ಆಸ್ಟ್ರೇಲಿಯಾ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಬ್ರಹ್ಮಕಮಲ

Public TV
1 Min Read
Brahmakamala 3

ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (Chirotsava) ಗೆ ಸಿದ್ದು ಪೂರ್ಣಚಂದ್ರ (Siddu Poornchandra) ನಿರ್ದೇಶನದ  ಕನ್ನಡದ ‘ಬ್ರಹ್ಮಕಮಲ’ (Brahmakamala) ಚಿತ್ರ ಆಯ್ಕೆಯಾಗಿದೆ. ಪ್ರಪಂಚದ ಹಲವು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ‌ ಇದೂ ಒಂದು. ಇಂತಹ ಫೆಸ್ಟಿವಲ್ ಗೆ ನಮ್ಮ ಚಿತ್ರ ಆಯ್ಕೆಯಾಗಿರುವುದು ಅತೀವ ಸಂತೋಷ ತಂದಿದೆ ಎಂದಿದ್ದಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ.

Brahmakamala 1

ಈಗಾಗಲೇ ಫ್ರಾನ್ಸ್ ನಲ್ಲಿ ನಡೆದ ಈಡಿಪ್ಲೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, ಸಿಡ್ನಿಯ ವಂಡರ್ ಲ್ಯಾಂಡ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ,  ನೇಪಾಳದ ಓಲ್ಡ್ ಮಂಕ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಲಭಿಸಿದೆ. ಇಂಡೋ‌ ಸಿಂಗಪುರ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅದ್ವಿತಿ ಶೆಟ್ಟಿಗೂ (Adviti Shetty) ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ.

Adhvithi Shetty 2

ದಾದಾ ಸಾಹೇಬ್ ಫಾಲ್ಕೆ, ಅರುಣೋದಯ, ಕಲಕರಿ, ಚಲನಚಿತ್ರೋತ್ಸವಗಳನ್ನು ಒಳಗೊಂಡಂತೆ ಹಲವು ಚಲನಚಿತ್ರೋತ್ಸವಗಳಿಗೆ  ಆಯ್ಕೆಯಾಗಿರುವುದು ಇಡೀ ತಂಡಕ್ಕೆ ಸಂತಸ ತಂದಿದೆ. ವಿಶೇಷವಾದ ಕಥಾ ಹಂದರ ಈ ಚಿತ್ರದಲ್ಲಿರುವುದರಿಂದ ನನಗೆ ಮೊದಲಿನಿಂದಲೂ ಈ ಕಥೆಯ ಮೇಲೆ ನಂಬಿಕೆ ಇತ್ತು. ಈ ಚಿತ್ರ ಇನ್ನೂ  ಹಲವು ಪ್ರಶಸ್ತಿಗಳನ್ನು ತಂದು ಕೊಡುತ್ತದೆ ಎಂಬ ವಿಶ್ವಾಸ ಇದೆ. ಇದನ್ನೂ ಓದಿ:ಸಮಂತಾರಂತೆ ಐಟಂ ಡ್ಯಾನ್ಸ್ ಒಪ್ಪಲ್ಲ- ನಾಗಚೈತನ್ಯ ಮಾಜಿಪತ್ನಿಗೆ ಕೃತಿ ಶೆಟ್ಟಿ ಟಕ್ಕರ್

Adhvithi Shetty 1

ಈ ಕಥೆ ನಮ್ಮ ರಾಮನಗರದ ಹತ್ತಿರದ ಒಂದು ಹಳ್ಳಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆಯನ್ನು ಹೆಣೆದಿದ್ದೇನೆ. ಆ ಕುಟುಂಬ ಮಾಡಿದ ಒಂದು ತಪ್ಪಿನಿಂದಾಗಿ  ಆ ಮನೆಯವರೆಲ್ಲರೂ ಈಗಲೂ ಜೈಲಿನಲ್ಲಿದ್ದಾರೆ.

Share This Article