ರಾಮನಗರ: ಶಾಲಾ ವಾಹನದ ಹಿಂಬದಿಯ ಚಕ್ರಕ್ಕೆ ಸಿಲುಕಿ ಐದು ವರ್ಷದ ಬಾಲಕನೋರ್ವ ಮೃತಪಟ್ಟಿರುವ ದಾರುಣ ಘಟನೆ ಚನ್ನಪಟ್ಟಣ ತಾಲೂಕಿನ ವಿರುಪಾಕ್ಷಿಪುರದಲ್ಲಿ ನಡೆದಿದೆ.
ವಿರೂಪಾಕ್ಷಿಪುರ ನಿವಾಸಿ ಜಯಸ್ವಾಮಿ ಹಾಗೂ ನಾಗಮಣಿ ದಂಪತಿಯ ಪುತ್ರ ಧನುಷ್ ಗೌಡ ಮೃತ ದುರ್ದೈವಿ. ಚನ್ನಪಟ್ಟಣದ ದಿವ್ಯ ಚೇತನ ಶಾಲೆಯಲ್ಲಿ ಧನುಷ್ ಎಲ್‍ಕೆಜಿ ಯಲ್ಲಿ ಓದುತ್ತಿದ್ದ.
ಇಂದು ಶಾಲೆಯಿಂದ ಹೊರಟ ಧನುಷ್ ನನ್ನು ಗ್ರಾಮದಲ್ಲಿ ಇಳಿಸಿದ ಅದೇ ಶಾಲೆಯ ಬಸ್ ಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಬಸ್ ನಿಂದ ಇಳಿದು ಹಿಂಬದಿ ನಿಂತಿದ್ದಾಗ ಬಸ್ ಆತನ ಮೇಲೆ ಹರಿದಿದೆ.
ಘಟನೆ ಸಂಬಂಧ ಅಕ್ಕೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.