ಉಪ್ಪಿನಂಗಡಿಯ ಹಿಂದೂ ಮಾಲೀಕತ್ವದ ಅಂಗಡಿಗಳ ಬಗ್ಗೆ ಅಪಪ್ರಚಾರ, ದೂರು ದಾಖಲು

Public TV
1 Min Read
vlcsnap 2022 03 25 09h19m48s579

ಮಂಗಳೂರು: ದ.ಕ ಜಿಲ್ಲೆಯ ಉಪ್ಪಿನಂಗಡಿಯ ಹಿಂದೂ ಮಾಲೀಕತ್ವದ ಅಂಗಡಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದ ಸಂದೇಶವೊಂದು ಹರಿದಾಡುತ್ತಿದೆ.

ಉಪ್ಪಿನಂಗಡಿಯ 32 ಹಿಂದೂ ಅಂಗಡಿಗಳ ಹೆಸರು ಉಲ್ಲೇಖಿಸಿ ಅಪಪ್ರಚಾರ ಮಾಡಲಾಗಿದೆ. ಹಿಂದೂ ವರ್ತಕರ ಬೇಕರಿ, ಮೆಡಿಕಲ್, ಸಲೂನ್, ಜನರಲ್ ಸ್ಟೋರ್‌ಗಳ ಹೆಸರಲ್ಲಿ ಸಂದೇಶ ವೈರಲ್ ಆಗಿದೆ. ನಗರದ ವರ್ತಕರ ಸಂಘವು ನಕಲಿ ಸಂದೇಶ ಪ್ರಕಟಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದೆ. ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿಕೆಶಿ

vlcsnap 2022 03 25 09h20m55s961

ಎಲ್ಲಾ ಸಮುದಾಯದವರು ನಮ್ಮ ಗ್ರಾಹಕರು.ಇದನ್ನು ಹಾಳು ಮಾಡುವ ರೀತಿ ಸಂದೇಶ ಕಳುಹಿಸಲಾಗಿದೆ. ಮತೀಯ ಸಾಮರಸ್ಯ ಹಾಳು ಮಾಡುವವರ ವಿರುದ್ಧ ಹಿಂದೂ ವರ್ತಕರ ಸಂಘವು ಕ್ರಮಕ್ಕೆ ಆಗ್ರಹಿಸಿದೆ. ಇದನ್ನೂ ಓದಿ: ಮಾತುಬಾರದ ಬಾಲಕನ ಕೊಂದು ಗೋಣಿ ಚೀಲದಲ್ಲಿ ತುಂಬಿ ಎಸೆದ್ರು

mobile secret

ದೂರಿನಲ್ಲಿ ಏನಿದೆ?
ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಭಂಗ ಹಾಗೂ ಮತೀಯ ದ್ವೇಷ ಮೂಡಿಸುವ ರೀತಿಯಲ್ಲಿ ದುಷ್ಕರ್ಮಿಗಳು ಸಂದೇಶವೊಂದನ್ನು ಸೃಷ್ಟಿಸಿಕೊಂಡು ಸಮಾಜದಲ್ಲಿ ದ್ವೇಷ ಮೂಡಿಸುವ ತನ್ಮೂಲಕ ವ್ಯವಹಾರಿಕ ತೊಂದರೆಯೊಡ್ಡುವ ಕೃತ್ಯವನ್ನು ಎಸಗಿರುತ್ತಾರೆ. ಈ ಸಂದೇಶದಲ್ಲಿ ಹಿಂದೂ ವರ್ತಕರ ಒಕ್ಕೂಟ ಉಪ್ಪಿನಂಗಡಿ ಎಂದು ಉಲ್ಲೇಖಿಸಿ ನಮ್ಮ ಅಂಗಡಿಗಳ ಹೆಸರನ್ನು ಸೇರಿದಂತೆ ಒಟ್ಟು 32 ಹಿಂದೂ ಸಮುದಾಯದ ಅಂಗಡಿಗಳ ಹೆಸರನ್ನು ಬಳಸಿ ‘ನಮ್ಮ ಅಂಗಡಿಗಳಿಂದ ಯಾವುದೇ ಸಾಮಗ್ರಿಗಳನ್ನು ಮುಸ್ಲಿಮರಿಗೆ ಕೊಡುವುದಿಲ್ಲ. ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ’ ಎಂಬಿತ್ಯಾದಿ ಮತೀಯ ದ್ವೇಷದ ವಾಕ್ಯಗಳನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ರೀತಿಯ ಸಂದೇಶ ಕಳುಹಿಸಿ ಮತೀಯ ಸಾಮರಸ್ಯ ಹಾಳು ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು.

Share This Article
Leave a Comment

Leave a Reply

Your email address will not be published. Required fields are marked *