ಬೆಂಗಳೂರು: ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹುದ್ದೆಗೆ ಶಾಸಕ ಬಿ.ಆರ್ ಪಾಟೀಲ್ (B.R Patil) ರಾಜೀನಾಮೆ ನೀಡಿದ್ದಾರೆ.
ಶುಕ್ರವಾರ ಸಂಜೆ ಫ್ಯಾಕ್ಸ್ ಮೂಲಕ ಸಿದ್ದರಾಮಯ್ಯ (Siddaramaiah) ಅವರಿಗೆ ಬಿ.ಆರ್ ಪಾಟೀಲ್ ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ. ಈ ಹಿಂದೆ ಅನುದಾನದ ವಿಚಾರದಲ್ಲಿ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
40 ವರ್ಷದ ಜನತಾ ಪರಿವಾರದ ನಂಟು ಹೊಂದಿದ್ದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದರು ಎಂಬ ಕಾರಣಕ್ಕೆ ಅವರು ಸಹ ಕಾಂಗ್ರೆಸ್‍ಗೆ ಸೇರಿದ್ದರು.
ಈ ಬಾರಿ ಅಳಂದ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು ಸಹಾ ಸಿಎಂ ಸಿದ್ದರಾಮಯ್ಯ ಕಾರಣರಾಗಿದ್ದರು. ಇದಾದ ಬೆನ್ನಲ್ಲೇ ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನ ಹೊಂದಿದ್ದರು. ಸಚಿವ ಸ್ಥಾನ ವಂಚಿತರಾದ ನಂತರ ಆಗಾಗಾ ಬಹಿರಂಗವಾಗಿ ಬೇಸರ ಹೊರಹಾಕುತ್ತಿದ್ದರು.
ಮುಖ್ಯಮಂತ್ರಿಗಳ ಸಲಹೆಗಾರರಾಗಿ ನೇಮಕ ಮಾಡಿದ ನಂತರ ತಣ್ಣಗಾಗಿದ್ದ ಅವರು, ಶಾಸಕರ ಅನುದಾನದ ಬಗ್ಗೆ ಅಸಮಾಧಾನ ಹೊಂದಿದ್ದರು. ಈಗ ಏಕಾಏಕಿ ಮುಖ್ಯಮಂತ್ರಿಗಳ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.