ಚೆನ್ನೈ: ಮಾಲ್ ಒಂದರಲ್ಲಿ ಎಸ್ಕಲೇಟರ್ ಮೇಲಿಂದ ಬಿದ್ದು 10 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಚೆನ್ನೈನ ರಾಯ್ಪೆಟ್ಟಾದಲ್ಲಿ ನಡೆದಿದೆ.
ಈ ಘಟನೆ ಏಪ್ರಿಲ್ 10ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನವೀನ್ ಕುಮಾರ್(10) ಮೃತ ದುರ್ದೈವಿ. ಈತ 5ನೇ ತರಗತಿಯಲ್ಲಿ ಓದುತ್ತಿದ್ದು, ತೊಡಿಯಾರ್ ಪೇಟ್ನ ಡ್ರೈವರ್ಸ್ ಕಾಲೋನಿಯಲ್ಲಿ ವಾಸಿಸುತ್ತಿದ್ದನು.
Advertisement
ಘಟನೆಯ ವಿವರ?
ಏಪ್ರಿಲ್ 10 ರಂದು ನವೀನ್ ಕುಮಾರ್ ಮತ್ತು ಆತನ ಸಹೋದರಿ ಗೀತಾ ರಾಯ್ಪೆಟ್ಟಾದಲ್ಲಿರುವ ಎಕ್ಸ್ ಪ್ರೆಸ್ ಅವೆನ್ಯೂ ಮಾಲ್ ಗೆ ವಿಡಿಯೋ ಗೇಮ್ ಆಡಲು ಹೋಗಿದ್ದರು. ನವೀನ್ ಎರಡನೇ ಮಹಡಿಯಲ್ಲಿ ಎಸ್ಕಲೇಟರ್ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಆತನ ಬ್ಯಾಗ್ ಎಸ್ಕಲೇಟರ್ ಗೆ ಸಿಕ್ಕಿಹಾಕಿಕೊಂಡಿದೆ. ಆಗ ನವೀನ್ ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ.
Advertisement
Advertisement
ನಾವು ಮಾಲ್ ನ ಸಿಸಿಟಿವಿಯನ್ನು ಪರಿಶೀಲಿಸಿದ್ದೇವೆ. ಆದರೆ ನವೀನ್ ಎಸ್ಕಲೇಟರ್ ನಲ್ಲಿ ಚಲಿಸುತ್ತಿದ್ದಾಗ ಬ್ಯಾಗ್ ಸಿಕ್ಕಿಹಾಕಿಕೊಂಡಿದ್ದರಿಂದ ಈ ದುರಂತ ನಡೆದಿದೆ ಎಂದು ನವೀನ್ ತಂದೆ ಸುನಿಲ್ ಕುಮಾರ್ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಎಸ್ಕಲೇಟರ್ ನಿಂದ ಬಿದ್ದು ತೀವ್ರ ಗಾಯಗೊಂಡಿದ್ದ ನವೀನ್ ನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ, ನವೀನ್ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಮೃತ ಪಟ್ಟಿದ್ದಾನೆ. ದೇಹದ ಯಾವುದೇ ಭಾಗದಲ್ಲಿ ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಫಟನೆ ಕುರಿತಂತೆ ತಂದೆ ಸುನಿಲ್ ಮಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.