‘ಬ್ರಹ್ಮಗಂಟು’ ಸೀರಿಯಲ್ ನಟಿ ಶೋಭಿತಾ ಶಿವಣ್ಣ (Shobhitha Shivanna) ಆತ್ಮಹತ್ಮೆಗೆ ಸಹನಟ ಹರ್ಷ ಗೌಡ (Harsha Gowda) ಪ್ರತಿಕ್ರಿಯೆ ನೀಡಿದ್ದಾರೆ. ಶೋಭಿತಾ ಬಹಳ ಪಾಸಿಟಿವ್ ಆಗಿದ್ದವರು. ಹೀಗ್ಯಾಕೆ ಮಾಡಿಕೊಂಡರು ಗೊತ್ತಾಗುತ್ತಿಲ್ಲ ಎಂದು ಹರ್ಷ ‘ಪಬ್ಲಿಕ್ ಟಿವಿ’ಗೆ ಮಾತನಾಡಿದ್ದಾರೆ.
Advertisement
ಬ್ರಹ್ಮಗಂಟು ಸೀರಿಯಲ್‌ನಲ್ಲಿ ಶೋಭಿತಾ ಪತಿಯ ಪಾತ್ರದಲ್ಲಿ ನಟಿಸಿದ್ದ ಹರ್ಷ ಗೌಡ ಮಾತನಾಡಿ, ಶೋಭಿತಾ ಬಹಳ ಪಾಸಿಟಿವ್ ಆಗಿದ್ದವರು. ನಿನ್ನೆ (ಡಿ.1) ಮಧ್ಯಾಹ್ನ ನನಗೆ ಸ್ನೇಹಿತನಿಂದ ಶೋಭಿತಾ ಸೂಸೈಡ್ ವಿಚಾರ ಗೊತ್ತಾಯ್ತು. ಅವರು ಯಾಕೆ ಹೀಗೆ ಮಾಡಿಕೊಂಡಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ.
Advertisement
Advertisement
ನಾಲ್ಕೈದು ವರ್ಷ ನಾವು ಎರಡು ಸೀರಿಯಲ್‌ನಲ್ಲಿ ಒಟ್ಟಾಗಿ ನಟಿಸಿದ್ದೇವೆ. ಈ ಜರ್ನಿಯಲ್ಲಿ ಅವರು ಬಹಳ ಕಷ್ಟಪಟ್ಟು ಬಂದಿದ್ದರು. ಕೆಲವೊಮ್ಮೆ ಸಾಕಾಗಿದೆ, ಕೆಲಸ ಬಿಟ್ಟು ಬಿಡ್ತೀನಿ ಅಂತಾನೂ ಹೇಳುತ್ತಿದ್ದರು. ಮದುವೆಯ ಬಳಿಕ ನಟನೆ ಬಿಟ್ಟರು. ಆಗ ಕರೆ ಮಾಡಿ ಮದುವೆ ಫಿಕ್ಸ್ ಆಗಿದೆ ಅಂತ ಹೇಳಿದರು. ನಂತರ ಯಾವಾಗಲಾದರೂ ಅಪರೂಪಕ್ಕೆ ವಿಶೇಷ ದಿನಕ್ಕೆ ಮೆಸೇಜ್ ಮಾಡಿ ಶುಭ ಕೋರುತ್ತಿದ್ದರು ಎಂದರು. ನಿನ್ನೆ ಈ ವಿಚಾರ ಕೇಳಿ ಶಾಕ್ ಆಯ್ತು. ಕಾರಣ ಏನು ಅನ್ನೋದು ಪೋಸ್ಟ್ ಮಾರ್ಟಂ ಬಳಿಕ ಗೊತ್ತಾಗಬೇಕಿದೆ. ಈ ರೀತಿ ನಿರ್ಧಾರ ಯಾರು ಮಾಡಬಾರದು. ಏನೇ ಇದ್ದರು ಎದುರಿಸಬಹುದಾಗಿತ್ತು ಎಂದು ಶೋಭಿತಾ ಸೂಸೈಡ್ ಬಗ್ಗೆ ಹರ್ಷ ಮಾತನಾಡಿದ್ದಾರೆ. ಸಹನಟಿಯ ಆತ್ಮಹತ್ಯೆಗೆ ನಟ ಭಾವುಕರಾಗಿದ್ದಾರೆ.
Advertisement
ಅಂದಹಾಗೆ, ಶೋಭಿತಾ 2 ವರ್ಷಗಳ ಹಿಂದೆ ಸುಧೀರ್ ರೆಡ್ಡಿ ಜೊತೆ ಮದುವೆಯಾಗಿ ಹೈದರಾಬಾದ್‌ನಲ್ಲಿ ಸೆಟಲ್ ಆಗಿದ್ದರು. ನಿನ್ನೆ( ಡಿ.1) ನಟಿ ಆತ್ಮಹತ್ಮೆಗೆ ಶರಣಾಗಿದ್ದಾರೆ.