ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾ ಇನ್ನಷ್ಟೇ ಬಿಡುಗಡೆ ಆಗಬೇಕು. ಬಿಡುಗಡೆಗೂ ಮುನ್ನ ಸಂಭ್ರಮಿಸಬೇಕಿದ್ದ ಈ ಜೋಡಿ ಬಾಯ್ಕಾಟ್ ಅಸ್ತ್ರಕ್ಕೆ ಭಯದಿಂದ ಬಳಲುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಹಿಂದೂ ದೇವರುಗಳಿಗೆ ರಣಬೀರ್ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಆಮೇಲೆ ಸಿನಿಮಾ ನಿರ್ದೇಶಕರು ಅದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದರು.
ಮೊನ್ನೆಯಷ್ಟೇ ಬಾಯ್ಕಾಟ್ ಕುರಿತಂತೆ ಆಲಿಯಾ ಭಟ್ ಆಡಿದ ಮಾತುಗಳು ಕೂಡ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದವು. ಬಾಯ್ಕಾಟ್ ಮಾಡುವವರ ವಿರುದ್ಧ ಗುಡುಗಿದ್ದ ಆಲಿಯಾ, ನನ್ನ ಸಿನಿಮಾ ನೋಡದೇ ಇದ್ದರೆ ಬಿಡಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಬಲವಂತವಾಗಿ ನೋಡಿ ಅಂತ ಹೇಳುತ್ತಿರುವವರು ಯಾರು ಎಂದು ಕೇಳಿದ್ದರು. ಇದನ್ನೂ ಓದಿ:ತಮಿಳು ಮತ್ತು ತೆಲುಗಿಗೆ ರಿಮೇಕ್ ಆಗಲಿದೆ ಶಶಾಂಕ್ ನಿರ್ದೇಶನದ ‘ಲವ್ 360’ ಸಿನಿಮಾ
ಟ್ರೈಲರ್ ನಲ್ಲಿ ಮಾಡಿದ ಅವಮಾನ ಮತ್ತು ಆಲಿಯಾ ಭಟ್ ಆಡಿದ ಮಾತುಗಳು ಸಿನಿಮಾ ಬಿಡುಗಡೆಗೆ ತೊಂದರೆ ಆಗುವ ಸಾಧ್ಯತೆ ಇದೆ. ಹಾಗಾಗಿ ಬಾಯ್ಕಾಟ್ ಎನ್ನುವವರ ಮನಸ್ಸನ್ನು ತಿಳಿಗೊಳಿಸುವ ಪ್ರಯತ್ನಕ್ಕೂ ಈ ಜೋಡಿ ಮುಂದಾಗಿದೆ ಎನ್ನಲಾಗುತ್ತಿದೆ. ಆದರೂ, ಸೋಷಿಯಲ್ ಮೀಡಿಯಾದಲ್ಲಿ ಬ್ರಹ್ಮಾಸ್ತ್ರ ಬಾಯ್ಕಾಟ್ ಟ್ರೆಂಡ್ ಜೋರಾಗಿದೆ.