ರಾಯಚೂರು: ಯಾದಗಿರಿಯ ನಾಗರಬೆಟ್ಟದಲ್ಲಿ ಅಪಹರಣಕ್ಕೊಳಗಾಗಿದ್ದ ಬಾಲಕನನ್ನ ಅಪಹರಣಕಾರರು ರಾಯಚೂರಿನ ರೈಲ್ವೇ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ಇಂದು ಬೆಳಗಿನ ಜಾವ ಯಾದಗಿರಿಯ ನಾರಾಯಣಪುರದಿಂದ ನಾಗರಬೆಟ್ಟಕ್ಕೆ ಶಾಲೆಗೆ ತೆರಳುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಶರತ್‍ನನ್ನ ನಾಲ್ಕು ಜನ ಓಮಿನಿ ವ್ಯಾನ್‍ನಲ್ಲಿ ಅಪಹರಿಸಿದ್ದರು. ಕೈಕಾಲಿಗೆ ಹಗ್ಗ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ರಾಯಚೂರು ವರೆಗೆ ಶರತ್‍ನನ್ನ ಕರೆದುಕೊಂಡು ಬಂದಿದ್ದಾರೆ. ಆದ್ರೆ ಅದೇನಾಯಿತೋ ರಾಯಚೂರು ರೈಲ್ವೇ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾರೆ ಅಂತ ಬಾಲಕ ಶರತ್ ಹೇಳಿದ್ದಾನೆ.
Advertisement
ಆಟೋ ಚಾಲಕನೊಬ್ಬನ ಸಹಾಯದಿಂದ ಪರಿಚಿತರೊಬ್ಬರ ವಿಳಾಸಕ್ಕೆ ಶರತ್ ಬಂದಿದ್ದಾನೆ. ಆದ್ರೆ ನಿಜಕ್ಕೂ ಅಪಹರಣಕಾರರು ಬಾಲಕನನ್ನ ಅಪಹರಿಸಿದ್ದರಾ ಅನ್ನೋ ಅನುಮಾನ ಕೂಡ ಮೂಡಿದೆ.
Advertisement
Advertisement
ಶರತ್ ತಂದೆ ಶ್ರೀನಿವಾಸ್ ಗುತ್ತಿಗೆದಾರರಾಗಿದ್ದು ಸ್ಥಿತಿವಂತರಿದ್ದಾರೆ. ಆದ್ರೆ ಯಾಕೆ ಅಪಹರಿಸಿದರು, ಯಾಕೆ ಬಿಟ್ಟು ಹೋದರು? ಅಪಹರಿಸಿದವರು ಯಾರು? ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಒಟ್ನಲ್ಲಿ ಮಗ ಕಾಣೆಯಾಗಿದ್ದರಿಂದ ಗಾಬರಿಗೊಂಡಿದ್ದ ಶರತ್ ಪೋಷಕರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.