಭಾರತದ ಧೈರ್ಯಶಾಲಿ ಮನೋಭಾವಕ್ಕೆ ಗೌರವ ಸಮರ್ಪಣೆ ಮಾಡುತ್ತದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಕೇಸ್‌ಗೆ ಈಗ ಮಕ್ಕಳ ಆಯೋಗ ಎಂಟ್ರಿ

“ಕಠಿಣ ಕೆಲಸಗಳನ್ನು ಮಾಡುವಂಥ ಭಾರತೀಯರಿಗೆ, ತಮ್ಮ ಉನ್ನತ ಆಕಾಂಕ್ಷೆಗಳನ್ನು ಈಡೇರಿಸುವುದಕ್ಕೆ ನಮ್ಮ ಸಂವಹನವಾಗಿದ್ದು, ಕೈಗೆಟುಕುವ ಬೆಲೆಗೆ ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದಕ್ಕೆ ಇದು ನಮ್ಮ ಪಾಲಿಗೆ ಪಯಣದ ಆರಂಭವಾಗಿದೆ,” ಎಂದು ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಸಿಒಒ ಕೇತನ್ ಮೋದಿ ಹೇಳಿದ್ದಾರೆ. ಇದನ್ನೂ ಓದಿ: ಕುಡಿಯುವ ನೀರಿನ ನೆಪದಲ್ಲಿ ನೀರು ಬಿಡುಗಡೆಗೆ ನಿರಾಕರಿಸಬಾರದು – ತಮಿಳುನಾಡು ಕ್ಯಾತೆ

ಆರ್ ಸಿಪಿಎಲ್ ಪೂರೈಕೆ ಸರಪಳಿಯನ್ನು ಬಲಪಡಿಸುತ್ತಿದ್ದು, ವಿತರಣೆಯನ್ನು ವಿಸ್ತರಣೆ ಮಾಡುವ ಮೂಲಕ ಕಾರ್ಯಾಚರಣೆಯನ್ನು ದೇಶದ ವಿವಿಧ ಭಾಗಗಳಲ್ಲಿ ವ್ಯಾಪಿಸುತ್ತಿದೆ. ಈ ಬ್ರ್ಯಾಂಡ್ ಫಿಲ್ಮ್ ಅನ್ನು ಪರಿಕಲ್ಪನೆ ಮಾಡಿಕೊಂಡಿರುವುದು ಆಡ್ ಗುರು ಪ್ರಸೂನ್ ಜೋಶಿ. ಇದನ್ನು ಟೀವಿ, ಡಿಜಿಟಲ್, ಹೊರಾಂಗಣ ಮತ್ತು ಮುದ್ರಣ ಮಾಧ್ಯಮ ಹೀಗೆ ಎಲ್ಲೆಡೆ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ.campa cola

“ಈ ಹೊಸ ಸೃಜನಶೀಲತೆಯೊಂದಿಗೆ ಕ್ಯಾಂಪಾ ಬ್ರ್ಯಾಂಡ್ ಹೊಸ ಉದಯೋನ್ಮುಖ ಭಾರತದೊಂದಿಗೆ ಹಿಮ್ಮೇಳವನ್ನು ಹೊರಡಿಸುವಂತೆ ಕಾಣುತ್ತಿದೆ. ಇದರಲ್ಲಿ ಸ್ವಯಂ-ನಂಬಿಕೆಯನ್ನು ಹೊಂದಿದೆ ಮತ್ತು ಹೊಸ ದಿಗಂತಗಳನ್ನು ಅನ್ವೇಷಿಸಲು ಉತ್ಸುಕವಾಗಿದೆ. ಇದು ಸ್ಥಳೀಯದರ ಬಗ್ಗೆ ಹೆಮ್ಮೆ ಮತ್ತು ಪ್ರತಿಭೆ ಹಾಗೂ ಸಂಕಲ್ಪವನ್ನು ಎತ್ತರಕ್ಕೆ ಒಯ್ಯುತ್ತದೆ. ಈ ಹೊಸ ಭಾರತವು ದಾಹ ಹೊಂದಿದ್ದು, ಅದನ್ನು ತಣಿಸಲು ಏನಾದರೂ ವಿಶೇಷವಾದ ಅಗತ್ಯವಿದೆ,” ಎಂದು ಮೆಕ್‌ಕನ್ ವರ್ಲ್ಡ್‌ಗ್ರೂಪ್‌ನ ಬರಹಗಾರ ಮತ್ತು ಮುಖ್ಯ ಸೃಜನಶೀಲ ಅಧಿಕಾರಿ ಪ್ರಸೂನ್ ಜೋಶಿ ಹೇಳಿದ್ದಾರೆ.

 ಚಿತ್ರನಿರ್ಮಾತೃ ಅರುಣ್ ಗೋಪಾಲನ್ ಮತ್ತು ಗಾಯಕ, ಸಂಯೋಜಕ ಶಂಕರ್ ಮಹಾದೇವನ್ ಅವರು  ಈ ಅಭಿಯಾನದ ಫಿಲ್ಮ್ ಅನ್ನು ತಯಾರಿಸಿದ್ದಾರೆ.

Share This Article