– ಹುತ್ತದ ಬಳಿಯೇ ಬಾಲಕನ ವಾಸ್ತವ್ಯ
ಬೆಳಗಾವಿ: ಸರ್ಪಶಾಪದಿಂದಾಗಿ ಬಾಲಕನೊಬ್ಬ ನರಕಯಾತನೆ ಅನುಭವಿಸುತ್ತಿರೋ ಘಟನೆಯೊಂದು ಬೆಳಗಾವಿ ನಡೆದಿರೋ ಬಗ್ಗೆ ಬೆಳಕಿಗೆ ಬಂದಿದೆ.
ಬಾಲಕನ ಕೈ ಹಾವಿನ ಹೆಡೆಯನ್ನೇ ಹೋಲುತ್ತಿದೆ. ಆತನ ಎಡಗೈಯ ಎರಡು ಬೆರಳುಗಳು ಒಂದಾಗಿ ಸರ್ಪದ ಹೆಡೆಯಂತಾಗಿದ್ದು, ಅಚ್ಚರಿ ಹುಟ್ಟಿಸಿದೆ. ಕನಸಲ್ಲಿ ಹಾವು ಬರುತ್ತೆ ಅಂತಾ ಬಾಲಕ ಒದ್ದಾಡುತ್ತಾನೆ. ಅಲ್ಲದೇ ರಾತ್ರೋರಾತ್ರಿ ಹುತ್ತದ ಬಳಿ ಕುಳಿತಿರುತ್ತಾನೆ. ಯಾವುದೇ ಆಸ್ಪತ್ರೆಗೆ ಕರೆದೊಯ್ದರೂ ಪರಿಹಾರ ಸಿಕ್ಕಿಲ್ಲ. ನಾಗರಹಾವನ್ನು ಮುಟ್ಟಿದ್ರೂ ಈತನಿಗೆ ಕಚ್ಚೋದಿಲ್ಲ. ಶಾಲೆಯಲ್ಲಿ ಫ್ರೆಂಡ್ಸ್ ಜೊತೆ ಇರಬೇಕಾದ ಬಾಲಕನಿಗೆ ಇದೆಂಥಾ ಶಾಪ ಅನ್ನೋ ಪ್ರಶ್ನೆಯೊಂದು ಇದೀಗ ಕಾಡುತ್ತಿದೆ.
Advertisement
Advertisement
ಜಿಲ್ಲೆಯ ಪೂಜೇರಿ ಕುಟುಂಬಕ್ಕೆ ತಲೆ ತಲಾಂತರಗಳಿಂದ ಸರ್ಪದ ಶಾಪವಿದೆಯಂತೆ. ಹಲವಾರು ಆಸ್ಪತ್ರೆಗಳಿಗೆ ಹೋದರೂ ಇದಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ಪೂಜೇರಿ ಕುಟುಂಬದವರ ಹೇಳುತ್ತಾರೆ. ಈ ಸಮಸ್ಯೆಯಿಂದ ಬಾಲಕ ತನ್ನ ವಿದ್ಯಾಭ್ಯಾಸವನ್ನೂ ಮೊಟಕುಗೊಳಿಸಿದ್ದಾನೆ. ಒಂದೆಡೆ ಕಿತ್ತು ತಿನ್ನುವ ಬಡತನ ಇನ್ನೊಂದೆಡೆ ಬಾಲಕನ ಸಮಸ್ಯೆ ಪಾಲಕರ ನಿದ್ದೆಗೆಡಿಸಿದೆ.
Advertisement
ರಾತ್ರಿ ನನ್ನ ಕನಸಲ್ಲಿ ಹಾವು ಬರುತ್ತದೆ. ಬಳಿಕ ಹುತ್ತದ ಬಳಿ ಬಂದು ಕುಳಿತರೆ ಸಮಾಧಾನವಾಗುತ್ತದೆ. ನಾನು ಸಣ್ಣ ಇರುವಾಗಿಂದಲೂ ಇದೆ. ತಲೆತಲಾಂತರದಿಂದ ಈ ದೋಷ ನಮಗೆ ಇದೆ ಅಂತ ಬಾಲಕ ತಿಳಿಸಿದ್ದಾನೆ.
Advertisement
ತಲೆತಲಾಂತರದ ಶಾಪ ಇದಾಗಿದ್ದು, ಈ ಮನೆಯಲ್ಲಿ ಪೂರ್ವಜರು ಹಾವನ್ನು ಹೊಡೆದಿದ್ದಾರಂತೆ. ಆ ಬಳಿಕದಿಂದ ಹಾವು ಮನೆಯಲ್ಲೇ ಇರುತ್ತಿತ್ತಂತೆ. ಹಾವಿನ ಮೇಲೆ ಹಾಲಿನ ಪಾತ್ರೆ ಇಟ್ಟು ಸಾಯಿಸಿದ್ದರಂತೆ. ಹೀಗಾಗಿ ಈ ಕುಟುಂಬಕ್ಕೆ ದೋಷ ಅಂಟಿಕೊಂಡಿದೆ. ಸದ್ಯ ಬಾಲಕನ ಈ ಸಮಸ್ಯೆಯಿಂದ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ ಅಂತ ತಿಳಿದುಬಂದಿದೆ. ಸದ್ಯ ಬಾಲಕನ ಕುಟುಂಬಸ್ಥರು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಅಥವಾ ತಮಿಳುನಾಡಿನ ದೇವಾಲಯಕ್ಕೆ ತೆರಳಿ ಪೂಜೆ-ಪುನಸ್ಕಾರಗಳನ್ನು ಮಾಡುವ ಯೋಚನೆ ಮಾಡಿದ್ದಾರೆ.
ಬಾಲಕ ಇತರ ಮಕ್ಕಳಂತೆ ಚಟುವಟಿಕೆಯಿಂದರಲ್ಲ. ಬದಲಾಗಿ ತನ್ನ ಪಾಡಿಗೆ ತಾನು ಕುಳಿತುಕೊಂಡಿರುತ್ತಾನೆ. ಕಣ್ಣಲ್ಲಿ ನೀರು ಬರುತ್ತಿರುತ್ತದೆ. ಅಲ್ಲದೇ ಮಲಗುವ ಸಂದರ್ಭದಲ್ಲೂ ಹಾವಿನ ರೀತಿಯೇ ಮಲಗಿರುತ್ತಾನೆ. ಒಟ್ಟಿನಲ್ಲಿ ಬಾಲಕನ ಈ ಸಮಸ್ಯೆಯಿಂದ ಆದಷ್ಟು ಬೇಗ ಮುಕ್ತವಾಗಲಿ ಎಂಬುದೇ ಸ್ಥಳೀಯರ ಆಶಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv