ಧಾರವಾಡ: ಬಿಜೆಪಿಗೆ (BJP) ಸಹಾಯ ಮಾಡುವ ರಾಜಕಾರಣವನ್ನು ಕಾಂಗ್ರೆಸ್ (Congress) ಮಾಡುತ್ತಿದೆ ಎಂದು ಬಿ.ಆರ್. ಅಂಬೇಡ್ಕರ್ (BR Ambedkar) ಮೊಮ್ಮಗ ಪ್ರಕಾಶ್ ಅಂಬೇಡ್ಕರ್ (Prakash Ambedkar) ಆರೋಪಿಸಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ವಿಚಾರ ಮಾಡುವ ರಾಜಕಾರಣ ಕಾಂಗ್ರೆಸ್‌ನಲ್ಲಿ ಇಲ್ಲವೇ ಇಲ್ಲ. ಕಾಂಗ್ರೆಸ್ ದಾರಿ ತಪ್ಪಿಸುವ ರಾಜಕೀಯ ಮಾಡುತ್ತಿದೆ. ಇದರ ಜೊತೆಗೆ ಬಿಜೆಪಿಗೆ ಸಹಾಯ ಮಾಡುವ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಅದಕ್ಕಾಗಿ ಬಿಜೆಪಿಯ ಧೈರ್ಯ ಬೆಳೆಯುತ್ತಿದೆ, ಅದರಿಂದ ಸಂವಿಧಾನ ಬದಲಾವಣೆ ಬಗ್ಗೆ ಅವರು ಮಾತನಾಡುತಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
1950ರಲ್ಲಿ ಆರ್‌ಎಸ್‌ಎಸ್ (RSS) ಈ ಸಂವಿಧಾನ (Constitution) ನಮ್ಮದಲ್ಲ. ನಮಗೆ ಯಾವಾಗ ಅವಕಾಶ ಸಿಗುತ್ತೋ, ಆ ದಿನ ಸಂವಿಧಾನವನ್ನು ನಾವು ಬದಲಾವಣೆ ಮಾಡುತ್ತೇವೆ ಎಂದಿತ್ತು. ಅವರ ಉದ್ದೇಶನೇ ಸಂವಿಧಾನ ಬದಲಿಸಬೇಕು ಎಂಬುದಾಗಿದೆ. ಎಲ್ಲಿವರೆಗೆ ಇವರು ದೇಶದ ಅರ್ಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲ್ಲ, ಲೋಕಸಭೆ ಎಲ್ಲಿವರೆಗೆ ಗೆಲ್ಲಲ್ಲ, ಅಲ್ಲಿವರೆಗೆ ಅವರು ಈ ಮಾತನ್ನು ಮತ್ತೆ ಆಡಿರಲಿಲ್ಲ. ಇದೀಗ ಬಿಜೆಪಿ ಎಲ್ಲ ರಾಜ್ಯಗಳಲ್ಲಿ ರಾಜಕೀಯ ಸಂಘಟನೆ ಅಳಿಸಲು ಮುಂದಾಗಿದೆ. ತಮ್ಮ ಅಧಿಕಾರಕ್ಕಾಗಿ ಈ ರೀತಿ ಮಾಡುತ್ತಿದೆ. ಸಂವಿಧಾನ ಬದಲಾವಣೆಯೇ ಆರ್‌ಎಸ್‌ಎಸ್, ಬಿಜೆಪಿಯ ಅಜೆಂಡಾ ಎಂದರು.
Advertisement
Advertisement
ಪರಿವಾರದ ಸಂರಕ್ಷಣೆ, ಸಾಮಾಜಿಕ ಸಂರಕ್ಷಣೆ ಅಲ್ಲ, ಅದಕ್ಕಾಗಿ ಜನರು ಶಿಕ್ಷಣ ಕೊಡಿಸುವುದು ಮಾತ್ರ ಅವಶ್ಯಕತೆ ಇಲ್ಲ, ಮೀಸಲಾತಿನೇ ಇರದೇ ಇದ್ರೆ ನಿಮ್ಮ ಮಕ್ಕಳು ಶಿಕ್ಷಣ ಪಡೆಯಲು ಆಗಲ್ಲ, ನೌಕರಿ ಕೂಡಾ ಸಿಗಲ್ಲ, ಯಾರು ತಮ್ಮ ಪರಿವಾರದ ವಿಚಾರ ಮಾಡುತ್ತಿದ್ದಾರೆ, ಅವರಿಗೆ ಸಾಮಾಜಿಕ ಜವಾಬ್ದಾರಿ ಕೂಡಾ ಇದೆ ಎಂದು ಅಭಿಪ್ರಾಯ ಪಟ್ಟರು. ಇದನ್ನೂ ಓದಿ: ಆರ್ಥಿಕ ಇಲಾಖೆಯೇ ಎಲ್ಲಾ ಮಾಡಬೇಕಾದ್ರೆ ಸಚಿವರು ಯಾಕೆ ಬೇಕು? ಆಯನೂರು ಮಂಜುನಾಥ್ ಆಕ್ರೋಶ
ಸಾಮಾಜಿಕ ಜವಾಬ್ದಾರಿ ಮಾಡಬೇಕಾದರೆ ಸಂವಿಧಾನ ಉಳಿಸಬೇಕು, ಸಂವಿಧಾನ ಉಳಿಸಲು ಸಾಮಾಜಿಕ ಹೋರಾಟ ಅವಶ್ಯಕತೆ ಇದೆ, ತಮ್ಮ ಜವಾಬ್ದಾರಿ ಮರೆತವನು ತಮ್ಮ ಮಕ್ಕಳನ್ನ ಬಂಧನದಲ್ಲಿ ಇಡುವಂತೆ ಆಗಲಿದೆ ಎಂದ ಅವರು, ಭಾರತ ಒಡೆದಿಲ್ಲ, ಒಡೆದಿದ್ರೆ ಅದನ್ನ ಜೋಡಿಸಬಹುದು, ಒಡದೇ ಇಲ್ಲ ಎಂದರೆ ಜೋಡಿಸುವ ಮಾತೇ ಇಲ್ಲಾ ಎಂದು ಭಾರತ ಜೋಡೊ ಯಾತ್ರಾ ವಿಚಾರವಾಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಖಾಸಗಿ ಬಸ್ಸಿನ ನಿರ್ಲಕ್ಷ್ಯಕ್ಕೆ ಮುಗ್ಧ ವಿದ್ಯಾರ್ಥಿ ಬಲಿ- ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬಸ್ಥರು