ರಣಬೀರ್ ಕಪೂರ್ ಮೇಲಿನ ಕೋಪದಿಂದಾಗಿ ಹಿಂದೂಪರ ಸಂಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್ ಬ್ರಹ್ಮಾಸ್ತ್ರ’ (Boycott) ಹೋರಾಟ ಶುರು ಮಾಡಿದ್ದರು. ರಣಬೀರ್ ಕಪೂರ್ ಗೋಮಾಂಸ ತಿನ್ನುತ್ತೇನೆ ಎಂದು ಹೇಳುವ ಮೂಲಕ ಅಸಂಖ್ಯಾತ ಹಿಂದೂಗಳ ಭಾವನೆಯನ್ನು ಕೆರಳಿಸಿದ್ದಾರೆ. ಹಾಗಾಗಿ ಬ್ರಹ್ಮಾಸ್ತ್ರ (Brahmastra) ಸಿನಿಮಾ ನೋಡಬೇಡಿ ಎಂದು ಫೇಸ್ ಬುಕ್ ನಲ್ಲಿ ಟ್ರೆಂಡಿಂಗ್ ಮಾಡಿದ್ದರು. ಅಲ್ಲದೇ, ರಣಬೀರ್ ಕಪೂರ್ ಅವರನ್ನು ದೇವಸ್ಥಾನದ ಒಳಗೂ ಬಿಟ್ಟುಕೊಳ್ಳಲಿಲ್ಲ. ಬ್ರಹ್ಮಾಸ್ತ್ರ ನೋಡದಿರುವಂತೆ ಏನೇ ತಡೆದರೂ, ಕೊನೆಗೂ ಸಿನಿಮಾ ಗೆದ್ದಿದೆ.
ಬ್ರಹ್ಮಾಸ್ತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 75 ಕೋಟಿ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಏನೇ ನೆಗೆಟಿವ್ ಪ್ರಚಾರ ಮಾಡಿದರೂ, ಸಿನಿಮಾ ಚೆನ್ನಾಗಿದ್ದ ಕಾರಣಕ್ಕಾಗಿ ಜನರು ಮುಗಿಬಿದ್ದು ನೋಡುತ್ತಿದ್ದಾರೆ ಎಂದು ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಹಣದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ (Bollywood) ಸಿನಿಮಾವೊಂದು ಈ ಪ್ರಮಾಣದಲ್ಲಿ ದುಡ್ಡು ಮಾಡದೇ ಇರುವ ಕಾರಣಕ್ಕಾಗಿ ಬ್ರಹ್ಮಾಸ್ತ್ರ ಒಂದು ರೀತಿಯಲ್ಲಿ ಬಾಲಿವುಡ್ ಗೆ ಟಾನಿಕ್ ಅಂತಾಗಿದೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್
ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ ಕಾಂಬಿನೇಷನ್‍ನ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ದಕ್ಷಿಣದಲ್ಲಿ ಸ್ವತಃ ರಾಜಮೌಳಿ (Rajamouli) ಮತ್ತು ಜ್ಯೂನಿಯರ್ ಎನ್.ಟಿ.ಆರ್ ಮುಂದೆ ನಿಂತುಕೊಂಡು ಸಿನಿಮಾ ರಿಲೀಸ್ ಮಾಡಿಸಿದ್ದಾರೆ. ಈ ಚಿತ್ರಕ್ಕಾಗಿ ದೊಡ್ಡ ಪ್ರಮಾಣದ ಇವೆಂಟ್ ಕೂಡ ಹೈದರಾಬಾದ್‍ನಲ್ಲಿ ನಡೆಯೋದಿತ್ತು. ಪೊಲೀಸರು ಭದ್ರತೆ ನೀಡಲು ನಿರಾಕರಿಸಿದ ಕಾರಣದಿಂದಾಗಿ ಇವೆಂಟ್ ನಡೆಯಲಿಲ್ಲ. ಆದರೂ, ಸಿನಿಮಾ ಚೆನ್ನಾಗಿಯೇ ಓಪನಿಂಗ್ ಪಡೆದುಕೊಂಡಿದೆ. ಎರಡೇ ದಿನದಲ್ಲಿ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಲಿದೆ ಎಂದು ಅಂದಾಜಿಸಲಾಗುತ್ತಿದೆ.