ಮಂಗಳೂರು: ಜನರಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡೋಕೆ ಬಿಡಲ್ಲ, ಮೆಟ್ರೋ ದರ (Metro Rate) ಪರಿಷ್ಕರಣೆ ಬಗ್ಗೆ ಮಾತನಾಡ್ತೀನಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಮಂಗಳೂರಿನಲ್ಲಿ (Mangaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮೆಟ್ರೋ ದರ ಪರಿಷ್ಕರಣೆ ವಿಚಾರವಾಗಿ ನಮ್ಮನ್ನ ಯಾರೂ ಸಂಪರ್ಕ ಮಾಡಿಲ್ಲ. ಮೆಟ್ರೋ ಚೇರ್ಮನ್ ಆಗಿ ಕೇಂದ್ರ ಸರ್ಕಾರದ (Central Government) ಚೇರ್ಮನ್ ಇದ್ದಾರೆ. ಇವತ್ತು ಅಥವಾ ನಾಳೆ ಅವರ ಜೊತೆ ಮಾತನಾಡುತ್ತೇನೆ. ಜನರಿಗೆ ತೊಂದರೆ ಕೊಡೋಕೆ ಬಿಡಲ್ಲ. ಮೆಟ್ರೋ ದರ ಪರಿಷ್ಕರಣೆ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಯಾವುದೇ ದರ ಏರಿಕೆ ಮಾಡಿದ್ರೂ ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ಸಿಎಂ ಭ್ರಮೆ: ಹೆಚ್‌ಡಿಕೆ ಕಿಡಿ
ಕೇಂದ್ರ ಮೇಲೆ ಆರೋಪ ಮಾಡೋದೇ ಚಾಳಿ
ಯಾವುದೇ ದರ ನಿಗದಿ ಮಾಡಿದ್ರು ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಭ್ರಮೆ. ಈ ಬಗ್ಗೆ ಎಚ್ಚೆತ್ತುಕೊಂಡು ಜನರೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರ ನಾವ್ ಸತ್ಯ ಹೇಳ್ತಿವಿ ಅಂತ ಹೇಳ್ತಾ ಸುಳ್ಳು ಹೇಳ್ತಾರೆ. ಮೆಟ್ರೋ ಯೋಜನೆಯಲ್ಲಿ ಕೇಂದ್ರದ್ದು ಕೇವಲ 20% ಅಂತಾರೆ. ರಾಜ್ಯ ಸರ್ಕಾರ ಹೆಚ್ಚಿನ ಹಣ ಹಾಕುವಾಗ, ಕೇಂದ್ರ ಸರ್ಕಾರದ ಮೇಲೆ ಏಕೆ ದೂಷಿಸುತ್ತಿದ್ದಾರೆ? ದರ ನಿಗದಿ ಮಾಡೋದು ಯಾರು? ಕೇಂದ್ರ ಸರ್ಕಾರದ ಮೇಲೆ ಹಾಕುವ ಚಾಳಿ ಅವರಿಗೆ. ಬೇರೆ ರಾಜ್ಯಗಳಲ್ಲಿ ಯಾಕೆ ದರ ಏರಿಕೆ ಆಗ್ತಿಲ್ಲ? ಇಲ್ಲಿ ನಮ್ಮದು ಹೆಚ್ಚಿನ ಪಾಲು ಅಂದ ಮೇಲೆ ಅಧಿಕಾರ ಯಾರಿಗೆ ಇದೆ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬಿಗ್ ಡೀಲ್ ಸಕ್ಸಸ್ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್ ಸಹಿ
ಮುಖ್ಯಂಮತ್ರಿಗಳ ಹಲವಾರು ತಪ್ಪು ನಿರ್ಣಯ, ಜನವಿರೋಧಿ ನೀತಿಗಳನ್ನ ಕೇಂದ್ರದ ಮೇಲೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು. ಜನರಿಗೆ ಗ್ಯಾರಂಟಿ ಕೊಡ್ತಿದ್ದೇವೆ ಈ ಮೂಲಕ ಆರ್ಥಿಕವಾಗಿ ಶಕ್ತಿ ತುಂಬಿದ್ದೇವೆ ಅಂತಾರೆ. ರಾಜ್ಯದಲ್ಲಿ ತಲಾ ಆದಾಯ, ಆರ್ಥಿಕ ಶಕ್ತಿ ನೀಡಿದ್ದೇವೆ ಅಂತ ಪದೇ ಪದೇ ಜಾಹೀರಾತು ಕೋಡ್ತಿದ್ದಾರೆ. ಜನಕ್ಕೆ ತೊಂದರೆ ಇಲ್ಲ, ಆರ್ಥಿಕವಾಗಿ ಚೆನ್ನಾಗಿದ್ದಾರೆ ಅನ್ನೋದು ರಾಜ್ಯ ಸರ್ಕಾರದ ಭಾವನೆ. ಆದರಿಂದ ಯಾವುದೇ ದರ ನಿಗದಿ ಮಾಡಿದ್ರು ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳ ಭ್ರಮೆ. ಜನರೇ ಎಚ್ಚೆತ್ತುಕೊಂಡು ತೀರ್ಮಾನ ತಗೋಬೇಕು ಎಂದು ಕರೆ ನೀಡಿದ್ದಾರೆ.



