ನವದೆಹಲಿ: ಭಾರತದ ʻಆಪರೇಷನ್ ಸಿಂಧೂರʼಕ್ಕೆ (Operation Sindoor) ತತ್ತರಿಸಿರುವ ಪಾಕ್ ಪ್ರತಿದಾಳಿಗೆ ಹೊಂಚು ಹಾಕಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ದೇಶದ ಕಾರ್ಯತಂತ್ರ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತ ಬಹುದೊಡ್ಡ ಹೆಜ್ಜೆಯನ್ನಿಟ್ಟಿದೆ. ಶಕ್ತಿಶಾಲಿ ಅಸ್ತ್ರವಾದ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ (BrahMos Missile Manufacturing Unit) ಲಕ್ನೋದಲ್ಲಿ ತಲೆಎತ್ತಿದ್ದು, ಮೇ 11ರಂದು ಉದ್ಘಾಟಿಲಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ʻಬ್ರಹ್ಮೋಸ್ʼ ವಿಶ್ವದ ಅತ್ಯಂತ ವೇಗದ ಮತ್ತು ವಿನಾಶಕಾರಿ ಕ್ಷಿಪಣಿಗಳಲ್ಲಿ ಒಂದಾಗಿದೆ ಎಂಬುದೇ ವಿಶೇಷ. ಹಾಗಾಗಿ ಕ್ಷಿಪಣಿ ಉತ್ಪಾದನಾ ಘಟಕವು ಉತ್ತರ ಪ್ರದೇಶದ ರಕ್ಷಣಾ ವಲಯಕ್ಕೆ ಮಾತ್ರವಲ್ಲದೇ, ಇಡೀ ಭಾರತದ ರಕ್ಷಣಾ ವಲಯಕ್ಕೆ ಬಲ ತುಂಬಲಿದೆ. ಇದನ್ನೂ ಓದಿ: ಬಾಲಾಕೋಟ್, ಬ್ರಹ್ಮೋಸ್ ಬಳಿಕ ʻಆಪರೇಷನ್ ಸಿಂಧೂರʼ – ಪಾಕ್ ನಂಬಿದ್ದ ʻಮೇಡ್ ಇನ್ ಚೈನಾʼ ರೆಡಾರ್ ಫೇಲ್
ಇದು ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ ಸರ್ಕಾರಿ ಸಂಸ್ಥೆ NPO ಮಶಿನೋಸ್ಟ್ರೋನಿನ್ಯಾ ನಡುವಿನ ಜಂಟಿ ಉದ್ಯಮವಾಗಿದೆ. ಇದರಲ್ಲಿ ಭಾರತದ ಪಾಲು ಶೇ.50.5 ಮತ್ತು ರಷ್ಯಾದ ಪಾಲು ಶೇ.49.5 ರಷ್ಟಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: JEM ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಜನ ಸೇರಿ 14 ಮಂದಿ ಹತ್ಯೆ
ಈ ಕುರಿತು ಮಾಹಿತಿ ನೀಡಿರುವ UPEIDAನ ಹೆಚ್ಚುವರಿ ಸಿಇಓ ಹರಿ ಪ್ರತಾಪ್ ಶಾಹಿ (Shrihari Pratap Shahi), ಈ ಘಟಕವನ್ನು ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಯುಪಿ ರಾಜ್ಯ ಸರ್ಕಾರವು ಲಕ್ನೋದಲ್ಲಿ 80 ಹೆಕ್ಟೇರ್ ಭೂಮಿಯನ್ನು ಉಚಿತವಾಗಿ ನೀಡಿದೆ. ಸುಮಾರು ಮೂರು ವರ್ಷಗಳ ದಾಖಲೆ ಸಮಯದ ಬಳಿಕ ಘಟಕ ನಿರ್ಮಾಣ ಪೂರ್ಣಗೊಂಡಿದ್ದು, ರಾಜ್ಯದ ಮೊದಲ ಹೈಟೆಕ್ ರಕ್ಷಣಾ ಉತ್ಪಾದನಾ ಕೇಂದ್ರ ಇದಾಗಲಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: Operation Sindoor – ಪಾಕ್ ಉಗ್ರರ 9 ನೆಲೆಗಳ ಮೇಲೆ ಏರ್‌ಸ್ಟ್ರೈಕ್
ಮುಂದುವರಿದು… ಈ ಘಟಕದಲ್ಲಿ ಬ್ರಹ್ಮೋಸ್ ಕ್ಷಿಪಣಿ ಜೊತೆಗೆ ಇತರ ರಕ್ಷಣಾ ಉತ್ಪನ್ನಗಳು ಹಾಗೂ ಏರೋಸ್ಪೇಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳನ್ನೂ ತಯಾರಿಸಲಾಗುತ್ತದೆ. ಸುಮಾರು 500 ಮುಖ್ಯ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದು, ಸಾವಿರಾರು ಮಂದಿ ಸಹ ಸಿಬ್ಬಂದಿಗಳೂ ಸಹ ಇರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ʼಆಪರೇಷನ್ ಸಿಂಧೂರ್ʼ ಟ್ರೇಡ್ ಮಾರ್ಕ್‌ಗಾಗಿ ರಿಲಯನ್ಸ್ ಸೇರಿ ಹಲವರಿಂದ ಅರ್ಜಿ
ಪಾಕ್‌ಗೆ ಏಕೆ ನಡುಕ?
2022ರ ಮಾರ್ಚ್ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು, ನೋವು ಸಂಭವಿಸದೇ ಇದ್ದರೂ ಈ ಕ್ಷಿಪಣಿಯನ್ನು ತಡೆಯಲು ಪಾಕಿಸ್ತಾನದಿಂದ ಸಾಧ್ಯವಾಗಿರಲಿಲ್ಲ. ಇದೀಗ ಯುದ್ಧದ ಛಾಯೆ ಕವಿದಿರುವ ಹೊತ್ತಿನಲ್ಲೇ ಭಾರತ ಬ್ರಹ್ಮೋಸ್ ಕ್ಷಿಪಣಿ ಘಟಕ ಉದ್ಘಾಟಿಸುತ್ತಿರುವುದು ಪಾಕ್‌ಗೆ ನಡುಕ ಉಂಟಾಗುವಂತೆ ಮಾಡಿದೆ. ಇದನ್ನೂ ಓದಿ: 9 ಉಗ್ರ ಅಡಗು ತಾಣಗಳ ಮಟಾಶ್ – ಯಾವ್ಯಾವ ಪ್ರದೇಶದಲ್ಲಿ ಯಾವ ಉಗ್ರ ಸಂಘಟನೆ ಇತ್ತು? ಅವುಗಳ ಪಾತ್ರ ಏನು?