Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: PublicTV Explainer: ಕೋವಿಡ್ ಬೆನ್ನಲ್ಲೇ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ – ಏನು ಈ ರೋಗ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Explainer | PublicTV Explainer: ಕೋವಿಡ್ ಬೆನ್ನಲ್ಲೇ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ – ಏನು ಈ ರೋಗ?

Explainer

PublicTV Explainer: ಕೋವಿಡ್ ಬೆನ್ನಲ್ಲೇ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ – ಏನು ಈ ರೋಗ?

Public TV
Last updated: February 18, 2023 4:58 pm
Public TV
Share
3 Min Read
Brain eating amoeba 6
SHARE

ಇತ್ತೀಚೆಗಷ್ಟೇ ದಕ್ಷಿಣ ಕೊರಿಯಾದಲ್ಲಿ (South Korea) ವ್ಯಕ್ತಿಯೊಬ್ಬರು ವಿಚಿತ್ರ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಮೆದುಳು ತಿನ್ನುವ ಅಮೀಬಾ (Brain Eating Amoeba) ಎನ್ನಲಾಗುವ ಈ ಸೋಂಕು ಕೋವಿಡ್ ಹೆಚ್ಚಳದ ಭೀತಿಯ ಬೆನ್ನಲ್ಲೇ ಜನರಲ್ಲಿ ಮತ್ತೆ ಆತಂಕ ಮೂಡಿಸಿದೆ. ನೆಗ್ಲೇರಿಯಾ ಫೌಲೆರಿ (Naegleria fowleri) ಹೆಸರಿನ ಈ ರೋಗಕ್ಕೆ ದಕ್ಷಿಣ ಕೋರಿಯಾದಲ್ಲಿ ಮೊದಲ ಬಲಿಯಾಗಿದೆ. ಈ ಮಾರಣಾಂತಿಕ ಸೋಂಕಿನ ಲಕ್ಷಣ ಕಂಡುಬಂದ 10 ದಿನಗಳ ನಂತರ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಏನಿದು ಮೆದುಳು ತಿನ್ನುವ ಅಮೀಬಾ? ಮನುಷ್ಯರಿಗೆ ಇದು ಹೇಗೆ ಹರಡುತ್ತೆ? ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Brain eating amoeba 1

ಘಟನೆಯೇನು?
ಥಾಯ್ಲೆಂಡ್ ಪ್ರವಾಸ ಮುಗಿಸಿ ಬಂದ ಕೊರಿಯಾದ ವ್ಯಕ್ತಿಗೆ ನೆಗ್ಲೇರಿಯಾ ಫೌಲೆರಿ ಸೋಂಕು ತಗುಲಿತ್ತು. ಕೊರಿಯಾ ಆಗಮಿಸಿದ ದಿನವೇ ಅವರಿಗೆ ತೀವ್ರವಾದ ತಲೆನೋವು ಸೇರಿದಂತೆ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮಂಗಳವಾರ ಅವರು ಮೃತಪಟ್ಟಿದ್ದಾರೆ.

ನೆಗ್ಲೇರಿಯಾ ಫೌಲೆರಿ ಅಂದ್ರೇನು?
ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ರೀತಿಯ ಜೀವಿ. ಇವು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಕಂಡುಬರುತ್ತವೆ.

Brain eating amoeba 4

ನೆಗ್ಲೇರಿಯಾ ಫೌಲೆರಿ ಹರಡೋದು ಹೇಗೆ?
ಈ ಜೀವಿಗಳಿರುವ ನೀರು ಮನುಷ್ಯನ ಮೂಗಿನಲ್ಲಿ ಸೇರಿಕೊಂಡರೆ, ಆತ ಸೋಂಕಿಗೆ ಒಳಗಾಗುತ್ತಾನೆ. ಇದು ಮೂಗಿನ ಮೂಲಕ ಮೆದುಳನ್ನು ಪ್ರವೇಶ ಮಾಡಿ, ಮೆದುಳಿಗೆ ಹಾನಿಮಾಡಲು ಪ್ರಾರಂಭಿಸುತ್ತದೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದಕ್ಕೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.

Brain eating amoeba 3

ರೋಗದ ಲಕ್ಷಣವೇನು?
ನೆಗ್ಲೇರಿಯಾ ಫೌಲೆರಿ ಬಾಧಿತರು ತೀವ್ರವಾದ ತೆಲೆನೋವು, ವಾಂತಿ, ಗಂಟಲಿನಲ್ಲಿ ಬಿಗಿತ ಹಾಗೂ ಮಂದಗೊಂಡ ಮಾತಿನ ಲಕ್ಷಣಗಳನ್ನು ಹೊಂದುತ್ತಾರೆ. ಮನುಷ್ಯನಿಗೆ ಸೋಂಕು ತಗುಲಿದ 1-12 ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ರೋಗದ ಲಕ್ಷಣ ತೀವ್ರವಾಗಿ ಮನುಷ್ಯನಿಗೆ ಜ್ವರ ಬರುವ ಸಾಧ್ಯತೆಯೂ ಇರುತ್ತದೆ. ಇದು ಮುಂದುವರಿದಂತೆ ವ್ಯಕ್ತಿಯಲ್ಲಿ ಸ್ನಾಯು ಸೆಳೆತಗಳು, ಭ್ರಾಂತಿ, ಕೋಮಾಗೂ ಹೋಗುವ ಸಾಧ್ಯತೆಯಿರುತ್ತದೆ. ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಕ್ತಿ 5 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎನ್ನಲಾಗಿದೆ.

Brain eating amoeba

ಸೋಂಕಿನ ಇತರ ವರದಿಗಳು:
ವರದಿಗಳ ಪ್ರಕಾರ 1962 ರಿಂದ ಇಲ್ಲಿಯವರೆಗೆ 154 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ಅವುಗಳ ಪೈಕಿ ಇಲ್ಲಿಯವರೆಗೆ ಕೇವಲ 4 ಜನರು ಬದುಕುಳಿದಿದ್ದಾರೆ ಎನ್ನಲಾಗಿದೆ. ಅಮೆರಿಕ ಮೂಲದ 22 ವರ್ಷದ ವ್ಯಕ್ತಿ ಈ ಸೋಂಕಿಗೆ ತುತ್ತಾಗಿ ಬದುಕುಳಿದ ಅದೃಷ್ಟಶಾಲಿಗಳಲ್ಲಿ ಒಬ್ಬರಾಗಿದ್ದಾರೆ. ಸೆಬಾಸ್ಟಿನ್ ಡಿಲಿಯಾನ್ 16 ವರ್ಷದವನಾಗಿದ್ದಾಗ ಫ್ಲೋರಿಡಾದ ಈಜುಕೊಳದಲ್ಲಿ ಈಜಾಡಿದ ಬಳಿಕ ಅಮೀಬಾ ಸೋಂಕಿಗೆ ಒಳಗಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಗುಣಪಡಿಸಲಾಗಿತ್ತು.

ರೋಗದ ಬಗ್ಗೆ ಸೋಂಕಿತರು ಹೇಳೋದೇನು?
ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುವ ಸೆಬಾಸ್ಟಿನ್, ಸೋಕಿಗೆ ಒಳಗಾದ ಸಂದರ್ಭ ತೀವ್ರವಾದ ತಲೆನೋವು ಕಾಣಿಸಿಕೊಂಡಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ ನನ್ನ ತಲೆ ಮೇಲೆ ದೊಡ್ಡ ಕಲ್ಲನ್ನು ಇಟ್ಟು ಒತ್ತಿದಂತೆ ಎನಿಸುತ್ತಿತ್ತು ಎಂದು ತಿಳಿಸಿದ್ದಾರೆ.

Brain eating amoeba 5

ಚಿಕಿತ್ಸೆ ಏನು?
ಸೆಬಾಸ್ಟಿನ್ ಅವರನ್ನು ಪರೀಕ್ಷಿಸಿದ ತಕ್ಷಣ ವೈದ್ಯರು ಅದು ಅಮೀಬಾ ಎಂದು ಪತ್ತೆ ಹಚ್ಚಿದ್ದರು. ಈ ಸೋಕಿಗೆ ಇಂಪಾವಿಡೋ ಎಂಬ ಔಷಧಿ ನೀಡಿ ಗುಣಪಡಿಸಲಾಗಿತ್ತು. 72 ಗಂಟೆ ಕೋಮಾದಲ್ಲಿದ್ದ ಸೆಬಾಸ್ಟಿನ್ ಬಳಿಕ ನಿಧಾನವಾಗಿ ಚೇತರಿಸಿಕೊಂಡರು. ಆದರೆ ಅವರು ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಇದೆಲ್ಲದರ ಬಳಿಕ ಅವರ ಮೆದುಳು ಉಬ್ಬಿಕೊಂಡಿದ್ದು, ತಮ್ಮ ಕೆಲ ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ಮರೆತಿದ್ದರು. ಬಳಿಕ ಅವರನ್ನು ಪುನರುಜ್ಜೀವನ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿ ಅವರು ನಡೆಯುವುದು, ಓಡುವುದು, ಬರೆಯುವುದನ್ನು ಮತ್ತೆ ಕಲಿತುಕೊಂಡರು.

ಭಾರತದಲ್ಲಿ ಭೀತಿ?
ನೆಗ್ಲೇರಿಯಾ ಫೌಲೆರಿ ಅಮೀಬಾ ಜಗತ್ತಿನ ಎಲ್ಲ ಖಂಡಗಳಲ್ಲಿ ಕಂಡುಬರುತ್ತವೆ ಎನ್ನಲಾಗಿದೆ. 2015 ರಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನವೊಂದರ ಪ್ರಕಾರ, ಈ ಅಮೀಬಾ ಹರಿಯಾಣ ರಾಜ್ಯದ ರೋಹ್ತಕ್ ಹಾಗೂ ಝಜ್ಜರ್ ಜಿಲ್ಲೆಯಲ್ಲಿರುವ ನೀರಿನ ಪ್ರದೇಶಗಳಲ್ಲಿ ಕಂಡುಬಂದಿದೆ ಎನ್ನಲಾಗಿದೆ.

Brain eating amoeba 2

ಮುನ್ನೆಚ್ಚರಿಕಾ ಕ್ರಮ:
ಅಮೀಬಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಬದಲಿಗೆ ನೀರಿನ ಮೂಲಗಳಿಂದ ಹರಡುವ ಸಾಧ್ಯತೆಯಿದೆ. ಮೂಗಿನ ಮೂಲಕ ಸೋಂಕು ಮನುಷ್ಯನ ದೇಹ ಪ್ರವೇಶಿಸುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕು ವರದಿಯಾದ ಪ್ರದೇಶಗಳಲ್ಲಿ ನೀರಿನಲ್ಲಿ ಈಜಾಡದಂತೆ ಸೂಚಿಸಲಾಗುತ್ತದೆ.

Live Tv
[brid partner=56869869 player=32851 video=960834 autoplay=true]

TAGGED:Brain eating amoebaInfectionNaegleria fowlerisouth koreaದಕ್ಷಿಣ ಕೊರಿಯಾನೆಗ್ಲೇರಿಯಾ ಫೌಲೆರಿಮೆದುಳು ತಿನ್ನುವ ಅಮೀಬಾಸೋಂಕು
Share This Article
Facebook Whatsapp Whatsapp Telegram

Cinema news

jayamala
ಹಿರಿಯ ನಟಿ ಜಯಮಾಲಾಗೆ ಡಾ. ರಾಜ್‌ಕುಮಾರ್‌ ಪ್ರಶಸ್ತಿ
Cinema Latest Main Post Sandalwood
Kichcha Sudeep Rocking Star Yash
ಈ ಹೊಸ ಹೆಜ್ಜೆ ನಿಮಗೆ ಅದೃಷ್ಟ ತರಲಿ – ಯಶ್‍ಗೆ ಕಿಚ್ಚನ ಹಾರೈಕೆ
Cinema Latest Sandalwood Top Stories
Toxic Teaser RGV
ಟಾಕ್ಸಿಕ್ ಟೀಸರ್ ನೋಡಿ ಆರ್‌ಜಿವಿ ಹೇಳಿದ್ದೇನು ಗೊತ್ತಾ..?
Cinema Latest Top Stories
Toxic Movie Yash
ಟಾಕ್ಸಿಕ್ ರಾಯ ಹೆಸರಿನ ಗುಟ್ಟು ಇದೇನಾ..?
Cinema Latest Sandalwood Top Stories

You Might Also Like

6 year old child murdered in bengalurus whitefield police station area accused arrested
Bengaluru City

ಬೆಂಗಳೂರು | ಸ್ನೇಹಿತನ ಹೆಂಡ್ತಿ ಮೇಲಿನ ಸೇಡಿಗೆ 6 ವರ್ಷದ ಮಗಳ ಹತ್ಯೆ – ಆರೋಪಿ ಅಂದರ್‌

Public TV
By Public TV
29 minutes ago
Thanisandra Demolition
Bengaluru City

ಕೋಗಿಲು ಲೇಔಟ್ ಬಳಿಕ ಥಣಿಸಂದ್ರದಲ್ಲಿ ಬಿಡಿಎ ಆಪರೇಷನ್ ಶೆಡ್ – 100 ಕೋಟಿ ಮೌಲ್ಯದ ಆಸ್ತಿ ವಶ, 22 ಮನೆ ತೆರವು

Public TV
By Public TV
1 hour ago
siddaramaiah KREDL
Bengaluru City

ಸಿಎಂಗೆ 77.17 ಕೋಟಿ ರೂ. ಲಾಭಾಂಶ ಅರ್ಪಿಸಿದ ಕ್ರೆಡಲ್: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ.

Public TV
By Public TV
1 hour ago
Haveri Student Bus Accident
Crime

ಸಾರಿಗೆ ಬಸ್ ಡಿಕ್ಕಿ – ವಿದ್ಯಾರ್ಥಿಗೆ ಗಂಭೀರ ಗಾಯ

Public TV
By Public TV
2 hours ago
Bangladeshi Hindu Man Dipu Das Lynching Case
Latest

ಬಾಂಗ್ಲಾದೇಶದ ಹಿಂದೂ ವ್ಯಕ್ತಿ ದೀಪು ದಾಸ್ ಹತ್ಯೆ ಕೇಸ್‌ – ಪ್ರಮುಖ ಆರೋಪಿ ಬಂಧನ

Public TV
By Public TV
2 hours ago
air india express
Latest

ಜೈಪುರದಿಂದ ಬೆಂಗ್ಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಮಗುವಿಗೆ ಉಸಿರಾಟದ ಸಮಸ್ಯೆ – ಇಂದೋರ್‌ನಲ್ಲಿ ತುರ್ತು ಭೂಸ್ಪರ್ಶ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?