ವಿಜಯಪುರ: ಈ ದೇಶದಲ್ಲಿ ನಿಜವಾದ ಅಲ್ಪಸಂಖ್ಯಾ ತರು ಅಂದ್ರೆ ಬ್ರಾಹ್ಮಣರು. ಅವರನ್ನ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸಬೇಕು ಅಂತಾ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BasanaGauda Patil Yatnal) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬ್ರಾಹ್ಮಣರು ಕೇವಲ ಶೇಕಡಾ 2 ರಿಂದ 3 ರಷ್ಟಿದ್ದಾರೆ. ನಿಜವಾದ ಅಲ್ಪ ಸಂಖ್ಯಾತರು ಬ್ರಾಹ್ಮಣರು. ಅಲ್ಪ ಸಂಖ್ಯಾತ ಪಟ್ಟಿಯಲ್ಲಿ ಬ್ರಾಹ್ಮಣ (Brahmins) ರನ್ನ ಸೇರಿಸಬೇಕು, ಇದು ನನ್ನ ವಾದ ಎಂದರು.
ಮುಸ್ಲಿಮರು ಅಲ್ಪ ಸಂಖ್ಯಾತರು ಅಲ್ಲವೇ ಅಲ್ಲಾ. ಒಂದು ಜನಾಂಗದಷ್ಟಿರುವ ಮುಸ್ಲಿಂ ಹೇಗೆ ಅಲ್ಪ ಸಂಖ್ಯಾತರಾಗ್ತಾರೆ. ದೇಶದ್ರೋಹಿ ಕೆಲಸ ಮಾಡೋದು, ಪಾಕಿಸ್ತಾನ (Pakistan) ದ ಪರ ಮಾತನಾಡೋದು ಈಗ ಮೀಸಲಾತಿ ಬೇಕು ಅಂದ್ರೆ ಹೇಗೆ ಎಂದು ವಾಗ್ದಾಳಿ ನಡೆಸಿದರು.
ಬಹಳ ಸೌಲಭ್ಯ ಬೇಕಿದ್ದರೆ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಕಿಡಿ ಕಾರಿದರು.