ಭೋಪಾಲ್: 11 ವರ್ಷದ ಬಾಲಕನೊಬ್ಬನಿಗೆ (Boy) ಥಳಿಸಿ, ಬೆತ್ತಲಾಗಿಸಿ ಧಾರ್ಮಿಕ ಘೋಷಣೆಗಳನ್ನು (Religious Slogans) ಕೂಗುವಂತೆ ಒತ್ತಾಯಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ನಡೆದಿದೆ.
ಇಂದೋರ್‌ನ ನಿಪಾನಿಯಾ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಸಂತ್ರಸ್ತ ಬಾಲಕನ ಪ್ರಕಾರ ಆತ ಸ್ಟಾರ್ ಸ್ಕ್ವೇರ್ ಬಳಿ ಆಟವಾಡುತ್ತಿದ್ದಾಗ ಆರೋಪಿಗಳು ಆತನ ಬಳಿಗೆ ಬಂದಿದ್ದು, ಕಡಿಮೆ ಬೆಲೆಗೆ ಆಟಿಕೆಗಳನ್ನು ನೀಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಆಟಿಕೆಗಳನ್ನು ಪಡೆಯುವ ಆಸೆಯಲ್ಲಿ ಬಾಲಕ ಆರೋಪಿಗಳೊಂದಿಗೆ ತೆರಳಿದ್ದಾನೆ.
Advertisement
Advertisement
ಕಿಡಿಗೇಡಿಗಳು ಬಾಲಕನನ್ನು ಮಹಾಲಕ್ಷ್ಮಿ ನಗರದ ಬಳಿ ಕರೆದೊಯ್ದು ಆತನಿಗೆ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದಾರೆ. ಬಳಿಕ ಆತನಿಗೆ ಥಳಿಸಿ, ಬೆತ್ತಲಾಗಿಸಿದ್ದಾರೆ. ಮಾತ್ರವಲ್ಲದೇ ಈ ಘಟನೆಯನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಬಳಿಕ ಬಾಲಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹೋಗಿ ತನ್ನ ಕುಟುಂಬದವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಬಗ್ಗೆ ಆತನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಏ.17 ಇಲ್ಲವೇ 18 ರಂದು ನಾಮಪತ್ರ ಸಲ್ಲಿಸುತ್ತೇನೆ: ಲಕ್ಷ್ಮಣ ಸವದಿ
Advertisement
ಬಾಲಕನಿಗೆ ಥಳಿಸಿರುವ ಆರೋಪಿಗಳು ಕೂಡಾ ಅಪ್ರಾಪ್ತರು ಎಂಬುದು ತಿಳಿದುಬಂದಿದೆ. ಪೊಲೀಸರು ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆರೋಪಿಗಳ ವಿರುದ್ಧ ಅಪಹರಣ, ಸ್ವಯಂಪ್ರೇರಿತವಾಗಿ ಗಾಯಗೊಳಿಸುವಿಕೆ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Advertisement
ಇದೀಗ ಘಟನೆ ಬೆಳಕಿಗೆ ಬರುತ್ತಲೇ ಸ್ಥಳೀಯವಾಗಿ ತೀವ್ರ ಆಕ್ರೋಶ ಕೇಳಿಬಂದಿದೆ. ಸಂತ್ರಸ್ತ ಬಾಲಕನಿಗೆ ನ್ಯಾಯ ಒದಗಿಸಿಕೊಡುವಂತೆ ಹಲವರು ಆಗ್ರಹಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೋವನ್ನು ಹಂಚಿಕೊಳ್ಳದಂತೆ ಜನರಿಗೆ ಮನವಿ ಮಾಡಲಾಗುತ್ತಿದೆ. ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಸೋಮಣ್ಣ – ಘೋಷಣೆ ಕೂಗಿದ ಅಭಿಮಾನಿಗಳು