ಕೇವಲ ಎರಡೂವರೆ ನಿಮಿಷದಲ್ಲಿ ಬ್ರೈನ್ ಆಪರೇಷನ್- ನಾರಾಯಣ ಹೆಲ್ತ್ ಸಿಟಿ ವೈದ್ಯರಿಂದ ಮಹತ್ತರ ಸಾಧನೆ

Public TV
2 Min Read
NARAYAN HEALTH CITY 3

ಆನೇಕಲ್: ವೈದ್ಯಕೀಯ ಲೋಕವೇ ಹಾಗೆ ಒಂದಲ್ಲ ಒಂದು ಸವಾಲಿನ ಮೂಲಕ ರೋಗಿಗಳನ್ನು ಬದುಕಿಸುತ್ತಾರೆ. ಇಂತಹದೇ ಒಂದು ಸವಾಲಿನ ಆಪರೇಷನ್ ಅನ್ನು ಕೇವಲ ಮೂರು ನಿಮಿಷದಲ್ಲಿ ಮಾಡುವ ಮೂಲಕ ವೈದ್ಯರ ತಂಡವೊಂದು ವೈದ್ಯಕೀಯ ಲೋಕಕ್ಕೆ ಸವಾಲೆಸೆದಿದೆ.

NARAYAN HEALTH CITY

ಹೌದು. ದೆಹಲಿಯಲ್ಲಿ ಆಯೋಜನೆ ಮಾಡಿದ್ದ ನೈಸ್ ಹೆಸರಿನ ಕಾನ್ಫರೆನ್ಸ್‍ನಲ್ಲಿ ಹಲವಾರು ದೇಶದ ವೈದ್ಯರ ತಂಡ ಇಂತಹ ಸಾಧನೆ ಮಾಡಿದ್ದಾರೆ. ಆಪರೇಷನ್ ಮಾಡೋ ಮೂಲಕ ಮುಂದಿನ ಯುವ ಪೀಳಿಗೆಯ ವೈದ್ಯರಿಗೆ ವಿಭಿನ್ನ ರೀತಿಯ ಆಪರೇಷನ್ ಮಾಡುವುದು ಹೇಗೆ ಎನ್ನುವ ಮಾಹಿತಿಯನ್ನು ತಿಳಿಸುವ ಕೆಲಸ ಮಾಡಿತ್ತು. ಅದರಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ (Narayana Health City Hospital) ಯ ಡಾ ವಿಕ್ರಂ ಹುಡೇದ್ ಹಾಗೂ ಅವರ ತಂಡ 47 ವರ್ಷದ ವ್ಯಕ್ತಿಯೊಬ್ಬರಿಗೆ ಬ್ರೈನ್ ಆಪರೇಷನ್ (Brain Operation) ಮಾಡಲು ಮುಂದಾಗಿತ್ತು. ತಲೆಯ ಒಳಗಿನ ಕೂದಲಿನ ಗಾತ್ರದ ನರಮಂಡಲದಲ್ಲಿ ಆಪರೇಷನ್ ಮಾಡುವ ಸವಾಲನ್ನು ಈ ತಂಡ ಎದುರಿಸಿದ್ದು, ಒಂದು ಗಂಟೆ ಸಮಯ ತೆಗೆದುಕೊಂಡು ಈ ಆಪರೇಷನ್ ಮಾಡಲು ಮುಂದಾಗಿತ್ತು. ಆದರೆ ಕೇವಲ ಎರಡೂವರೆ ನಿಮಿಷದಲ್ಲಿ ಆಪರೇಷನ್ ಮಾಡಿ ಮುಗಿಸುವ ಮೂಲಕ ವೈದ್ಯರ ತಂಡ ಎಲ್ಲರ ಹುಬ್ಬೇರಿಸಿದೆ.

ವೈದ್ಯರ ತಂಡ ಮಾಡಿರುವ ಸಾಧನೆ ಅಂತಿಂಥದ್ದಲ್ಲ ದೇಶದಲ್ಲೇ ಇದು ಮೊದಲನೇ ಸಾಧನೆ ಎನ್ನಲಾಗಿದೆ. ಬ್ರೈನ್ ಅನ್ಯೂರಿಸಂ (Brain Aneurysm) ಎಂದು ಕರೆಯಲ್ಪಡುವ ಕಾಯಿಲೆಗೆ ಡಾಕ್ಟರ್ ವಿಕ್ರಂ ಹುಡೆದ್ ( Dr. Vikram Huded) ಡಿವೈಸ್ ಒಂದರ ಮೂಲಕ ಕಾಲಿನಿಂದ ತಲೆಗೆ ಸಂಪರ್ಕ ಕಲ್ಪಿಸಿ ಬ್ರೈನ್ ಒಳಗೆ ಉಂಟಾಗಿದ್ದ ಗುಳ್ಳೆಯನ್ನ ಆಪರೇಷನ್ ಮಾಡಿದ್ದಾರೆ. ವ್ಯಕ್ತಿಗೆ ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿ ಹೊರಗೆ ತೆಗೆದಿದ್ದಾರೆ. ಹೀಲ್ ಟೆಕ್ನಾಲಜಿ ಮೂಲಕ ಆಪರೇಷನ್ ಮಾಡಿದ್ದು, ಎರಡೂವರೆ ನಿಮಿಷದಲ್ಲಿ ಇಂತಹ ಆಪರೇಷನ್ ಮಾಡಿ ಮುಗಿಸಿರುವ ಯಾವುದೇ ಉದಾಹರಣೆಗಳು ಇಲ್ಲ. ಅಮೆರಿಕ ದೇಶದ ಅಧ್ಯಯನದ ಪ್ರಕಾರ 50% ಜನರಲ್ಲಿ ಈ ಕಾಯಿಲೆ ಕಂಡುಬಂದರೂ, ಸಹ ಭಾರತದಲ್ಲಿ ಈ ಬಗ್ಗೆ ಜನರಲ್ಲಿ ಅಷ್ಟೊಂದು ಅರಿವು ಇಲ್ಲದೆ ಜಿಮ್ ಸೇರಿದಂತೆ ಹಲವಡೆ ತಲೆನೋವು ಕಂಡು ದಿಢೀರ್ ಎಂದು ಹೃದಯಾಘಾತವಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

NARAYAN HEALTH CITY 1

ಇಂತಹ ಒಂದು ಕಾಯಿಲೆಗೆ ಡಾಕ್ಟರ್ ವಿಕ್ರಂ ಹುಡೆದ್ ಮತ್ತವರ ತಂಡದಲ್ಲಿದ್ದ ಡಾ. ದಿಲೀಪ್, ಡಾ. ತನೈ ಹಾಗೂ ಡಾ.ಅನುಷಾ ಕೇವಲ ಎರಡೂವರೆ ನಿಮಿಷದಲ್ಲಿ ಬ್ರೈನ್ ಆಪರೇಷನ್ ಮಾಡಿದ್ದಾರೆ. ಲೈವ್ ಕಾನ್ಫರೆನ್ಸ್‍ನಲ್ಲಿ 35ಕ್ಕೂ ಹೆಚ್ಚು ದೇಶಗಳಲ್ಲಿ ನಮ್ಮ ವೈದ್ಯರ ತಂಡ ಮೊದಲ ಸ್ಥಾನ ಪಡೆದಿದ್ದು, ನಾವು ವೈದ್ಯರು ನಮಗೆ ಆಪರೇಷನ್ ಸಕ್ಸಸ್ ಮಾಡುವುದಷ್ಟೇ ಮುಖ್ಯವಾಗಿತ್ತು. ನಾವು ಮಾಡಿರುವ ಸಾಧನೆ ಮೊದಲ ಸ್ಥಾನ ಪಡೆದಿದ್ದು, ಮೊದಲ ಸ್ಥಾನ ನಮಗೆ ಬಂದಿದೆ ಎನ್ನುವುದು ನಮಗೆ ಹೆಮ್ಮೆ ತಂದಿದೆ ಎಂದು ಡಾ.ವಿಕ್ರಮ್ ಹುಡೇದ್ ಹೇಳಿದ್ದಾರೆ.

NARAYAN HEALTH CITY 2

ಒಟ್ಟಿನಲ್ಲಿ ವೈದ್ಯಕೀಯ ಲೋಕದಲ್ಲಿ ಈ ಎರಡೂವರೆ ನಿಮಿಷದ ಆಪರೇಷನ್ ನಲ್ಲಿ ಬ್ರೈನ್ ನಲ್ಲಿರುವ ಸಮಸ್ಯೆಯನ್ನು ಬಗೆಹರಿಸುವ ಮೂಲಕ ದೇಶದಲ್ಲೇ ಗಮನ ಸೆಳೆದ ಈ ವೈದ್ಯರ ತಂಡಕ್ಕೆ ನಮ್ಮದೊಂದು ಸಲಾಂ. ಇದನ್ನೂ ಓದಿ: 5 ಗ್ಯಾರಂಟಿ ಜಾರಿಗೆ 59 ಸಾವಿರ ಕೋಟಿ ವೆಚ್ಚವಾಗುತ್ತೆ: ಸಿದ್ದರಾಮಯ್ಯ

Share This Article