ನವದೆಹಲಿ: 11ನೇ ತರಗತಿ ವಿದ್ಯಾರ್ಥಿಯೊಬ್ಬ 10ನೇ ಕ್ಲಾಸ್ ಬಾಲಕಿಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆಕೆಯ ಸ್ಥಿತಿ ಗಂಭಿರವಾಗಿದೆ.
ರಾಷ್ಟ್ರ ರಾಜಧಾನಿಯ ಸೆಕ್ಟರ್ 4 ಸಿ ಪ್ರದೇಶದಲ್ಲಿ ಬುಧವಾರದಂದು ಈ ಘಟನೆ ನಡೆದಿದೆ. ಇಲ್ಲಿನ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರೋ ವಿದ್ಯಾರ್ಥಿನಿ ಹಾಗೂ 11ನೇ ತರಗತಿಯ ವಿದ್ಯಾರ್ಥಿ ನಡುವೆ ವಾಗ್ವಾದ ನಡೆದಿದ್ದು, ಆತ ವಿದ್ಯಾರ್ಥಿನಿಯ ತಲೆಗೆ ಗುಂಡು ಹಾರಿಸಿದ್ದಾನೆ.
Advertisement
ಈ ಇಬ್ಬರೂ ಸಂಜೆ ಕೋಚಿಂಗ್ ಸೆಂಟರ್‍ನಿಂದ ಸ್ಕೂಟಿಯಲ್ಲಿ ಹಿಂದಿರುತ್ತಿದ್ದರು. ಈ ವೇಳೆ ವಸುಂಧರಾ ಬಳಿಯ ವಾರ್ತಾಲೋಕ್ ಸೊಸೈಟಿ ಬಳಿ ವಿದ್ಯಾರ್ಥಿ ತನ್ನ ತಂದೆಯ ಲೈಸೆನ್ಸ್ಡ್ ಗನ್‍ನಿಂದ ವಿದ್ಯಾರ್ಥಿನಿ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
Advertisement
Advertisement
ಇಬ್ಬರನ್ನೂ ಸ್ಥಳೀಯ ಅಸ್ಪತ್ರೆಗೆ ದಾಖಲಿಸಲಾಗಿದ್ದು, ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಪಿಸ್ತೂಲ್ ವಶಪಡಿಸಿಕೊಂಡಿದ್ದು, ವಿದ್ಯಾರ್ಥಿಯ ತಂದೆಯನ್ನು ವಿಚಾರಣೆಗೆ ಕರೆದಿದ್ದಾರೆ. ವಿದ್ಯಾರ್ಥಿನಿಯ ಸಂಬಂಧಿಕರೊಬ್ಬರು ನೀಡಿದ ದೂರಿನನ್ವಯ 11ನೇ ಕ್ಲಾಸ್ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಸಿಂಗ್ ಹೇಳಿದ್ದಾರೆ.
Advertisement
ಮತ್ತೊಂದು ವರದಿಯ ಪ್ರಕಾರ ಈ ಇಬ್ಬರೂ ಪ್ರೀತಿಸುತ್ತಿದ್ದು, ಜಗಳವಾದ ಕಾರಣ ಯುವಕ ಅಕೆಯ ಮೇಲೆ ಶೂಟ್ ಮಾಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿ ತನ್ನ ತಂದೆಯ ಪಿಸ್ತೂಲ್ ಬ್ಯಾಗ್‍ನಲ್ಲಿ ಇಟ್ಟುಕೊಂಡಿದ್ದು, ಜಗಳವಾದಾಗ ಅದನ್ನ ತೆಗೆದು ಗುಂಡು ಹಾರಿಸಿದ್ದಾನೆ.
ಆದ್ರೆ ನಮ್ಮ ಮಗಳಿಗೂ ಆ ಹುಡುಗನಿಗೂ ಸಂಬಂಧವಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದೇವೆ ಎಂದು ವಿದ್ಯಾರ್ಥಿನಿಯ ತಂದೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ಆತ ಗನ್ ತೋರಿಸಿ ಬೆದರಿಸಿ ನಮ್ಮ ಮಗಳನ್ನ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಈ ಕೃತ್ಯವೆಸಗಿದ್ದಾನೆ. ನಂತರ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ನಾವು ನಮ್ಮ ಮಗಳಿಗೆ ಫೋನ್ ಮಾಡುತ್ತಲೇ ಇದ್ದೆವು. ಸಾಕಷ್ಟು ಬಾರಿ ಕರೆ ಮಾಡಿದ ನಂತರ ಆತ ರಿಸೀವ್ ಮಾಡಿ, ಗುಂಡು ಹಾರಿಸಿರುವುದಾಗಿ ಹೇಳಿದ. ನಂತರ ನಮ್ಮ ಯಾವುದೇ ಕರೆಗಳನ್ನ ಸ್ವೀಕರಿಸಲಿಲ್ಲ. ಒಂದು ಗಂಟೆಯ ಬಳಿಕ ತನ್ನ ಸ್ನೇಹಿತನ ಜೊತೆ ಘಟನೆ ನಡೆದ ಸ್ಥಳಕ್ಕೆ ಬಂದಿದ್ದ. ಆತನ ತಲೆಯಿಂದ ರಕ್ತಸ್ರಾವವಾಗುತ್ತಿತ್ತು. ಆಗ ಪೊಲೀಸರು ಆತನನ್ನು ವಶಕ್ಕೆ ಪಡೆದರು ಎಂದು ಹೇಳಿದ್ದಾರೆ.
ಬಳಿಕ ಹುಡುಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಬುಲೆಟ್ ಹೊರತೆಗೆಯಲಾಗಿದೆ. ನಂತರ ಐಸಿಯುಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.