ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ, ಸಿಎಂ ಆಗ್ಬಿಟ್ಟ – ಬಿ.ಆರ್ ಪಾಟೀಲ್

Public TV
1 Min Read
Siddaramaiah BR Patil

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಲಕ್ಕಿ ಲಾಟರಿ ಹೊಡೆದುಬಿಟ್ಟ, ಅವನ ಗ್ರಹಚಾರ ಚೆನ್ನಾಗಿತ್ತು, ಅದಕ್ಕೆ ಸಿಎಂ ಆಗಿ ಬಿಟ್ಟ ಎಂದು ಹಿರಿಯ ಶಾಸಕ ಬಿ.ಆರ್ ಪಾಟೀಲ್ (BR Patil) ಹೇಳಿರುವ ವಿಡಿಯೋವೊಂದು ಇದೀಗ ಸಂಚಲನ ಮೂಡಿಸಿದೆ.ಇದನ್ನೂ ಓದಿ: ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಸಹಕಾರ: ಎನ್.ಎಸ್ ಬೋಸರಾಜು

ವಸತಿ ನಿಗಮದಲ್ಲಿ `ಮನಿ ಇದ್ರೆ ಮನೆ’ ಎಂಬ ಆಡಿಯೋ ವಿವಾದದ ಬಳಿಕ ಇದೀಗ ಸಿಎಂ ವಿಚಾರವಾಗಿ ವಿಡಿಯೋವೊಂದು ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿ, ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ. ಸಿಎಂಗೆ ಸೋನಿಯಾ ಗಾಂಧಿಯನ್ನು ಮೊದಲು ಭೇಟಿ ಮಾಡಿಸಿದವನೇ ನಾನೇ. ಆದರೆ ಅವನ ಗ್ರಹಚಾರ ಚೆನ್ನಾಗಿತ್ತು. ಅವನು ಸಿಎಂ ಆಗಿಬಿಟ್ಟ. ನನಗೆ ಗಾಡು ಇಲ್ಲ, ಫಾದರು ಇಲ್ಲ ಎಂದು ಹೇಳಿದ್ದಾರೆ.

ವಸತಿ ಗೋಲ್ಮಾಲ್ ಬಗ್ಗೆ ಆಡಿಯೋ ವೈರಲ್ ಆದ ಬಳಿಕ ಅದು ನನ್ನದೇ ಆಡಿಯೋ ಎಂದು ಒಪ್ಪಿಕೊಂಡಿದ್ದರು. ಇದೀಗ ಬಿ.ಆರ್ ಪಾಟೀಲ್ ಅವರು ಒಂದೊಂದೇ ವಿಚಾರವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಸಚಿವರ ವಿರುದ್ಧ ಅಷ್ಟೇ ಅಲ್ಲ, ಸಿಎಂ ವಿರುದ್ಧವೂ ಬಿಆರ್ ಪಾಟೀಲ್‌ಗೆ ಅಸಮಾಧಾನವಿದೆ ಎನ್ನಲಾಗುತ್ತಿದೆ.ಇದನ್ನೂ ಓದಿ: ರಾಜ್ಯದಲ್ಲಿ ಐದೂವರೆ ವರ್ಷದಲ್ಲಿ 82 ಹುಲಿಗಳ ಸಾವು; ಸಮಗ್ರ ವರದಿ ಕೇಳಿದ ಅರಣ್ಯ ಸಚಿವ

Share This Article