ಭೋಪಾಲ್: ಅಮ್ಮ ನನ್ನ ಚಾಕ್ಲೇಟ್ ಕದ್ದಿದ್ದಾಳೆ ಅವಳನ್ನು ಜೈಲಿಗೆ ಹಾಕಿ ಎಂದು ಪೊಲೀಸ್ ಠಾಣೆಗೆ ಓಡೋಡಿ ಬಂದು ದೂರು ನೀಡಿದ ಬಾಲಕನ ಮುಗ್ಧತೆಗೆ ಮನಸೋತ ಸಚಿವರೊಬ್ಬರು ಆತನಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ.
Advertisement
ಹೌದು. ಮಧ್ಯಪ್ರದೇಶ (Madhyapradesh) ದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಅವರು ಪುಟ್ಟ ಬಾಲಕನಿಗೆ ಸೈಕಲ್ (Bicycle) ಅನ್ನು ದೀಪಾವಳಿ ಗಿಫ್ಟ್ ಆಗಿ ನೀಡಿದ್ದಾರೆ. ಸದ್ಯ ಬಾಲಕ ಆಟವಾಡುವ ಸೈಕಲ್‍ನಲ್ಲಿ ಕುಳಿತುಕೊಂಡು ಅದನ್ನು ಓಡಿಸಲು ಪ್ರಯತ್ನಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
Advertisement
ಈ ಬಗ್ಗೆ ಮಾತನಾಡಿದ ಸಚಿವರು, ನಿನ್ನೆ ನಾನು ಬಾಲಕ ಹಂಝಾನ ವೀಡಿಯೋ ನೋಡಿದೆ. ವಿಡಿಯೋದಲ್ಲಿ ಬಾಲಕ ತನ್ನ ತೊದಲು ಮಾತುಗಳಲ್ಲಿ ಅಮ್ಮನ ವಿರುದ್ಧ ದೂರು ನೀಡುತ್ತಿರುವ ಆತನ ಮುಗ್ಧತೆಗೆ ಮಾರು ಹೋದೆ. ಹೀಗಾಗಿ ನಾನು ಅವನಿಗೆ ದೀಪಾವಳಿಯ ಉಡುಗೊರೆಯಾಗಿ ಸೈಕಲ್ ಕೊಡಿಸುವ ಪ್ರಾಮಿಸ್ ಮಾಡಿದ್ದು, ತಲುಪಿಸಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮ್ಮ ನನ್ನ ಚಾಕ್ಲೇಟ್ ಕದ್ದಿದ್ದು, ಅವಳನ್ನು ಜೈಲಿಗೆ ಹಾಕಿ- ಪೊಲೀಸರಿಗೆ ದೂರು ನೀಡಿದ ಪುಟಾಣಿ
Advertisement
बुरहानपुर: दीपावली से पहले मनी 'हमजा' की दिवाली…
हमजा साइकिल और चॉकलेट पाकर हुआ प्रफुल्लित…
हमजा के माता-पिता ने गृह मंत्री @drnarottammisra की सहृदयता, सहिष्णुता, सद्भावना और मासूम हमजा के प्रति स्नेह का हृदय से आभार व्यक्त किया है…@proburhanpur#JansamparkMP pic.twitter.com/ivJCQiPdtu
— Home Department, MP (@mohdept) October 18, 2022
ಸೋಮವಾರ ಬ್ರುಹ್ನಾಪುರ್ ಬುರ್ಹಾನ್‍ಪುರದ ಡೆಡ್ತಲೈ ಪೊಲೀಸ್ ಠಾಣೆಗೆ ಬಾಲಕ ತನ್ನ ತಂದೆಯೊಂದಿಗೆ ತೆರಳಿದ್ದನು. ಅಲ್ಲದೆ ತನ್ನ ಚಾಕ್ಲೇಟ್ ಕದ್ದಿದ್ದಲ್ಲದೇ ತನಗೆ ಕಪಾಳಮೋಕ್ಷ ಮಾಡಿದ್ದಾಳೆ. ಹೀಗಾಗಿ ಅಮ್ಮನನ್ನು ಜೈಲಿಗೆ ಕಳುಹಿಸಿ ಎಂದು ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಮುಗಧತೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ಈ ವೀಡಿಯೋ ನೋಡಿದ ಗೃಹ ಸಚಿವರು ಬಾಲಕನಿಗೆ ಉಡುಗೊರೆ ತಲುಪಿಸಲು ಸೂಚಿಸಿದ್ದಾರೆ. ಅಂತೆಯೇ ನಿನ್ನೆ ಸಂಜೆಯೇ ಪೊಲೀಸ್ ಅಧಿಕಾರಿ ಬಾಲಕನ ಮನೆಗೆ ತೆರಳಿ ಸೈಕಲ್ ಹಾಗೂ ಚಾಕ್ಲೆಟ್ ಅನ್ನು ನೀಡಿದ್ದಾರೆ.