ಪಾಟ್ನಾ: ಬ್ರಾಹ್ಮಣ (Brahmins) ಸಮುದಾಯದವರು ಭಾರತಕ್ಕೆ ಸೇರಿದವರಲ್ಲ. ಅವರು ರಷ್ಯಾದಿಂದ (Russia) ಬಂದವರು ಎಂದು ಆರ್‌ಜೆಡಿ (RJD) ನಾಯಕ ಯದುವಂಶ್ ಕುಮಾರ್ ಯಾದವ್ (Yaduvansh Kumar Yadav) ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
ಬಿಹಾರದ (Bihar) ಸುಪೌಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಡಿಎನ್‌ಎ (DNA) ಪರೀಕ್ಷೆ ಬ್ರಾಹ್ಮಣರು ಭಾರತ ದೇಶಕ್ಕೆ ಸೇರಿಲ್ಲ ಎಂಬುದನ್ನು ತೋರಿಸುತ್ತದೆ. ಅವರು ರಷ್ಯಾದಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಬ್ರಾಹ್ಮಣರು ನಮ್ಮನ್ನು ವಿಭಜಿಸಿ ದೇಶವನ್ನು ಆಳಲು ಯತ್ನಿಸುತ್ತಿದ್ದಾರೆ. ಯಾದವ ಸಮುದಾಯಕ್ಕೆ ಸೇರಿದ ಜನರು ಮೂಲತಃ ಈ ದೇಶದವರು. ಬ್ರಾಹ್ಮಣರನ್ನು ಇಲ್ಲಿಂದ ಓಡಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದರು. ಇದನ್ನೂ ಓದಿ: ಮೋದಿ ಸಾಕ್ಷ್ಯಾಚಿತ್ರ ಪ್ರಕರಣ – ಬಿಬಿಸಿಗೆ ಸಮನ್ಸ್ ನೀಡಿದ ದೆಹಲಿ ಕೋರ್ಟ್
Advertisement
Advertisement
ಯದುವಂಶ್ ಕುಮಾರ್ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ. ಆರ್‌ಜೆಡಿ ನಾಯಕನ ಈ ಹೇಳಿಕೆಯನ್ನು ಬಿಜೆಪಿ (BJP) ನಾಚಿಕೆಗೇಡಿನ ಸಂಗತಿ ಎಂದು ಕರೆದಿದೆ. ಇಂತಹ ಜನರೇ ನಮ್ಮ ರಾಷ್ಟ್ರದಲ್ಲಿ ಕೋಮು ಗಲಭೆಗೆ ಕಾರಣವಾಗಿದ್ದು, ಅವರು ಬಿಹಾರವನ್ನು ಆಳುತ್ತಿರುವುದು ವಿಪರ್ಯಾಸದ ಸಂಗತಿ ಎಂದಿದೆ. ಇದನ್ನೂ ಓದಿ: ಅಕ್ರಮ ಆಸ್ತಿ ಸಂಪಾದನೆ – ಕೇಂದ್ರದ ಮಾಜಿ ನೌಕರ ಅರೆಸ್ಟ್
Advertisement
Advertisement
ಈ ಕುರಿತು ಬಿಜೆಪಿ ನಾಯಕ ಅಮಿತ್ ರಕ್ಷಿತ್ (Amit Rakshit) ತಮ್ಮ ಟ್ವಿಟ್ಟರ್‌ನಲ್ಲಿ, ಡಿಎನ್‌ಎ ಪರೀಕ್ಷೆಯು ಈ ದೇಶಕ್ಕೆ ಸೇರಿಲ್ಲ. ಇವರು ರಷ್ಯಾದಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಅವರನ್ನು ಇಲ್ಲಿಂದ ಓಡಿಸಬೇಕು ಎಂಬ ಆರ್‌ಜೆಡಿ ನಾಯಕನ ಹೇಳಿಕೆ ಅತ್ಯಂತ ನಾಚಿಗೇಡಿನ ಸಂಗತಿ ಎಂದು ಟ್ವೀಟ್ (Tweet) ಮಾಡಿದ್ದಾರೆ. ಇದನ್ನೂ ಓದಿ: ಒಡಿಶಾಗೆ ಅಪ್ಪಳಿಸಲಿದೆ ವರ್ಷದ ಮೊದಲ ಸೈಕ್ಲೋನ್ ಮೋಚಾ