ಬೆಂಗಳೂರು: ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಬಿಪಿಎಲ್ ಕಾರ್ಡ್ (BPL Card) ಪರಿಷ್ಕರಣೆ ಮಾಡುವುದಾಗಿ ಆಹಾರ ಸಚಿವ ಮುನಿಯಪ್ಪ (KH Muniyappa) ತಿಳಿಸಿದರು. ಅಲ್ಲದೆ ವಿಪಕ್ಷಗಳು ನಮಗೆ ಸಹಕಾರ ಕೊಡುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸಿ.ಟಿ. ರವಿ ಪ್ರಶ್ನೆ ಕೇಳಿದರು. ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಿದರೂ ಜನರಿಗೆ ಇನ್ನೂ ಕಾರ್ಡ್ ಸಿಗುತ್ತಿಲ್ಲ. ಆದಷ್ಟು ಬೇಗ ಬಿಪಿಎಲ್ ಕಾರ್ಡ್ ಕೊಡಬೇಕು. ಬಿಪಿಎಲ್ ಕಾರ್ಡ್ ಸಿಗದಿರುವುದರಿಂದ ವೃದ್ಧರು ಕಷ್ಟ ಪಡುತ್ತಿದ್ದಾರೆ. ತುರ್ತು ವೈದ್ಯಕೀಯ ಚಿಕಿತ್ಸೆಗೂ ಕಾರ್ಡ್ ಇಲ್ಲದೇ ತೊಂದರೆ ಆಗುತ್ತಿದೆ. ರೇಷನ್ ಕಾರ್ಡ್ ಅರ್ಜಿ ಹಾಕುವಾಗಲೂ ಸರ್ವರ್ ಸಮಸ್ಯೆ ಇದೆ. ಇದನ್ನು ಸರಿ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಾಗಲಕೋಟೆ | ಕುರಿ ಕಳ್ಳರನ್ನ ಹಿಡಿಯಲು ಹೋದ ವ್ಯಕ್ತಿಯ ಕೊಲೆ – ಆರೋಪಿಗಳು ಅರೆಸ್ಟ್
ಎಪಿಎಲ್ ಕಾರ್ಡ್ ಕೊಡೋದು ಈಗ ನಿಲ್ಲಿಸಿದ್ದೇವೆ. 91 ಸಾವಿರ ಬಿಪಿಎಲ್ ಕಾರ್ಡ್ ಕೊಡೋದು ಬಾಕಿ ಇದೆ. ಆದಷ್ಟು ಬೇಗ ಇದನ್ನ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಹಿಂದಿನ ಬಿಜೆಪಿ ಸರ್ಕಾರ 3 ವರ್ಷಗಳಿಂದ ಹೊಸ ಕಾರ್ಡ್ ಕೊಟ್ಟಿರಲಿಲ್ಲ. ನಾನು ಬಂದ ಮೇಲೆ ಹೊಸ ಕಾರ್ಡ್ ಕೊಡುತ್ತಿದ್ದೇವೆ. 2 ತಿಂಗಳಲ್ಲಿ ಬಾಕಿ ಇರೋ ಬಿಪಿಎಲ್ ಕಾರ್ಡ್ ಅರ್ಜಿ ವಿಲೇವಾರಿ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಂಸತ್‌ನಲ್ಲಿ ಮತದಾರರ ಪಟ್ಟಿಯಲ್ಲಿನ ದೋಷಗಳ ಚರ್ಚೆಗೆ ವಿಪಕ್ಷಗಳ ಆಗ್ರಹ
ಬಿಪಿಎಲ್ ಕಾರ್ಡ್‌ನಲ್ಲಿರುವ ಇರೋ 20 ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳು ಅಪಿಎಲ್‌ಗೆ ಅರ್ಹತೆ ಪಡೆದಿದ್ದಾರೆ. ಇದರ ಪರಿಷ್ಕರಣೆಯನ್ನು ಗ್ರಾಮ ಪಂಚಾಯತಿ ಮಟ್ಟದಿಂದ ಮಾಡಲು ನಿರ್ಧಾರ ಮಾಡಿದ್ದೇವೆ. ವಿಧಾನ ಮಂಡಲದ ಅಧಿವೇಶನ ಮುಗಿದ ಕೂಡಲೇ ಗ್ರಾಮ ಮಟ್ಟದಿಂದ ಬಿಪಿಎಲ್ ಕಾರ್ಡ್ ಪರಿಶೀಲನೆ ಶುರು ಮಾಡುತ್ತೇವೆ. ಡಿಸಿಗಳಿಗೆ ಜವಾಬ್ದಾರಿ ಕೊಡಲಾಗುತ್ತದೆ. ಗ್ರಾಮ ಮಟ್ಟದಲ್ಲಿ ಸಮಿತಿ ಮಾಡಿ ಪ್ರತಿ ಮನೆಗಳಿಗೆ ಹೋಗಿ ಪರಿಶೀಲನೆ ಮಾಡಿ ಪರಿಷ್ಕರಣೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನಟಿ ರನ್ಯಾಗೆ ಸಿದ್ದರಾಮಯ್ಯರಿಂದ ಪರಮೇಶ್ವರ್‌ವರೆಗೆ ಯಾರೂ ಸಪೋರ್ಟ್ ಮಾಡಿಲ್ಲ: ಚಲುವರಾಯಸ್ವಾಮಿ