ಮಡಿ, ಮೈಲಿಗೆ ಹೆಸರಲ್ಲಿ ಬ್ರಾಹ್ಮಣ್ಯ ನಮ್ಮನ್ನು ಕೀಳಾಗಿ ಮಾಡಿದೆ: ನಟ ಚೇತನ್‌

Public TV
2 Min Read
Chetan

ಮಡಿಕೇರಿ: ಕಳೆದ 3,500 ವರ್ಷಗಳಿಂದಲೂ ಮಡಿ ಮೈಲಿಗೆ ಹೆಸರಿನಲ್ಲಿ ಬ್ರಾಹ್ಮಣ್ಯ ನಮ್ಮನ್ನು ಕೀಳಾಗಿ ಮಾಡಿದೆ, ಕೆಳಸ್ತರಲ್ಲಿಟ್ಟಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕಿಡಿ ಕಾರಿದ್ದಾರೆ.

ಮಡಿಕೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣ್ಯ ನಮ್ಮನ್ನು ಕೀಳಾಗಿ ಮಾಡಿದೆ. ನಮಗೆ, ಬುದ್ಧ, ಬಸವ, ಅಂಬೇಡ್ಕರರು ಹೇಳಿದಂತೆ ಸಮಾನತೆ ಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೊಟ್ಟ ಬೊಕ್ಕೆ ಬಿಸಾಕಿ ಸಿದ್ದರಾಮಯ್ಯ ಕೋಪ ಮಾಡಿಕೊಂಡಿದ್ದು ಏಕೆ?

chetan 13 1

ಆರ್ಯನ್ನರ ಡಿಎನ್‌ಎ ನೋಡಿದರೆ ಸಾಕು ವಲಸೆ ಬಂದವರೆಂದು ತಿಳಿಯುತ್ತದೆ. ಅವರು ಇರಾನ್‌, ಪರ್ಷಿಯನ್‌ ಹಾಗೂ ಮಧ್ಯ ಏಷ್ಯಾದಿಂದ ಬಂದವರು. ಆರ್ಯನ್‌, ಬ್ರಾಹ್ಮಣ್ಯ, ಸಂಸ್ಕೃತ ವೇದ ಇವೆಲ್ಲವೂ ಪರದೇಶದ್ದು. ಭಾರತದಲ್ಲಿ ಹುಟ್ಟಿದ್ದು ಬೌದ್ಧ ಧರ್ಮ,  ಬಸವ, ಅಂಬೇಡ್ಕರ್‌, ಸಿಖ್‌, ಪೆರಿಯಾರ್‌ ಧರ್ಮಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: RSS ಬಗ್ಗೆ ಸಿದ್ದರಾಮಯ್ಯಗೆ 1 ಪರ್ಸೆಂಟ್ ಅಷ್ಟೂ ಗೊತ್ತಿಲ್ಲ: ಎಸ್.ಟಿ.ಸೋಮಶೇಖರ್ ತಿರುಗೇಟು

ಹಿಂದಿನಿಂದಲೂ ಬ್ರಾಹ್ಮಣ್ಯೀಕರಣದಿಂದ ದೇಶದ ಮೂಲ ನಿವಾಸಿಗಳಿಗೆ ಅನ್ಯಾಯವಾಗಿದೆ. ಮೇಲು, ಕೀಳು ಎಂಬ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿ ಮೂಲ ನಿವಾಸಿಗಳ ಶೋಷಣೆ ಮಾಡುತ್ತಿದೆ. ಅದನ್ನು ಸರಿಪಡಿಸಬೇಕಾದ ಅಗತ್ಯವಿದೆ. ಮೂಲ ನಿವಾಸಿಗಳು ಅಂದರೆ ಎಸ್ಸಿ, ಎಸ್ಟಿ, ಓಬಿಸಿ ಅಲ್ಪಸಂಖ್ಯಾತರು. ಈ ದೇಶದ ಬಹುಜನರಿಗೆ ನ್ಯಾಯ ದೊರಕಬೇಕಾಗಿದೆ. ಮೇಲ್ವರ್ಗದ ಗಂಡಸರೇ ನಮ್ಮನ್ನು ಅಳುತ್ತಿದ್ದಾರೆ. ಅವರಿಂದ ಬ್ರಾಹ್ಮಣ್ಯದ ಅಂಶಗಳು ಹೇರಲ್ಪಟ್ಟು ಶೋಷಣೆ ನಡೆಯುತ್ತಿದೆ. ಇದನ್ನು ತಪ್ಪಿಸಬೇಕಾದರೆ ದೇಶದಲ್ಲಿ ದೊಡ್ಡ ಸಂಘಟನೆ ಆಗಬೇಕಾಗಿದೆ ಎಂದು ಕರೆ ನೀಡಿದರು.

Siddaramaiah

ಆರ್ಯನ್ನರು ಪಶ್ಚಿಮ ಏಷ್ಯಾದಿಂದ ಬಂದಿರುವವರು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿ ಸತ್ಯವಿದೆ. ಆರ್ಯರು 3,500 ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದವರು. ಸೌರಾಷ್ಟ್ರೀಕರಣದಿಂದ ಪ್ರಭಾವಿತರಾಗಿ ಬಂದಿದ್ದಾರೆ. ಅದಕ್ಕೆ ದಾಖಲೆ, ಅಂಕಿ-ಅಂಶ, ಇತಿಹಾಸವಿದೆ. ಅದನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ. ಆ ಸತ್ಯ ಇತಿಹಾಸ ನಮಗೆ ಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ತಾಕತ್ತಿದ್ದರೆ SDPIನ್ನು ನಿಷೇಧ ಮಾಡಲಿ: ದಿನೇಶ್ ಗುಂಡೂರಾವ್

ನಮಗೆ ರಾಜಕಾರಣಕ್ಕಾಗಿ ಹೇಳುವ ಸುಳ್ಳು ಇತಿಹಾಸ ನಮಗೆ ಬೇಕಾಗಿಲ್ಲ. ಹಾಗೆಂದ ಮಾತ್ರಕ್ಕೆ ಅವರನ್ನು ಇಲ್ಲಿಂದ ಓಡಿಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಅವರೆಲ್ಲರೂ ಈ ದೇಶದ ನಾಗರಿಕರೇ, ಅವರೆಲ್ಲರೂ ಇಲ್ಲೇ ಬದುಕಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *