ಪಾಟ್ನಾ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಸರ್ಹಸಾ ಜಿಲ್ಲೆಯಲ್ಲಿ ನಡೆದಿದೆ.
ಮೊಹಮ್ಮದ್ ತಸೀರ್(30) ಪತ್ನಿಯಿಂದ ಕೊಲೆಯಾದವ ಪತಿ. ಆರೋಪಿ ಪತ್ನಿ ತನ್ನ ಪ್ರಿಯಕರ ಮೊಹಮ್ಮದ್ ಶಫೀರ್ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ. ಈ ಘಟನೆ ಶುಕ್ರವಾರ ತಡರಾತ್ರಿ ಸರ್ಬೆಲಾ ಪಂಚಾಯತ್ನ ಕಸ್ಮಿಪುರ ಟೊಲ್ವಾ ಗ್ರಾಮದಲ್ಲಿ ನಡೆದಿದೆ.
Advertisement
ಆರೋಪಿ ಪತ್ನಿ ಮೊದಲು ತಸೀರ್ ಎದೆ ಮೇಲೆ ಕುಳಿತು ಆತನ ಎರಡು ಕೈಗಳನ್ನು ಬಿಗಿಯಾಗಿ ಹಿಡಿದಿದ್ದಾಳೆ. ಬಳಿಕ ಆಕೆಯ ಪ್ರಿಯಕರ ಚಾಕುವಿನಿಂದ ಪತ್ನಿಯ ಮುಂದೆಯೇ ಕತ್ತನ್ನು ಕತ್ತರಿಸಿದ್ದಾನೆ. ನಂತರ ಪತ್ನಿಯೂ ಕೂಡ ಚಾಕು ತೆಗೆದುಕೊಂಡು ತಸೀರ್ ಮೇಲೆ ಹಲ್ಲೆ ಮಾಡಿದ್ದಾಳೆ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಮೃತ ತಸೀರ್ ಪತ್ನಿ ತಮ್ಮ ಪಕ್ಕದ ಮನೆಯಲ್ಲಿದ್ದ ಶಫೀರ್ ನನ್ನು ಪ್ರೀತಿ ಮಾಡುತ್ತಿದ್ದಳು. ಹೀಗಾಗಿ ಇಬ್ಬರು ಸೇರಿ ತಸೀರ್ ನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾರೆ. ಅದರಂತೆಯೇ ಶುಕ್ರವಾರ ಆರೋಪಿ ಪತಿ ಊಟದ ನಂತರ ಹಾಲಿಗೆ ನಿದ್ರೆ ಮಾತ್ರೆ ಹಾಕಿ ಕುಡಿಯಲು ತಸೀರ್ ಗೆ ಕೊಟ್ಟಿದ್ದಾಳೆ. ಅದನ್ನು ಕುಡಿದು ನಿದ್ದೆ ಮಾಡುತ್ತಿದ್ದಂತೆಯೇ ಪ್ರಿಯರಕನನ್ನು ಮನೆಗೆ ಕರೆಸಿದ್ದಾಳೆ. ಬಳಿಕ ಆಕೆ ಪತಿಯ ಎದೆ ಮೇಲೆ ಕುಳಿತು ಕೈಗಳನ್ನು ಬಿಗಿಯಾಗಿ ಹಿಡಿದಿದ್ದಾಳೆ. ಆಗ ಶಫೀರ್ ಚಾಕುವಿನಿಂದ ತಸೀರ್ ನ ಕತ್ತು ಕೊಯ್ದಿದ್ದಾನೆ. ನಂತರ ಮಹಿಳೆಯೂ ಪತಿ ಮೇಲೆ ಹಲ್ಲೆ ನಡೆಸಿದ್ದಾಳೆ.
Advertisement
ಈ ಸಂದರ್ಭದಲ್ಲಿ ಮಲಗಿದ್ದ ಮಗನಿಗೆ ಎಚ್ಚರವಾಗಿದ್ದು, ಆತ ಶಫೀರ್ ಮತ್ತು ಇನ್ನೊಬ್ಬನನ್ನು ಮನೆಯಲ್ಲಿ ನೋಡಿದ್ದಾನೆ. ಇದನ್ನು ತಿಳಿದ ತಾಯಿ ಕಿರುಚಾಡಿ ನಾಟಕ ಶುರು ಮಾಡಿದ್ದಾಳೆ. ಅದನ್ನು ಕೇಳಿದ ನೆರೆಹೊರೆಯವರು ಮನೆಗೆ ಬಂದಿದ್ದಾರೆ. ತಕ್ಷಣ ರಕ್ತದ ಮಡುವಿನಲ್ಲಿದ್ದ ತಸೀರ್ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ತಸೀರ್ ಮೃತಪಟ್ಟಿದ್ದನು.
ಈ ಬಗ್ಗೆ ಪೋಲಿಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಬಟ್ಟೆ ಮತ್ತು ಚಾಕುವನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪೊಲೀಸರು ವಿಚಾರಣೆಯಲ್ಲಿ 24 ಗಂಟೆಯಲ್ಲಿಯೇ ಪತ್ನಿ ಮತ್ತು ಪ್ರಿಯಕರ ಸಿಕ್ಕಿಬಿದ್ದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆ ಮಾಡಿದಾಗ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.