ಹುಬ್ಬಳ್ಳಿ: ಕೆರೆಯಲ್ಲಿ (Lake) ಈಜಲು ತೆರಳಿದ್ದ ಬಾಲಕ (Boy) ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ (Hubballi) ಉಣಕಲ್ ಕೆರೆಯಲ್ಲಿ (Unakal Lake) ನಡೆದಿದೆ. ಕಳೆದ 3 ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ ಇಂದಿರಾ ನಗರದ ನಿವಾಸಿ ವೆಂಕಟೇಶ್ ವಾಲ್ಮೀಕಿ ಮೃತಪಟ್ಟ ಬಾಲಕ. ಕಳೆದ 3 ದಿನಗಳ ಹಿಂದೆ ತನ್ನ ಸ್ನೇಹಿತರ ಜೊತೆ ಕೆರೆಯಲ್ಲಿ ಈಜಾಡಲು (Swimming) ತೆರಳಿದ್ದ ವೆಂಕಟೇಶ್ ಆಳ ಇರುವಕಡೆ ನೀರಿಗೆ ಇಳಿದಿದ್ದ ಎನ್ನಲಾಗಿದೆ. ಆತ ನೀರಿನ ಸುಳಿಯಲ್ಲಿ ಸಿಲುಕಿ ಸಾವಿನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ 3 ದಿನವಾದರೂ ಬಾಲಕನ ಶವ ಇನ್ನೂ ಪತ್ತೆಯಾಗಿಲ್ಲ.
Advertisement
Advertisement
ಬಾಲಕನ ಶವ ಹುಡುಕಾಟಕ್ಕೆ ಎನ್‌ಡಿಆರ್‌ಎಫ್ ತಂಡದ ಆಗಮಿಸಿದ್ದು, ಸಿಬ್ಬಂದಿ ಜೊತೆಗೆ ಸ್ಥಳೀಯ ನುರಿತ ಈಜುಗಾರರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ
Advertisement
Advertisement
ಸುರಕ್ಷಿತ ಕ್ರಮಗಳು ಇಲ್ಲದ ಕಾರಣ ಉಣಕಲ್ ಕೆರೆಯಲ್ಲಿ ಪದೇ ಪದೇ ದುರ್ಘಟನೆಗಳು ನಡೆಯುತ್ತಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಕೆರೆಯ ಸುತ್ತಲೂ ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲು ನಿರ್ಲಕ್ಷ್ಯವಹಿಸುತ್ತಿರುವುದಕ್ಕೆ ಹು-ಧಾ ಪಾಲಿಕೆ ವಿರುದ್ಧ ಬಾಲಕನ ಪೋಷಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜೈಂಟ್ ವ್ಹೀಲ್ ಆಡುವಾಗ ಬಾಲಕಿಯ ಕೂದಲು ಸಿಲುಕಿ ಕಿತ್ತು ಬಂತು ಚರ್ಮ – ಮೂವರ ವಿರುದ್ಧ ಕೇಸ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k