ಬೆಂಗಳೂರು: ಗೋವಿಂದರಾಜನಗರ (Govindarajanagara) ವಿಧಾನಸಭಾ ಕ್ಷೇತ್ರದ ಡಾ.ರಾಜಕುಮಾರ್ ವಾರ್ಡ್‌ನ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀಪಾಂಚರಾತ್ರ ಪ್ರತಿಷ್ಠಾನ ಬ್ರಾಹ್ಮಣ ಭವನವನ್ನು (Brahmana Bhavana) ಶಾಸಕರಾದ ಎಂ.ಕೃಷ್ಣಪ್ಪ, ಪ್ರಿಯಕೃಷ್ಣ, ಯುವ ಮುಖಂಡರಾದ ಪ್ರದೀಪ್ ಕೃಷ್ಣಪ್ಪ ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಆಗಮ ಪಂಡಿತರು, ಪುರೋಹಿತರು, ಅರ್ಚಕರು ಭಾಗವಹಿಸಿದ್ದರು. ಶ್ರೀನಿವಾಸ್ ರಾಮಾನುಜಾ ಭಟ್ಟಾಚಾರ್ಯ ಅವರು ಮಾತನಾಡಿ, ಕೊಡುಗೈದಾನಿ ಎಂದೇ ಹೆಸರುವಾಸಿ ಇರುವ ಎಂ. ಕೃಷ್ಣಪ್ಪ ಅವರು ಇವತ್ತು ಬ್ರಾಹ್ಮಣ ಸಮಾಜಕ್ಕೆ ಕಲ್ಯಾಣ ಮಂಟಪ ನಿರ್ಮಿಸಿಕೊಟ್ಟಿದ್ದಾರೆ. ಕೃಷ್ಣಪ್ಪ ದೇವರ ಮೇಲೆ ತುಂಬಾ ಭಕ್ತಿ, ನಿಷ್ಠೆ, ಹೊಂದಿರುವವರು. ಅವರ ಸುಪುತ್ರರಾದ ಪ್ರಿಯಕೃಷ್ಣ ಹಾಗೂ ಪ್ರದೀಪ್ ಕೃಷ್ಣಪ್ಪ ಇವರಿಬ್ಬರೂ ರಾಮ ಲಕ್ಷ್ಮಣ ಇದ್ದಹಾಗೆ. ಸಮಾಜಸೇವೆ ಮಾಡುವ ಜೊತೆ ಸಂಸ್ಕಾರದಿಂದ ಮಾತನಾಡುವ ಗುಣವುಳ್ಳವರು. ಕೃಷ್ಣಪ್ಪ, ಪ್ರಿಯಕೃಷ್ಣ, ಹಾಗೂ ಪ್ರದೀಪ್ ಕೃಷ್ಣಪ್ಪ ಅವರಿಗೆ ಇನ್ನೂ ಹೆಚ್ಚು ಒಳ್ಳೆಯ ಕೆಲಸ ಮಾಡಲು ಭಗವಂತ ಆಶೀರ್ವಾದ ನೀಡಲಿ ಎಂದರು. ಇದನ್ನೂ ಓದಿ: ಪಿಜಿ ಅಲೈಡ್ ಹೆಲ್ತ್ ಸೈನ್ಸ್, ಎಂ.ಫಾರ್ಮ, ಫಾರ್ಮ-ಡಿಗೆ ಪ್ರವೇಶ ಪರೀಕ್ಷೆ: ಕೆಇಎ
ಶಾಸಕರಾದ ಎಂ.ಕೃಷ್ಣಪ್ಪ ಅವರು ಮಾತನಾಡಿ, ಬ್ರಾಹ್ಮಣರ ಮೇಲೆ ನಮಗೆ ಅಪಾರ ಗೌರವ ಇದೆ. ಬ್ರಾಹ್ಮಣರು ಎಂದರೆ ದೇವರ ಸಮಾನರೆಂದು ನಮ್ಮ ಭಾವನೆ. ನಾನು ಅವರಿಗೆ ನಿತ್ಯವೂ ನಮಸ್ಕರಿಸುತ್ತೇನೆ. ಸಮಾಜದಲ್ಲಿ ಯಾರೇ ತಪ್ಪು ಮಾಡಿದರೂ ಅವರನ್ನು ತಿದ್ದುವ ಕೆಲಸ ಮತ್ತು ಸಲಹೆ ನೀಡುವ ಕಾರ್ಯ ಬ್ರಾಹ್ಮಣ ಸಮುದಾಯದವರು ಮಾಡಬೇಕು. ಇವತ್ತು ವಿಶೇಷವಾಗಿ ಬ್ರಾಹ್ಮಣ ಸಮುದಾಯಕ್ಕೆ ಕಲ್ಯಾಣ ಮಂಟಪ ಉದ್ಘಾಟನೆ ಮಾಡಿರುವುದಕ್ಕೆ ನನಗೆ ಅತೀವ ಸಂತೋಷ ಆಗಿದೆ. ಶಾಸಕ ಪ್ರಿಯಕೃಷ್ಣ ಅವರು ಶ್ರೀಪಾಂಚರಾತ್ರ ಪ್ರತಿಷ್ಠಾನ ಭವನಕ್ಕೆ ಹೆಚ್ಚಿನ ಕಾಳಜಿ ವಹಿಸಿ ಬೇಗನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಇವತ್ತು ಉದ್ಘಾಟನೆ ಮಾಡಿ ಬ್ರಾಹ್ಮಣ ಸಮಾಜ ಜೊತೆ ಸದಾ ಇರುತ್ತೇವೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಭಾರತ ಈಗ ಸುಂಕ ಕಡಿಮೆ ಮಾಡೋಕೆ ಮುಂದಾಗಿದೆ – ಭಾರತದ ಜೊತೆಗಿನ ಸಂಬಂಧವನ್ನ ವಿಪತ್ತು ಎಂದ ಟ್ರಂಪ್
ಶಾಸಕರಾದ ಪ್ರಿಯಕೃಷ್ಣ ಮಾತನಾಡಿ, ಬ್ರಾಹ್ಮಣ ಸಮುದಾಯದ ಗುರೂಜಿಗಳು ಅವರು ಒಂದು ವರ್ಷದ ಹಿಂದೆ ನನಗೆ ಹಾಗೂ ಶಾಸಕರಾದ ಎಂ.ಕೃಷ್ಣಪ್ಪ ಅವರಿಗೆ ಸಮುದಾಯ ಭವನ ಬೇಕು ಅಂತಾ ಕೇಳಿದ್ರು. ಅವರ ಆಶಯದಂತೆ ನಿರ್ಮಿಸಿ ಇವತ್ತು ಉದ್ಘಾಟನೆ ಆಗಿದೆ. ಬ್ರಾಹ್ಮಣ ಸಮಾಜದವರ ಆಶೀರ್ವಾದ ಎಲ್ಲರ ಮೇಲೂ ಇರಲಿ. ಇನ್ನು ಏನೇ ಕೆಲಸ ಆಗಬೇಕು ಅಂತಾ ಇದ್ದರೆ ಹೇಳಿ, ನಿಮ್ಮ ಸೇವೆಗೆ ಸದಾ ಸಿದ್ಧ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಧರ್ಮಸ್ಥಳ ಪರ ಬಿಜೆಪಿ `ಧರ್ಮ’ ಸಮರ – ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹ
ಈ ಸಂದರ್ಭದಲ್ಲಿ ಶ್ರೀಪಾಂಚರಾತ್ರ ಪ್ರತಿಷ್ಠಾನ ಅಧ್ಯಕ್ಷರು ಕೆ.ಶೇಷಾದ್ರಿ, ಕೆ.ನರಸಿಂಹನ್, ಎಂ.ಮುರಳಿಕೃಷ್ಣ, ರಾಮಾನುಜಾ ಭಟ್ಟಾಚಾರ್ಯ, ಬಿ.ಕೆ ರಾಮಚಂದ್ರ ಭಟ್ಟಾಚಾರ್ಯ ಹಾಗೂ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ: ಸಿಇಟಿ ಛಾಯ್ಸ್ ಆಯ್ಕೆ, ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: ಕೆಇಎ