ಕೋಲಾರ: ಜಿಲ್ಲೆಯಲ್ಲಿ ಮೆದುಳು ಜ್ವರ (Brain Fever) ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯಿಂದ ಅಲರ್ಟ್ ಘೊಷಿಸಲಾಗಿದೆ.
ಕೋಲಾರ ತಾಲೂಕು ತೊಟ್ಲಿ ಗ್ರಾಮದಲ್ಲಿ ಮೆದುಳು ಜ್ವರ ಪ್ರಕರಣ ಪತ್ತೆಯಾಗಿದೆ. ಇದೊಂದು ಸಾಂಕ್ರಾಮಿಕ ರೋಗವಾದ ಹಿನ್ನೆಲೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
Advertisement
Advertisement
ತೊಟ್ಲಿ ಗ್ರಾಮದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಹಂದಿ ಸಾಕಾಣಿಕೆ ನಿಷೇಧ ಮಾಡಲಾಗಿದೆ. ಅಲ್ಲದೆ ಗ್ರಾಮ ಪಂಚಾಯತಿಯಿಂದ ಶುಚಿತ್ವ ಕಾಪಾಡುವಂತೆ ಆರೋಗ್ಯ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಒಂದರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವಂತೆಯೂ ಇಲಾಖೆ ತಿಳುವಳಿಕೆ ನೀಡುತ್ತಿದೆ.
Advertisement
Advertisement
ಮೆದುಳು ಜ್ವರದ ಲಕ್ಷಣಗಳೆನು..?: ಜ್ವರ, ತಲೆನೋವು, ತ್ವಚೆಯಲ್ಲಿ ಗುಳ್ಳೆಗಳು, ಹಸಿವು ಇಲ್ಲದಿರುವುದು, ಮೈಯಲ್ಲಿ ನಡುಕ, ಬೆಳಕಿಗೆ ಕಣ್ಣು ತೆರೆಯಲು ಸಾಧ್ಯವಾಗದಿರುವುದು, ಮಾತನಾಡುವಾಗ ತೊದಲುವುದು ಮೊದಲಾದವುಗಳಾಗಿವೆ.
ಪಾರಾಗುವುದು ಹೇಗೆ?: ಸೊಳ್ಳೆಯಿಂದ ಹರಡುವ ರೋಗವನ್ನು ತಡೆಯಲು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛ ಗೊಳಿಸುವುದು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸುವುದು. ಅಲ್ಲದೆ ಸಾಕಷ್ಟು ನೀರು ಕುಡಿಯುವುದರಿಂದ ಮೆದುಳು ಜ್ವರದಿಂದ ಪಾರಾಗಬಹುದು.