ಮನಿಲಾ: ಫಿಲಿಪೀನ್ಸ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 11 ವರ್ಷದ ಬಾಲಕನೊಬ್ಬ ಫ್ರಿಡ್ಜ್‌ನೊಳಗೆ ಇದ್ದು ಪವಾಡ ರೀತಿಯಲ್ಲಿ ಬದುಕುಳಿದಿದ್ದಾನೆ.
ಸಿ.ಜೆ.ಜಸ್ಮೆ(11) ಬದುಕುಳಿದ ಬಾಲಕ. ಭಾರೀ ಬಿರುಗಾಳಿಯಿಂದ ಭೂ ಕುಸಿತ ಸಂಭವಿಸಿತ್ತು. ಆ ವೇಳೆಗೆ ಜಸ್ಮೆ ತನ್ನ ಕುಟುಂಬದೊಂದಿಗೆ ಮನೆಯಲ್ಲಿದ್ದ. ಆದರೆ ಭೂಕುಸಿತದಿಂದಾಗಿ ಆತ ಫ್ರಿಡ್ಜ್‌ನೊಳಗೆ ಕುಳಿತುಕೊಂಡಿದ್ದ. ಸತತ 20 ಗಂಟೆಗಳ ನಂತರ ಅಧಿಕಾರಿಗಳು ಕಾರ್ಯಾಚರಣೆ ಮಾಡುವಾಗ ಸಿಕ್ಕಿದ್ದಾನೆ.
Advertisement
Advertisement
ಚಂಡಮಾರುತದ ಹಿನ್ನೆಲೆಯಲ್ಲಿ ಲೇಯ್ಟ್ ಪ್ರಾಂತ್ಯದಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅವೇಶೇಷಗಳ ಅಡಿಯಲ್ಲಿ ಫ್ರಿಡ್ಜ್ ಸಿಕ್ಕಿದೆ. ಅದನ್ನು ಸಾಗಿಸುವಾಗ ತೂಕ ಹೆಚ್ಚಾಗಿರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ನಂತರ ಬಾಗಿಲು ತೆರೆದಾಗ ಬಾಲಕ ಪ್ರತ್ಯಕ್ಷವಾಗಿದ್ದಾನೆ. ತಕ್ಷಣ ಆತನನ್ನು ಫ್ರೀಡ್ಜ್‌ನಿಂದ ತೆಗೆದು ರಕ್ಷಿಸಿದ್ದಾರೆ. ನಂತರ ಅವನಿಗೆ ನೀರನ್ನು ನೀಡಿ ಉಳಿದವರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಆಗ ಜಸ್ಮೆ ನಾನು ಒಬ್ಬನೇ ಉಳಿದಿದ್ದೇನೆ ಎಂದು ಭಾವುಕನಾದನು. ಇದನ್ನೂ ಓದಿ: ವರ್ಗಾವಣೆ ಆದೇಶ ರದ್ದುಗೊಳಿಸುವಂತೆ 24 ವಿದ್ಯಾರ್ಥಿನಿಯರನ್ನು ಕೂಡಿ ಹಾಕಿದ ಶಿಕ್ಷಕರು
Advertisement
Advertisement
ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಘಟನೆಯಿಂದಾಗಿ ಜಸ್ಮೆಯ ಕಾಲು ಮುರಿದಿದೆ. ಇದರಿಂದಾಗಿ ಆತನನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು. ಇದೀಗ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: 15% ಜನರಿಗಾಗಿ 85% ನಾಗರಿಕರ ಮೂಲಭೂತ ಹಕ್ಕು ಉಲ್ಲಂಘನೆ – ಹಲಾಲ್ ಉತ್ಪನ್ನ ನಿಷೇಧಿಸುವಂತೆ ಸುಪ್ರೀಂನಲ್ಲಿ ಅರ್ಜಿ