ವಾಷಿಂಗ್ಟನ್: 6 ವರ್ಷದ ಬಾಲಕನೊಬ್ಬ (Boy) ಶಿಕ್ಷಕಿಗೆ (Teacher) ಗುಂಡು ಹಾರಿಸಿದ ಘಟನೆ ಪೂರ್ವ ಅಮೆರಿಕದ (America) ವರ್ಜೀನಿಯಾ ರಾಜ್ಯದ ಪ್ರಾಥಮಿಕ ಶಾಲೆಯಲ್ಲಿ (School) ನಡೆದಿದೆ.
ರಿಚ್ನೆಕ್ ಎಲಿಮೆಂಟರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆ ವೇಳೆ ಶಿಕ್ಷಕಿಗೆ ಗುಂಡು ತಗಲಿದ್ದು, ಶಿಕ್ಷಕಿಯ ಸ್ಥಿತಿ ಗಂಭೀರವಾಗಿದೆ. ಜೊತೆಗೆ ತರಗತಿಯಲ್ಲಿದ್ದ ಯಾವುದೇ ವಿದ್ಯಾರ್ಥಿಗಳಿಗೂ ತೊಂದರೆ ಆಗಿಲ್ಲ.
Advertisement
Advertisement
ಈ ಬಗ್ಗೆ ಪೊಲೀಸ್ ಅಧಿಕಾರಿ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಬಾಲಕನು ಆಕಸ್ಮಿಕವಾಗಿ ನಡೆಸಿದ ಗುಂಡಿನ ದಾಳಿಯಲ್ಲ ಎಂದು ತಿಳಿಸಿದರು.
Advertisement
ಶಾಲೆಯ ಪ್ರಾಂಶುಪಾಲರು ಮಾತನಾಡಿ, ವಿದ್ಯಾರ್ಥಿಗಳಿಗೆ ಬಂದೂಕುಗಳು ಲಭ್ಯವಾಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಇಂದಿನಿಂದ 7 ದಿನಗಳ ಕಾಲ ಚಿಕ್ಕಬಳ್ಳಾಪುರ ಉತ್ಸವ- ಸುಧಾಕರ್ ಮುಂದಾಳತ್ವದಲ್ಲಿ ಭರ್ಜರಿ ಸಿದ್ಧತೆ
Advertisement
ಶಾಲೆಯ ಗುಂಡಿನ ದಾಳಿಗಳು ಅಮೆರಿಕದಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಕಳೆದ ಮೇ ತಿಂಗಳಲ್ಲಿ ಟೆಕ್ಸಾಸ್‍ನ ಉವಾಲ್ಡೆಯಲ್ಲಿ 18 ವರ್ಷ ವಯಸ್ಸಿನ ಬಂದೂಕುಧಾರಿಯಿಂದ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಹತ್ಯೆಗೀಡಾಗಿದ್ದರು. ಇದನ್ನೂ ಓದಿ: ಕಾಂತಾರ ಸಿನಿಮಾ ಮಾದರಿ ಘಟನೆ- ಕೋರ್ಟ್‍ನಲ್ಲಿ ನೋಡಿಕೊಳ್ತೇನೆಂದ ದೂರುದಾರ ಸಾವು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k