ಬೆಂಗಳೂರು: ನಟಿ ದೀಪಿಕಾ ಪಡುಕೋಣೆ ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾದಿಂದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.
ಜೆಎನ್‍ಯು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ದೀಪಿಕಾ ಪರ-ವಿರೋಧ ಮಾತುಗಳು ಕೇಳಿ ಬರ್ತಿವೆ. ಈ ಮಧ್ಯೆ ಕರ್ನಾಟಕದಲ್ಲಿ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ದೀಪಿಕಾ ಪಡುಕೋಣೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ದೇಶವಿರೋಧಿ ಕೃತ್ಯ. ದೀಪಿಕಾ ಹಾಗೂ ಆಕೆಯ ಪತಿ ರಣವೀರ್ ಸಿಂಗ್ ಚಲನಚಿತ್ರ ನಿಷೇಧಿಸಿ, ಛಪಾಕ್ ಸಿನಿಮಾವೂ ರಿಲೀಸ್ ಆಗಬಾರದು ಅಂತಾ ಹಿಂದೂ ಮಹಾಸಭಾದಿಂದ ಪತ್ರ ಬರೆಯಲಾಗಿದೆ.
Advertisement
Advertisement
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಲ್ಲಿನ ಶಿಕ್ಷಕರ ಮೇಲೆ ದಾಳಿಯಾದ ನಂತರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್‍ಯುಗೆ ಮಂಗಳವಾರ ಸಂಜೆ ಸುಮಾರು 7.45 ಕ್ಕೆ ಜೆಎನ್‍ಯು ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದರು. 10 ನಿಮಿಷಗಳ ಕಾಲ ಯೂನಿವರ್ಸಿಟಿಯಲ್ಲಿ ಇದ್ದ ದೀಪಿಕಾ, ಬಳಿಕ ಏನೂ ಪ್ರತಿಕ್ರಿಯೆನೀಡದೆ ವಾಪಸ್ ಆಗಿದ್ದರು.