ಹಾಸನ: ಅಪಘಾತವಾಗಿ ಬ್ರೈನ್ ಡೆಡ್ (Brain Dead) ಆದ ಮಗನ ಅಂಗಾಂಗಗಳನ್ನು ಪೋಷಕರು ದಾನ ಮಾಡುವ ಮೂಲಕ ಸಾವಿನ ನೋವಲ್ಲೂ ಸಾರ್ಥಕತೆ ಮೆರೆದ ಘಟನೆ ಹಾಸನದಲ್ಲಿ ನಡೆದಿದೆ.
ಅಪಘಾತಕ್ಕೀಡಾದವನನ್ನು ಚಂದು (17) ಎಂದು ಗುರುತಿಸಲಾಗಿದೆ. ಈತ ಹಾಸನ (Hassan) ಜಿಲ್ಲೆಯ ಆಲೂರು ತಾಲೂಕಿನ ಹೊಲ್ಲಹಳ್ಳಿಯ ಸೋಮಶೇಖರ್ ಮೀನಾಕ್ಷಿ ದಂಪತಿ ಪುತ್ರ. ಇದೀಗ ಅಪಘಾತವಾಗಿ ಬ್ರೇನ್ ಡೆಡ್ ಆದ ಮಗನ ಅಂಗಾಂಗ ದಾನ ಮಾಡುವ ಮಗನ ಸಾವಿನ ನೋವಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಇದನ್ನೂ ಓದಿ: ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಮಡಿಕೇರಿಯ ಯುವಕ ಸಮುದ್ರಪಾಲು
Advertisement
Advertisement
ಪ್ರಥಮ ಪಿಯುಸಿ ಓದುತ್ತಿದ್ದ ಚಂದು, ಜನವರಿ 8 ರಂದು ಆಲೂರು ಸಮೀಪ ಕಾರು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಚಂದುವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಶುಕ್ರವಾರ ಬೆಂಗಳೂರಿನಲ್ಲಿ ಚಂದು ಪೋಷಕರು ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
Advertisement
ಇಂದು ಆಲೂರಿನ ತಾಲೂಕು ಕ್ರೀಡಾಂಗಣದಲ್ಲಿ ಅಗಲಿದ ವಿದ್ಯಾರ್ಥಿಗೆ ತಾಲೂಕಿನ ಜನತೆ ಅಂತಿಮ ನಮನ ಸಲ್ಲಿಸಿದರು.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k