CinemaKarnatakaLatestMain PostSandalwoodSouth cinema

ಪ್ರಶಾಂತ್ ರಾಜ್ ನಿರ್ದೇಶನದ ತಮಿಳಿನ ‘ಕಿಕ್’ ಸಿನಿಮಾದಲ್ಲಿ ಬ್ರಹ್ಮಾನಂದಂ ನಟನೆ

ನ್ನಡದ ಖ್ಯಾತ ಯುವ ನಿರ್ದೇಶಕ ಪ್ರಶಾಂತ್ ರಾಜ್ (Prashanth Raj) ಸದ್ದಿಲ್ಲದೇ ತಮಿಳು ಸಿನಿಮಾ ರಂಗಕ್ಕೆ ಹಾರಿ, ಚಿತ್ರದ ಟೈಟಲ್ ಅನ್ನು ಅನಾವರಣಗೊಳಿಸುವ ಮೂಲಕ ಸಖತ್ ಸದ್ದು ಮಾಡಿದ್ದಾರೆ. ಇದೀಗ ಮತ್ತೊಂದು ಕಾರಣಕ್ಕಾಗಿ ಈ ಸಿನಿಮಾ ಸುದ್ದಿಗೆ ಬಂದಿದೆ. ಈ ಚಿತ್ರದಲ್ಲಿ ತೆಲುಗಿನ ಖ್ಯಾತ ಕಾಮೆಡಿಯನ್ ಬ್ರಹ್ಮಾನಂದಂ (Brahmanandam) ಅವರು ನಟಿಸುತ್ತಿದ್ದು, ವಾಲಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದೊಂದು ವಿಜ್ಞಾನಿಯ ಪಾತ್ರವಾಗಿದೆಯಂತೆ.

ತಮ್ಮ ಚೊಚ್ಚಲು ತಮಿಳು ಚಿತ್ರಕ್ಕೆ ಕಿಕ್ (Kick) ಎಂದು ಹೆಸರಿಟ್ಟಿರುವ ಪ್ರಶಾಂತ್ ರಾಜ್, ಕನ್ನಡದ ಹಲವು ಪ್ರತಿಭೆಗಳನ್ನು ತಮ್ಮೊಂದಿಗೆ ತಮಿಳಿಗೂ ಕರೆದುಕೊಂಡು ಹೋಗಿದ್ದಾರೆ. ಕಾಮಿಡಿ ಸಿನಿಮಾಗಳ ಮೂಲಕ ತಮಿಳಿನ ಪ್ರೇಕ್ಷಕರ ಮನ ಗೆದ್ದಿರುವ ಸಂತಾನಂ (Santhanam) ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಬಸಣ್ಣಿ ಬಾ ಹಾಡಿನ ಖ್ಯಾತಿಯ ತಾನ್ಯ ಹೋಪ್ (Tanya Hope) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಪ್ಪದ ಬೆಡಗಿ ರಾಗಿಣಿ (Ragini) ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:‘ಹನಿಮೂನ್’ ಗೂ ಮುನ್ನ ಮನೆದೇವರ ಆಶೀರ್ವಾದ ಪಡೆದ ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್

ಈ ಕುರಿತು ಮಾತನಾಡಿದ ಪ್ರಶಾಂತ್ ರಾಜ್, ‘ಬ್ರಹ್ಮಾನಂದಂ ನನ್ನಿಷ್ಟದ ನಟ. ಈ ಸಿನಿಮಾದಲ್ಲಿ ಕಾಮಿಡಿಗೂ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿ ಸಾಧು ಕೋಕಿಲಾ (Sadhu Kokila) ಕೂಡ ಸಿನಿಮಾದಲ್ಲಿ ಇದ್ದಾರೆ. ಈ ಸಿನಿಮಾದ ಮೂಲಕ ಫ್ರೆಶ್ ಆಗಿರುವ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇನೆ’ ಅಂತಾರೆ. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Live Tv

Leave a Reply

Your email address will not be published.

Back to top button