ಭೋಪಾಲ್: ತಳ್ಳುಗಾಡಿಯ (Pushcart) ಮೂಲಕ 6 ವರ್ಷದ ಬಾಲಕನೊಬ್ಬ (Boy) ಅನಾರೋಗ್ಯ ಪೀಡಿತ ತನ್ನ ತಂದೆಯನ್ನು (Father) ಸಾಗಿಸುತ್ತಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ವ್ಯಕ್ತಿಯೊಬ್ಬರಿಗೆ ಅನಾರೋಗ್ಯ ಉಂಟಾಗಿದ್ದು, ತುರ್ತು ಆಸ್ಪತ್ರೆಗೆ (Hospital) ಸೇರಿಸಬೇಕಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಲು ಅಂಬುಲೆನ್ಸ್ ಲಭ್ಯವಿರಲಿಲ್ಲ. ಇದರಿಂದಾಗಿ ಆ ರೋಗಿಯನ್ನು ಆತನ 6 ವರ್ಷದ ಮಗ ತಳ್ಳುಗಾಡಿಯಲ್ಲಿ ಮಲಗಿಸಿ ಅವರನ್ನು ತಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement
Advertisement
ವೀಡಿಯೋದಲ್ಲಿ ಏನಿದೆ?: ನೀಲಿ ಬಣ್ಣದ ಶರ್ಟ್ ಹಾಗೂ ಜೀನ್ಸ್ ಧರಿಸಿರುವ ಬಾಲಕನೊಬ್ಬ ತನ್ನ ತಂದೆಯನ್ನು ತಳ್ಳು ಗಾಡಿಯಲ್ಲಿ ಮಲಗಿಸಿ 3 ಕಿ.ಮೀವರೆಗೆ ತಳ್ಳಿಕೊಂಡು ಕರೆದೊಯ್ದಿದ್ದಾನೆ. ಬಾಲಕನ ತಾಯಿಯು ಇದ್ದು, ಆಕೆ ಇನ್ನೊಂದು ತುದಿಯಲ್ಲಿ ತಳ್ಳುಗಾಡಿಯನ್ನು ತಳ್ಳುತ್ತಿದ್ದಾರೆ.
Advertisement
ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಈ ಘಟನೆ ನಡೆದಿದೆ. ಷಾ ಕುಟುಂಬದವರು ಅಂಬುಲೆನ್ಸ್‌ಗಾಗಿ ಸರ್ಕಾರಿ ಆಸ್ಪತ್ರೆಗಾಗಿ ಕರೆ ಮಾಡಿದ್ದಾರೆ. ಆದರೆ ಅಂಬುಲೆನ್ಸ್ 20 ನಿಮಿಷಗಳ ಕಾಲ ಕಾದಿದ್ದಾರೆ. ಆದರೂ ಅಂಬುಲೆನ್ಸ್ ಬಾರದಿದ್ದರಿಂದ ಷಾ ಕುಟುಂಬವು ಆತನನ್ನು ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿತು. ಇದನ್ನೂ ಓದಿ: ಕೆನಡಾ ವಾಯುನೆಲೆಯಲ್ಲಿ ಅಪರಿಚಿತ ವಸ್ತುವನ್ನು ಹೊಡೆದುರುಳಿಸಿದ US ಫೈಟರ್ ಜೆಟ್
Advertisement
ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಆಗುತ್ತಿದ್ದಂತೆ, ಅಲ್ಲಿನ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ತನಿಖೆಗೆ ಆದೇಶಿಸಿದೆ. ಇದನ್ನೂ ಓದಿ: ಜೆಡಿಎಸ್ ಶಾಸಕ ಶಿವಲಿಂಗೇಗೌಡ 100% ಕಾಂಗ್ರೆಸ್ ಸೇರ್ಪಡೆಯಾಗ್ತಾರೆ: ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k